
ಮಳೆಗಾಲದಲ್ಲಿ, ಕೀಟಗಳು ಹೆಚ್ಚಾಗಿ ಮನೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವು ತೆವಳುತ್ತಿದ್ದರೆ, ಇನ್ನು ಕೆಲವು ಹಾರುತ್ತಿರುತ್ತವೆ. ಅವುಗಳಲ್ಲಿ ಕೆಲವು ಬೆಳಕಿನ ಸುತ್ತ ಸುತ್ತಿತ್ತಿರುತ್ತವೆ. ಈ ಕೀಟಗಳು ಬೆಳಕಿಗೆ ಆಕರ್ಷಿತವಾಗಿ ಮನೆಯ ಸುತ್ತಲೂ ಸುಳಿದಾಡಲು ಪ್ರಾರಂಭಿಸುತ್ತವೆ. ಲೈಟ್ ಆನ್ ಮಾಡಿದ್ರೆ ಸಾಕು ಕೀಟಗಳು ಒಂದೇ ಸಲಕ್ಕೆ ಮುತ್ತಿಗೆ ಹಾಕುತ್ತವೆ. ಈ ಕೀಟಗಳು ಹೆಚ್ಚಾಗಿ ಆಹಾರಕ್ಕೆ ಬಿದ್ದು, ಕೋಣೆಗಳೆಲ್ಲಾ ಅದರ ರೆಕ್ಕೆ ಹರಡಿಕೊಂಡು, ಸಮಸ್ಯೆಯನ್ನುಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಸುಲಭವಾಗಿ ನಿವಾರಣೆ ಮಾಡಲು ಇಲ್ಲಿದೆ ಟ್ರಿಕ್ಸ್.
ನಿಮ್ಮ ಮನೆಯ ಎಲ್ಲಾ ಲೈಟ್ ಆಫ್ ಮಾಡಿ, ಒಂದೇ ಒಂದು ದೀಪವನ್ನು ಆನ್ ಮಾಡಿ. ಉದಾಹರಣೆಗೆ, ನೀವು ಬಾಲ್ಕನಿಯಲ್ಲಿ ದೀಪವನ್ನು ಆನ್ ಮಾಡಿ. ಕೀಟಗಳು ಎಲ್ಲಾ ಕಡೆಯಿಂದ ಬಂದು ಅಲ್ಲಿ ಸೇರುತ್ತವೆ. ಆ ಲೈಟ್ ಕೆಳಗೆ ನೀರಿನಿಂದ ತುಂಬಿದ ಬಕೆಟ್ ಅಥವಾ ಟಬ್ ಇರಿಸಿ ಮತ್ತು ನೀರಿಗೆ ಸ್ವಲ್ಪ ಲಿಕ್ವಿಡ್ ಸೋಪ್ ಅಥವಾ ಡಿಟರ್ಜೆಂಟ್ ಸೇರಿಸಿ. ಕೀಟಗಳು ನೀರಿನಲ್ಲಿ ಬೆಳಕಿನ ಪ್ರತಿಬಿಂಬ ಕಂಡು ನೀರಿನಲ್ಲಿ ಬೀಳುತ್ತವೆ, ಸೋಪ್ ಕೀಟವನ್ನು ನೀರಿನಿಂದ ಹೊರ ಹೋಗದಂತೆ ತಡೆಯುತ್ತದೆ.
ದೀಪಗಳ ಬಣ್ಣವನ್ನು ಬದಲಾಯಿಸಿ
ಮಳೆ ಕೀಟಗಳು ಹೆಚ್ಚಾಗಿ ಬಿಳಿ ಅಥವಾ ನೀಲಿ ಬೆಳಕಿಗೆ ಆಕರ್ಷಿತವಾಗುತ್ತವೆ. ಆದ್ದರಿಂದ, ನಿಮ್ಮ ಮನೆಯಲ್ಲಿನ ದೀಪಗಳ ಬಣ್ಣವನ್ನು ಬದಲಾಯಿಸಿ. ನೀವು ಹಳದಿ ಅಥವಾ ಕಿತ್ತಳೆ ದೀಪಗಳನ್ನು ಬಳಸಬಹುದು.
ಬೇವು ಮತ್ತು ಕರ್ಪೂರ ಸ್ಪ್ರೇ
ಕೀಟಗಳನ್ನು ಓಡಿಸಲು, ನೀವು ಬೇವು ಮತ್ತು ಕರ್ಪೂರದಿಂದ ಮಾಡಿದ ಸ್ಪ್ರೇ ತಯಾರಿಸಬಹುದು. ನೀರಿಗೆ ಬೇವಿನ ಎಣ್ಣೆ ಅಥವಾ ಪುಡಿಮಾಡಿದ ಕರ್ಪೂರವನ್ನು ಸೇರಿಸಿ. ಈ ನೀರನ್ನು ಬಾಗಿಲು, ಕಿಟಕಿಗಳು ಮತ್ತು ದೀಪಗಳ ಸುತ್ತಲೂ ಸಿಂಪಡಿಸಿ. ಬೇವು ಮತ್ತು ಕರ್ಪೂರದ ವಾಸನೆಯು ಕೀಟಗಳನ್ನು ದೂರ ಓಡುವಂತೆ ಮಾಡುತ್ತದೆ.
ಲೈಟ್ ಆಫ್ ಮಾಡಿ
ಸಂಜೆಯ ವೇಳೆ ಕೀಟಗಳು ಮನೆಯೊಳಗೆ ಬಂದರೆ ಸಾಧ್ಯವಾದಷ್ಟು ದೀಪಗಳನ್ನು ಆಫ್ ಮಾಡಿ. ದೀಪಗಳನ್ನು ಆಫ್ ಮಾಡುವುದರಿಂದ ಮನೆಯೊಳಗಿನ ಕೀಟಗಳು ಹೊರಗಿನ ಬೆಳಕನ್ನು ಅರಸಿ ಓಡಿಹೋಗುತ್ತವೆ.
ನಿಮ್ಮ ಮನೆಯೊಳಗೆ ತೇವಾಂಶ ಹೆಚ್ಚಾಗಲು ಬಿಡಬೇಡಿ
ವಿಶೇಷವಾಗಿ ಮರದ ಮೇಲೆ ತೇವಾಂಶವಿದ್ದರೆ ಈ ಕೀಟಗಳು ಮನೆಯತ್ತ ಆಕರ್ಷಿತವಾಗುತ್ತವೆ. ಆದ್ದರಿಂದ, ಮನೆಯನ್ನು ತೇವಾಂಶದಿಂದ ರಕ್ಷಿಸುವುದರಿಂದ ಮಳೆಹುಳುಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.