
ಮಿಕ್ಸಿ ಅಥವಾ ಕುಕ್ಕರ್ ರಬ್ಬರ್ಗಳು ಅಂದರೆ ಗ್ಯಾಸ್ಕೆಟ್ ಎಷ್ಟೇ ಚೆನ್ನಾಗಿದ್ದರೂ ಆರು ತಿಂಗಳಿಗೆ ಒಮ್ಮೆ ಅದನ್ನು ಬದಲಾಯಿಸಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ನಮ್ಮಲ್ಲಿ ಹಲವರು ಹೀಗೆ ಮಾಡುವುದೇ ಇಲ್ಲ. ರಬ್ಬರ್ ಚೆನ್ನಾಗಿ ಇರಬೇಕಾದರೆ, ಅದನ್ನು ಬದಲಿಸುವ ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ. ಇದೇ ಕಾರಣಕ್ಕೆ ವರ್ಷಗಟ್ಟಲೆ ರಬ್ಬರ್ ಹಾಗೆಯೇ ಇರುತ್ತದೆ. ಇದು ಒಂದೆಡೆಯಾದರೆ ಕೆಲವೊಮ್ಮೆ ಮಿಕ್ಸರ್ ಅಥವಾ ಕುಕ್ಕರ್ ರಬ್ಬರ್ಗಳು ಅತಿ ಶೀಘ್ರದಲ್ಲಿ ಹಾಳಾಗಿ ಬಿಡುತ್ತವೆ. ಅಂದರೆ ತುಂಬಾ ಲೂಸ್ ಆಗಿ ಬಿಡುತ್ತವೆ.
ಮಿಕ್ಸಿಯೇ ಆಗಿರಲಿ, ಕುಕ್ಕರೇ ಆಗಿರಲಿ ಗ್ಯಾಸ್ಕೇಟ್ ಲೂಸ್ ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಇವು ಇಲ್ಲದೇ ಮಿಕ್ಸಿಯನ್ನೂ ಮಾಡುವುದು ಕಷ್ಟ, ಕುಕ್ಕರ್ನಲ್ಲಿ ಪದಾರ್ಥಗಳನ್ನು ಬೇಯಿಸುವುದೂ ಕಷ್ಟ. ಎಷ್ಟೋ ಸಂದರ್ಭಗಳಲ್ಲಿ ಅಡುಗೆ ಮಾಡುವಾಗ ಇದು ತೊಂದರೆ ಕೊಡುವುದು ಇದೆ. ಹೊಸತನ್ನು ತರುವುದು ಕಷ್ಟವಾದರೆ, ಅದನ್ನು ಹುಡುಕಿ ಹೋಗುವುದು ದೊಡ್ಡ ತಲೆನೋವು. ಅದರಲ್ಲಿಯೂ ಅಡುಗೆ ಮಾಡಲು ಟೈಮ್ ಆಗಿದ್ದಾಗ, ಹೊಸ ಗ್ಯಾಸ್ಕೆಟ್ ತರುವುದಾದರೂ ಹೇಗೆ?
ಆದರೆ ಇನ್ನು ಈ ಚಿಂತೆಯನ್ನು ಬಿಟ್ಟುಬಿಡಿ. ಇದಕ್ಕಾಗಿ ಸುಲಭದ ಉಪಾಯ ಇಲ್ಲಿದೆ. ಎರಡೇ ನಿಮಿಷದಲ್ಲಿ ಇದಕ್ಕೆ ಪರಿಹಾರ ಇದೆ. ಒಂದು ಪಾತ್ರೆಯ ತುಂಬ ರಬ್ಬರ್ ಮುಳುಗುವಷ್ಟು ಐಸ್ ಇಡಿ. ಅದಕ್ಕೆ ನೀರು ಹಾಕಿ, ರಬ್ಬರ್ ಅನ್ನು ಎರಡು ನಿಮಿಷ ಅದರಲ್ಲಿ ಮುಳುಗಿಸಿ ಇಡಿ. ಎರಡೇ ನಿಮಿಷಗಳಲ್ಲಿ ರಬ್ಬರ್ ಟೈಟ್ ಆಗುತ್ತದೆ.
ಅದೇ ರೀತಿ ಇನ್ನೊಂದು ಸಮಸ್ಯೆ ಮಿಕ್ಸಿಯ ಜಾರಿನ ಹಿಂಭಾಗದಲ್ಲಿ ಎದುರಾಗುತ್ತದೆ. ಮಿಕ್ಸಿ ಜಾರಿನ ಹಿಂಭಾಗವನ್ನು ಪದೇ ಪದೇ ತೊಳೆಯಬಾರದು ಎನ್ನುತ್ತಾರೆ. ಆದರೆ ಅಲ್ಲಿ ಕೊಳೆ ಕುಳಿತುಕೊಂಡು ಅದನ್ನು ತೊಳೆಯುವುದು ಕಷ್ಟವಾಗುತ್ತದೆ. ಅದಕ್ಕೂ ಸುಲಭದ ಪರಿಹಾರ ಇದೆ. ಅದೇನೆಂದರೆ, ಮಿಕ್ಸಿ ಜಾರಿನ ಹಿಂಭಾಗದಲ್ಲಿ ಸ್ವಲ್ಪ ಉಪ್ಪು ಹಾಕಿ, ಅದರ ಮೇಲೆ ಒಂದು ಪ್ಯಾಕೆಟ್ ಇನೋ ಪೌಡರ್ ಹಾಗೂ ಬಳಿಕ ನೀರು ಹಾಕಿ 5 ನಿಮಿಷ ಬಿಡಬೇಕು. ಎಲ್ಲಾ ಕೊಳೆಗಳೂ ಮೇಲೆ ಬರುತ್ತವೆ. ಆ ಬಳಿಕ ತೊಳೆದ್ರೆ ಆಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.