Pressure Cooker Mistakes: ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡ್ತಿದ್ದೀರಾ? ಹಾಗಿದ್ರೆ ಈ 5 ತಪ್ಪುಗಳನ್ನ ಮಾಡಲೇಬೇಡಿ!

Published : Sep 23, 2026, 06:33 PM IST
Pressure Cooker Cleaning

ಸಾರಾಂಶ

ಪ್ರೆಶರ್ ಕುಕ್ಕರ್ ನಮ್ಮ ಅಡುಗೆ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ, ಕುಕ್ಕರ್ ಅತಿಯಾಗಿ ತುಂಬಿಸುವುದು, ಹೈ ಫ್ಲೇಮ್‌ನಲ್ಲಿ ಬೇಯಿಸುವುದು ಮತ್ತು ಸರಿಯಾಗಿ ನೀರು ಹಾಕದಿರುವಂತಹ ತಪ್ಪುಗಳಿಂದ ಅಡುಗೆಯ ರುಚಿ ಹಾಳಾಗುತ್ತದೆ. ಈ ಸಣ್ಣ ತಪ್ಪುಗಳನ್ನು ತಿದ್ದಿಕೊಂಡರೆ ಅಡುಗೆ ರುಚಿಯಾಗಿರುತ್ತದೆ ಮತ್ತು ಕುಕ್ಕರ್ ಬಾಳಿಕೆ ಬರುತ್ತದೆ.

ಅಡುಗೆ ಬೇಗ ಮತ್ತು ಸುಲಭವಾಗಿ ಆಗ್ಬೇಕು ಅಂದ್ರೆ ಪ್ರೆಶರ್ ಕುಕ್ಕರ್ ಬೇಕೇ ಬೇಕು. ಆದ್ರೆ, ಕುಕ್ಕರ್ ಬಳಸುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಅಡುಗೆ ರುಚಿ ಹಾಳಾಗುತ್ತೆ. ಆ ತಪ್ಪುಗಳು ಯಾವುವು ಅಂತ ಇಲ್ಲಿ ತಿಳಿಯಿರಿ.

ಪ್ರೆಶರ್ ಕುಕ್ಕರ್ ಬಳಸ್ತಾ ಇದ್ದೀರಾ?

ನಮ್ಮ ದೇಶದಲ್ಲಿ ಪ್ರೆಶರ್ ಕುಕ್ಕರ್ ಇಲ್ಲದ ಮನೆಗಳೇ ಇಲ್ಲ. ಪಲಾವ್, ಕಿಚಡಿಯಿಂದ ಹಿಡಿದು ನಾನ್-ವೆಜ್‌ವರೆಗೆ ಎಲ್ಲದಕ್ಕೂ ಕುಕ್ಕರ್ ಬೇಕೇ ಬೇಕು. ಇದು ನಮ್ಮ ಕೆಲಸನ ಸುಲಭ ಮಾಡುತ್ತೆ. ಆದ್ರೆ, ಇದನ್ನ ಬಳಸುವಾಗ ಕೆಲವು ತಪ್ಪುಗಳನ್ನ ಮಾಡಿದ್ರೆ ಅಡುಗೆ ರುಚಿ ಕೆಡುತ್ತೆ, ಜೊತೆಗೆ ಕುಕ್ಕರ್ ಕೂಡ ಬೇಗ ಹಾಳಾಗುತ್ತೆ. ಸರಿಯಾಗಿ ಬಳಸದೇ ಇದ್ರೆ ಪಲಾವ್ ತರಹದ ಅಡುಗೆಗಳು ತೀರಾ ಮೆತ್ತಗಾಗುತ್ತೆ ಅಥವಾ ಸೀದುಹೋಗುತ್ತೆ. ಹೀಗಾಗಬಾರದು ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

1. ಕುಕ್ಕರ್ ತುಂಬಾನೇ ತುಂಬಿಸುವುದು..

ಸಮಯ ಉಳಿಯುತ್ತೆ ಅಂತ ಬಹಳಷ್ಟು ಜನ ಕುಕ್ಕರ್ ತುಂಬಾ ಪದಾರ್ಥಗಳನ್ನ ತುಂಬಿಸ್ತಾರೆ. ಇದರಿಂದ ಒಳಗಡೆ ಹಬೆ ಸರಿಯಾಗಿ ಆಡದೆ ಪಲಾವ್ ಅಥವಾ ಪಲ್ಯಗಳು ಸರಿಯಾಗಿ ಬೇಯೋದಿಲ್ಲ. ಕೆಲವು ಬೆಂದ್ರೆ, ಇನ್ನು ಕೆಲವು ಹಸಿಯಾಗೇ ಉಳಿಯುತ್ತೆ. ಬೇಳೆ ಅಥವಾ ಪಾಸ್ತಾ ಬೇಯಿಸುವಾಗ ಕುಕ್ಕರ್‌ನ ಅರ್ಧದಷ್ಟು ಮಾತ್ರ ತುಂಬಿಸಬೇಕು. ಒಟ್ಟಿಗೆ ತುಂಬಿಸುವ ಬದಲು ಎರಡು ಬಾರಿ ಬೇಯಿಸುವುದು ಒಳ್ಳೆಯದು.

2. ಹಾಲು ಸೇರಿಸುವುದು..

ನಿಮಗೆ ಕ್ರೀಮಿ ಕುರ್ಮಾ, ಪನ್ನೀರ್ ಗ್ರೇವಿ ಇಷ್ಟನಾ? ಹಾಗಿದ್ರೆ ಹುಷಾರು. ಕುಕ್ಕರ್‌ನಲ್ಲಿ ಬೇಯಿಸುವಾಗ ಮೊದಲೇ ಹಾಲು, ಕ್ರೀಮ್ ಅಥವಾ ಮೊಸರು ಹಾಕಿದ್ರೆ ಅದು ಒಡೆದುಹೋಗುವ ಸಾಧ್ಯತೆ ಇರುತ್ತೆ. ಅತಿಯಾದ ಒತ್ತಡ ಮತ್ತು ಶಾಖದಿಂದ ಹಾಲಿನ ಪ್ರೋಟೀನ್ ಹಾಳಾಗಿ ಗ್ರೇವಿ ಒರಟಾಗುತ್ತೆ. ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು, ಸಣ್ಣ ಉರಿಯಲ್ಲಿ ಕುದಿಸುವಾಗ ಹಾಲು ಅಥವಾ ಕ್ರೀಮ್ ಸೇರಿಸಬೇಕು.

3. ಹೈ ಫ್ಲೇಮ್‌ನಲ್ಲಿ ಅಡುಗೆ ಮಾಡುವುದು..

ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಉರಿಯನ್ನ ಜೋರಾಗಿ ಇಡಲೇಬಾರದು. ಉರಿ ಜೋರಾಗಿದ್ರೆ ಒಳಗಿರುವ ಆಹಾರ ಸೀದುಹೋಗುವ ಚಾನ್ಸ್ ಇರುತ್ತೆ. ಜೊತೆಗೆ ಸರಿಯಾಗಿ ಬೇಯೋದಿಲ್ಲ. ಹಾಗಾಗಿ, ಮೀಡಿಯಂ ಫ್ಲೇಮ್‌ನಲ್ಲಿ ಮಾತ್ರ ಅಡುಗೆ ಮಾಡಬೇಕು. ಇದರಿಂದ ಅಡುಗೆ ಹದವಾಗಿ ಬೆಂದು ರುಚಿಯಾಗಿರುತ್ತೆ.

4. ಸಾಕಷ್ಟು ನೀರು ಹಾಕದೇ ಇರುವುದು..

ಪ್ರೆಶರ್ ಕುಕ್ಕರ್ ಹಬೆಯಿಂದ ಕೆಲಸ ಮಾಡುತ್ತೆ. ಹಾಗಾಗಿ ಸಾಕಷ್ಟು ನೀರು ಇಲ್ಲದಿದ್ದರೆ ಅದು ಸರಿಯಾಗಿ ಕೆಲಸ ಮಾಡಲ್ಲ. ಅಷ್ಟೇ ಅಲ್ಲ, ಕುಕ್ಕರ್ ತಳ ಸೀದುಹೋಗಿ ಪಾತ್ರೆ ಹಾಳಾಗುತ್ತೆ. ಯಾವ ಅಡುಗೆಗೆ ಎಷ್ಟು ನೀರು ಬೇಕೋ ಅಷ್ಟೇ ಹಾಕಬೇಕು.

5. ಪ್ರೆಶರ್ ಅನ್ನು ತಪ್ಪಾಗಿ ತೆಗೆಯುವುದು..

ಕುಕ್ಕರ್ ಒಳಗಿನ ಹಬೆಯನ್ನ ನೀವು ಹೇಗೆ ಹೊರಹಾಕ್ತೀರಾ ಅನ್ನೋದರ ಮೇಲೆ ಅಡುಗೆಯ ರುಚಿ ನಿಂತಿರುತ್ತೆ. ಸ್ಟವ್ ಆಫ್ ಮಾಡಿದ ತಕ್ಷಣ ಕುಕ್ಕರ್ ವಿಸಿಲ್ ತೆಗೆಯೋಕೆ ಹೋಗಬೇಡಿ. ಆಫ್ ಮಾಡಿದ ಮೇಲೆ ನ್ಯಾಚುರಲ್ ಆಗಿ ಹಬೆ ಹೋಗುವವರೆಗೆ ಕಾಯಬೇಕು. ಆಗ ಅಡುಗೆಯ ರುಚಿ ಮತ್ತು ಕಂಪು ಹೆಚ್ಚಾಗುತ್ತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪೇಪರ್‌ನಂತೆ ತೆಳುವಾಗಿ, ಹತ್ತಿಯಂತೆ ಮೃದುವಾಗಿ ಬರುವ ಹಳ್ಳಿ ಶೈಲಿಯ ಸಾಫ್ಟ್ ಅಕ್ಕಿ ರೊಟ್ಟಿ ಮಾಡೋ ವಿಧಾನ
Oil cleaning tips : ಪೂರಿ- ಪಕೋಡಾ ಕರಿಯುವಾಗ ಎಣ್ಣೆ ಕಪ್ಪಾಗ್ತಿದ್ರೆ ಈ ಸರಳ ಉಪಾಯ ಮಾಡಿ