ಎರಡೇ ಚಮಚ ಎಣ್ಣೆ ಬಳಸಿ ಬದನೇಕಾಯಿ, ಆಲೂಗಡ್ಡೆಯ ಕ್ರಿಸ್ಪಿ, ಟೇಸ್ಟಿ ಫ್ರೈ ಮಾಡೋದು ಹೇಗೆ ಗೊತ್ತಾ

Published : Aug 25, 2026, 07:28 PM IST
Frying Tips

ಸಾರಾಂಶ

ಬದನೇಕಾಯಿ ಮತ್ತು ಆಲೂಗಡ್ಡೆ ಫ್ರೈ ಮಾಡಲು ಹೆಚ್ಚು ಎಣ್ಣೆ ಬೇಕಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಬದನೆಕಾಯಿಗೆ ಉಪ್ಪು ಸವರಿ ನೀರು ತೆಗೆಯುವುದು ಮತ್ತು ಆಲೂಗಡ್ಡೆಯನ್ನು ಅರ್ಧ ಬೇಯಿಸುವುದರಿಂದ, ಅತ್ಯಂತ ಕಡಿಮೆ ಎಣ್ಣೆಯಲ್ಲಿ ಗರಿಗರಿಯಾದ ಫ್ರೈ ತಯಾರಿಸಬಹುದು.

ಬದನೇಕಾಯಿ, ಆಲೂಗಡ್ಡೆ ಫ್ರೈ ಎಂದರೆ ಹಲವರ ಬಾಯಲ್ಲಿ ನೀರು ಬರುವುದು ಸಹಜ. ಆದರೆ ಇವೆರಡೂ ಅತಿ ಹೆಚ್ಚು ಎಣ್ಣೆಯನ್ನು ಕೇಳುತ್ತವೆ. ಫ್ರೈ ಮಾಡುವಾಗ ಹೆಚ್ಚು ಎಣ್ಣೆ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಇದರ ಸಹವಾಸವೇ ಬೇಡ ಎಂದು ಅಂದುಕೊಳ್ಳುವವರು ಹಲವರು. ಆದರೆ ಒಂದಿಷ್ಟು ಟಿಪ್ಸ್​ ಫಾಲೋ ಮಾಡಿದ್ರೆ, ಬದನೇಕಾಯಿ ಮತ್ತು ಆಲೂಗಡ್ಡೆ ಎರಡನ್ನೂ ಅತ್ಯಂತ ಕಡಿಮೆ ಎಣ್ಣೆ ಉಪಯೋಗಿಸಿ ಟೇಸ್ಟಿ ಟೇಸ್ಟಿ, ಕ್ರಿಸ್ಪಿಯಾಗಿ ಫ್ರೈ ಮಾಡಿ ತಿನ್ನಬಹುದು ಎನ್ನೋದು ನಿಮಗೆ ಗೊತ್ತಾ? ಆ ಟಿಪ್ಸ್​ ಇಲ್ಲಿ ಹೇಳಲಾಗಿದೆ ನೋಡಿ.

ಬದನೇಕಾಯಿ ಟಿಪ್ಸ್​

ಮೊದಲಿಗೆ ಬದನೇಕಾಯಿ ಬಗ್ಗೆ ನೋಡೋಣ. ಬದನೇಕಾಯಿ ಎಂದರೆ ಹಲವರಿಗೆ ಅಲರ್ಜಿ. ಇದರ ಹೆಸರು ಹೇಳಿದರೆ ಮೂತಿ ಸೊಟ್ಟಗೆ ಮಾಡುವವರು ಇದ್ದಾರೆ. ಆದರೆ ಫ್ರೈ ವಿಷ್ಯಕ್ಕೆ ಬಂದಾಗ ಬದನೇಕಾಯಿ ಅಲರ್ಜಿ ಆದವರ ಮುಖವೂ ಅರಳುತ್ತದೆ. ಏಕೆಂದ್ರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಫ್ರೈ ಮಾಡಿದ್ರೆ ಸಕತ್​ ಟೇಸ್ಟಿಯಾಗಿರುತ್ತದೆ.

ಮೊದಲಿಗೆ ಬದನೆಕಾಯಿಯನ್ನು ಕತ್ತರಿಸಿಕೊಂಡು, ಅದರ ಮೇಲೆ ಉಪ್ಪು ಸುರಿದು, ಚೆನ್ನಾಗಿ ಮಿಕ್ಸ್​ ಮಾಡಿ, 10 ನಿಮಿಷ ಬಿಡಿ. ಬಳಿಕ ಅದನ್ನು ಶುದ್ಧ ಬಟ್ಟೆಯಲ್ಲಿ ಒತ್ತಿ ಹೆಚ್ಚುವರಿ ನೀರಿದ್ದರೆ ತೆಗೆಯಿರಿ. ಆಮೇಲೆ ಎರಡೇ ಎರಡು ಸ್ಪೂನ್​ ಎಣ್ಣೆಹಾಕಿ ಫ್ರೈ ಮಾಡಿ. ಎಷ್ಟು ಕ್ರಿಸ್ಪಿಯಾಗಿ ಬರುತ್ತದೆ ನೋಡಿ.

ಆಲೂಗಡ್ಡೆ ಟಿಪ್ಸ್​

ಬದನೇಕಾಯಿಯ ರೀತಿಯಲ್ಲಿ ಆಲೂಗಡ್ಡೆ ಅಲ್ಲ. ಇದನ್ನು ಪ್ರೀತಿಸುವವರು ಹಲವರು ಇದ್ದಾರೆ. ಅದರಲ್ಲಿಯೂ ಚೀಪ್ಸ್​ ಎಂದರೆ ಹಲವರಿಗೆ ಪಂಚ ಪ್ರಾಣ. ಅದೇ ರೀತಿ ಫ್ರೈ ಮಾಡಿದಾಗಲೂ ಸಕತ್​ ಟೇಸ್ಟಿಯಾಗಿರುತ್ತದೆ. ಆದರೆ ಇದು ಕೂಡ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುವ ಕಾರಣ, ಫ್ರೈ ಸಹವಾಸವೇ ಬೇಡ ಎನ್ನೋರು ಇದ್ದಾರೆ. ಆದರೆ ಎರಡೇ ಎರಡು ಚಮಚ ಎಣ್ಣೆಯಲ್ಲಿ ಆಲೂಗಡ್ಡೆ ಟೇಸ್ಟಿಯಾಗಿ ಫ್ರೈಮಾಡಬಹುದು ಎನ್ನೋದು ಗೊತ್ತಾ?

ಮೊದಲಿಗೆ ಆಲೂಗಡ್ಡೆಯನ್ನು ಪೀಸ್​ ಮಾಡಿಕೊಂಡು ಅದನ್ನು ಬಿಸಿ ನೀರಿನಲ್ಲಿ ಅರ್ಧ ಬೇಯಿಸಿಕೊಳ್ಳಬೇಕು. ಬಳಿಕ ನೀರನ್ನು ಸೋಸಿಕೊಂಡು ಶುದ್ಧ ಬಟ್ಟೆಯ ಮೇಲೆ ಹರಡಿ, ಡ್ರೈ ಆಗಲು ಬಿಡಿ. ಹೀಗೆ ಮಾಡಿದ್ರೆ, ಎರಡೇ ಎರಡು ಚಮಚದಲ್ಲಿ ಕ್ರಿಸ್ಪಿಯಾಗಿರೋ ಆಲೂಗಡ್ಡೆಯನ್ನು ಫ್ರೈ ಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಣೆ ಇಲ್ಲದೆಯೂ ಮಾಡಬಹುದು ಪರ್ಫೆಕ್ಟ್ ಆದ ಗುಂಡಗಿನ ಚಪಾತಿ, ರೊಟ್ಟಿ.. ಇಲ್ಲಿವೆ 4 ಸ್ಮಾರ್ಟ್ ಟ್ರಿಕ್ಸ್
Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!