ಕಣ್ಣಿನ ಆರೋಗ್ಯಕ್ಕೆ ಈ ಸಿಂಪಲ್ ವ್ಯಾಯಾಮ ಮಾಡಿ..

By Suvarna NewsFirst Published Dec 5, 2018, 12:46 PM IST
Highlights

ಸದಾ ಸಿಸ್ಟಮ್ ಮುಂದೆ ಕೂರುವ ಮಂದಿಗೆ ಕಣ್ಣು ಬೇಗ ಆಯಾಸಗೊಳ್ಳುತ್ತದೆ. ಇದರಿಂದಲೇ ತಲೆನೋವು, ಕಣ್ಣುರಿ, ಕತ್ತು ನೋವು...ಹೀಗೆ ನೂರೆಂಟು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್.

ಕಣ್ಣು ವಿವಿಧ ಕಾರಣಗಳಿಗೆ ಆಯಾಸಗೊಳ್ಳುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ, ಹತ್ತು ಹಲವು ಇತರೆ ಸಣ್ಣ ಪುಟ್ಟ ಸಮಸ್ಯೆಗಳೂ ಶಮನವಾಗುತ್ತದೆ. ಏನಿವು ಸಿಂಪಲ್ ಟಿಪ್ಸ್.

- ಮುಂಜಾನೆಯ ಹಾಗೂ ಸಂಜೆಯ ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿ ಒದಗಿಸುತ್ತದೆ. ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಒಳಿತು. ಈ ಕಿರಣಗಳು ಕಣ್ಣಿನ ಮೇಲೆ ಬೀಳುವುದರಿಂದ ಸ್ನಾಯುಗಳು ಬಲಗೊಂಡು, ದೃಷ್ಟಿ ಉತ್ತಮಗೊಳ್ಳುತ್ತದೆ. 
- ಎರಡೂ ಅಂಗೈಗಳನ್ನು ಒಂದಕ್ಕೊಂದು ಉಜ್ಜಿ, ಬರುವ ಶಾಖವನ್ನು ಕಣ್ಣುಗಳ ಮೇಲಿಡಬೇಕು. ಕಣ್ಣುಗಳ ಆಯಾಸವನ್ನು ಇದು ಕಡಿಮೆ ಮಾಡಿ, ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. 
- ಸದಾ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವವರಾದರೆ, ಆಗಾಗ ಕಣ್ಣುಗಳನ್ನು ಕೆಲವು ಸೆಕೆಂಡ್‌ಗಳ ಕಾಲ ನಿರಂತರವಾಗಿ ಮಿಟುಕಿಸುತ್ತಿರಬೇಕು. ಆಯಾಸ ತೊಲಗಿಸಲು ಇದು ನೆರವಾಗುತ್ತದೆ. ಕಣ್ಣು ನೋವನ್ನೂ ಇದು ನಿವಾರಿಸುತ್ತದೆ. 
- ಮೊಬೈಲ್, ಕಂಪ್ಯೂಟರ್...ಹೀಗೆ ಗ್ಯಾಜೆಟ್ ಬಳಕೆಯಿಂದ ಕಣ್ಣು ಹಾಳಾಗುವುದು ಬೇಗ. ವರ್ಷಕ್ಕೊಮ್ಮೆಯಾದರೂ ಕಣ್ಣನ್ನು ತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು.
- ಆಗಾಗ ಕಣ್ಣನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳುತ್ತಿರಬೇಕು. 
- ಹುಬ್ಬಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒತ್ತಡ ನಿವಾರಣೆಯಾಗುತ್ತದೆ. ಕಣ್ಣಿಗೂ ತಂಪು.
- ನೆತ್ತಿಗೆ ಹರಳೆಣ್ಣೆ ಹಾಕ್ಕೊಂಡು ತಲೆ ಸ್ನಾನ ಮಾಡಿದರೂ, ದೇಹವನ್ನು ತಂಪಾಗಿಡುವ ಜತೆಗೆ ಕಣ್ಣನ್ನೂ ತಂಪಾಗಿಡುತ್ತದೆ.
-ಸಮಯ ಸಿಕ್ಕಾಗಲೆಲ್ಲಾ ಕಣ್ಣಿನ ಗುಡ್ಡೆಯನ್ನು ಮೇಲಿಂದ, ಕೆಳಕ್ಕೆ, ಎಡದಿಂದ-ಬಲಕ್ಕೆ ಚಲಿಸುತ್ತಿರಬೇಕು.
- ಲೋಳೆಸರ, ಮತ್ತಿಸೊಪ್ಪು ಅಥವಾ ದಾಸವಾಳದ ಸೊಪ್ಪಿನ ರಸವನ್ನು ತಲೆಗೆ ಹಚ್ಚಿಕೊಂಡರೂ ಕಣ್ಣಿನ ಆರೋಗ್ಯಕ್ಕೆ ಒಳಿತು.
- ಸಾಧ್ಯವಾದಷ್ಟು ಮನೆಯಲ್ಲಿಯೇ ಮಾಡಿದ ಕಣ್ಣು ಕಪ್ಪನ್ನು ಹಚ್ಚಿ. ರಾಸಾಯನಿಕ ವಸ್ತುಗಳು ತುರಿಕೆಯಂಥ ಸಮಸ್ಯೆಯನ್ನು ತಂದೊಡ್ಡುವುದಲ್ಲದೇ, ಕಣ್ಣಿಗೆ ಆಯಾಸ ತರುತ್ತದೆ.

ಮನೆ ಮದ್ದಿಗೆ ಇಲ್ಲಿ ಕ್ಲಿಕ್ ಮಾಡಿ
 

click me!