* ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಘಟನೆ
* ಕ್ರಿಕೆಟ್ ಆಡುವಾಗ ಮುನ್ನಾ ಇರ್ಕಲ್‌ಗೆ ಹೃದಯಾಘಾತ
* ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಯುವಕ ಸಾವು
ಧಾರವಾಡ(ಏ.03): ವಿದ್ಯಾಕಾಶಿ ಧಾರವಾಡದಲ್ಲಿ(Dharwad) ಕ್ರಿಕೆಟ್ ಆಡುವ ವೇಳೆ ಹೃದಯಾಘಾತವಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು(ಭಾನುವಾರ) ನಡೆದಿದೆ. ಮುನ್ನಾ ಇರ್ಕಲ್ ಎಂಬುವನೇ ಕ್ರಿಕೆಟ್ ಆಡುವ ವೇಳೆ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ್ದಾನೆ.
ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ಕ್ರಿಕೆಟ್(Cricket) ಆಡುವಾಗ ಮುನ್ನಾ ಇರ್ಕಲ್‌ಗೆ ಹೃದಯಾಘಾತ ಇಹಲೋಕ ತ್ಯಜಿಸಿದ್ದಾನೆ. ಮೃತ ಮುನ್ನಾ ಇರ್ಕಲ್ ನಗರದ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಯಾಗಿದ್ದಾನೆ ಅಂತ ತಿಳಿದು ಬಂದಿದೆ.
ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ ಸಾವು? ಏನ್ ಕಾರಣ
ಮುನ್ನಾ ಇರ್ಕಲ್ ದಿಢೀರ್ ಸಾವಿನಿಂದ ಯುವಕರು ಕಣ್ಣೀರು ಹಾಕಿದ್ದಾರೆ. ಯುವಕನನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ(Death) ಅಂತ ತಿಳಿದು ಬಂದಿದೆ. ಉಪನಗರ ಪೋಲಿಸ್(Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.