ಪುನೀತ್ ಫೋಟೋ ಹಿಡಿದು ಮುಳ್ಳುಗಳ ಮೇಲೆ ಕುಣಿದು ಕುಪ್ಪಳಿಸಿದ ಅಪ್ಪು ಅಭಿಮಾನಿಗಳು

By Suvarna News  |  First Published Apr 3, 2022, 5:53 PM IST

* ಮುಳ್ಳಿನ ಜಾತ್ರೆಯಲ್ಲೂ ಪುನೀತ್ ಮೇಲಿನ ಅಭಿಮಾನ ಮೆರೆದ ಭಕ್ತರು
* ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಅಪ್ಪು ಮೇಲಿನ ಅಭಿಮಾನ ಮೆರೆದ ಭಕ್ತರು.
* ಮುಳ್ಳಿನ ಮೇಲೆ ಹಾರೋ ವಿಶೇಷ ಜಾತ್ರೆ.


ಕೊಪ್ಪಳ, (ಏ.03): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿಧನದ ಬಳಿಕ ಅವರ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ ಅಪ್ಪು ಫೋಟೋಗಳು ಜಾತ್ರೆ, ಸಂತೆ, ಮದುವೆ, ಸಭೆ ಸಮಾರಂಭಗಳಲ್ಲಿ ರಾರಾಜಿಸುತ್ತಿವೆ. 

ಹೌದು...ಕೊಪ್ಪಳದ ಮುಳ್ಳಿನ ಜಾತ್ರೆಯಲ್ಲೂ ಅಪ್ಪು ಮಿಂಚಿದ್ದಾರೆ.  ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮುಳ್ಳಿನ ಜಾತ್ತೆ ನಡೆದಿದ್ದು,  ಜಾತ್ರೆಯಲ್ಲಿ ಭಕ್ತರು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಮುಳ್ಳುಗಳ ಮೇಲೆ ಜಿಗಿದು ಜಾತ್ರೆಯನ್ನ ಆಚರಿಸೋ ಸಂಪ್ರದಾಯ ಇದ್ದು, ಅದರಂತೆ. ಪುನೀತ್  ಅಭಿಮಾನಿಗಳು ಮುಳ್ಳುಗಳ ಮೇಲೆ ನಿಂತು ಅಪ್ಪು ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು. 

Latest Videos

undefined

ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ವೈರಲ್ ಆದ ಪ್ರಶ್ನೆಪತ್ರಿಕೆ 

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ಸಾಕ್ಷಾತ್ ದೇವರಾಗಿದ್ದಾರೆ. ಅನೇಕ ಅಭಿಮಾನಿಗಳು ಅವರನ್ನು ಪೂಜೆ ಮಾಡುತ್ತಿದ್ದಾರೆ. ಅಭಿಮಾನಿ ದೇವರುಗಳ ಮನೆಯ ದೇವರಗುಡಿಯಲ್ಲಿ ಅಪ್ಪು ಫೋಟೋ ಇಟ್ಟು ಪ್ರತಿದಿನ ಪೂಜೆ ಮಾಡಲಾಗುತ್ತಿದೆ. ಅಲ್ಲದೆ ದೇವಸ್ಥಾನಗಳಲ್ಲಿ, ಉತ್ಸವಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತದೆ. ಅಪ್ಪು ಅವರ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗಿದೆ. ನಟನೆ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಪ್ಪು ತಾನು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡವರಲ್ಲ. ಈ ಬಗ್ಗೆ ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಅವರ ನಿಧನದ ಬಳಿಕವೇ ಎಲ್ಲಾ ಬಹಿರಂಗವಾಗಿರುವುದು. ಅಪ್ಪು ಮಾಡಿದ ಉತ್ತಮ ಕೆಲಸಗಳು ಎಲ್ಲರಿಗೂ ಅಚ್ಚರಿ ಪಡುವಂತೆ ಮಾಡಿತ್ತು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾಲ ಬದಲಾದಂತೆ ‌ ಸಂಪ್ರದಾಯಗಳ ಆಚರಣೆಗಳು ಕೂಡ ತೆರೆಮರೆಗೆ ಸರಿಯುತ್ತಿವೆ. ಕೊಪ್ಪಳ ತಾಲೂಕಿನ ಹೂವಿನಾಳ ಗ್ರಾಮದಲ್ಲಿ  ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬರುವ ಮೂಲಕ ಜನಪದ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಇಲ್ಲಿ ಮುಳ್ಳು(Thorn)ಗಳ ಮೇಲೆ ಯುವಕರು (Youths) ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವು ಆಗುವುದಿಲ್ಲವಂತೆ.ಮುಳ್ಳಿನ ಮೇಲೆ ಹಾರೋ ವಿಶೇಷ ಜಾತ್ರೆ. ಇದು ಗ್ರಾಮದ ಮಾರುತೇಶ್ವರ ಜಾತ್ರೆಯ ವೈಶಿಷ್ಟ್ಯ. 

ಮುಳ್ಳಿನ ಮೇಲೆ ಜಿಗಿದಾಡಿ ದೇಹ ದಂಡಿಸಿ ಹರಕೆ ತೀರಿಸುವುದು ಒಂದು ಸಂಪ್ರಾದಾಯವಿದೆ. ಸಾಮಾನ್ಯವಾಗಿ ಒಂದು ಮುಳ್ಳು ಚುಚ್ಚಿದರೆ ಒದ್ದಾಡುವ ನಾವುಗಳು, ಇಲ್ಲಿ ಮುಳ್ಳುಗಳ ಮೇಲೆಯೇ ಯುವಕರು  ಮಲಗುತ್ತಾರೆ, ಕುಣಿಯುತ್ತಾರೆ, ನಲಿಯುತ್ತಾರೆ, ಸಂಭ್ರಮಿಸುತ್ತಾರೆ. 

ರಾಜ್ಯದ ಹಲವೆಡೆ ಮುಳ್ಳಿನ ಜಾತ್ರೆ
ಯೆಸ್‌. ಕರ್ನಾಟಕದ ಹಲವೆಡೆ ಈ ಮುಳ್ಳಿನ ಜಾತ್ರೆಗಳು ನಡೆಯುತ್ತವೆ.  ಚಿತ್ರದುರ್ಗ ಜಿಲ್ಲೆಯ ಕೋಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಬರೀ ಕಾಲಲ್ಲಿ ಮುಳ್ಳಿನ ಗುಡಿಯನ್ನು ಪರಸ್ಪರ ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅರ್ಧ ಗುಡಿಯನ್ನು ಕೋಣನ ಗೊಲ್ಲರು ಉಳಿದರ್ಧ ಗುಡಿಯನ್ನು ಬೊಮ್ಮನ ಗೊಲ್ಲರು ಗುಡಿಯನ್ನು ನಿರ್ಮಿಸುತ್ತಾರೆ.

ನಮ್ಮ ಕಾಲಿಗೆ ಅಪ್ಪಿ ತಪ್ಪಿ ಒಂದು ಮುಳ್ಳು ಚುಚ್ಚಿದ್ರೆ ಸಾಕು ಜೀವ ಹೋದಂಗೆ ಅನ್ಸುತ್ತೆ. ಮುಳ್ಳು ಹೊರಗೆ ತೆಗೆಯೋವರ್ಗೂ ಕಾಲು ಮುಂದಕ್ಕೆ ಇಡೋಕ್ ಆಗಲ್ಲ. ಅಂಥಾದ್ರಲ್ಲಿ ಇಲ್ಲಿ ಮುಳ್ಳಿನ ರಾಶಿ ಮೇಲೆಯೇ ದೊಬ್ಬನೆ ಬೀಳ್ತಾರೆ. ಮೈತುಂಬಾ ಮುಳ್ಳು ಚುಚ್ಚುತ್ತಿದ್ರೂ ಏನೂ ಆಗಿಲ್ಲದಂತೆ ಮಲಗಿರ್ತಾರೆ. ಮೈಮೇಲೆ ಚೂರು ಅರಿವಿಲ್ಲ. ಮುಳ್ಳಿನ ರಾಶಿ ಮೇಲೆ ಧುಮುಕಿದ್ರೂ ನೋವು ಗೊತ್ತಾಗ್ತಿಲ್ಲ. ಈಜಲು ಹಾರಿದವ್ರಂತೆ ಬಿಲ್ಡಿಂಗ್ ಮೇಲಿಂದ ದೊಬ್ಬನೆ ಬೀಳ್ತಾರೆ. ಬರೀ ಮೈಯಲ್ಲೇ ಮುಳ್ಳಿನ ಮೇಲೆ ಹಾಯಾಗಿ ಮಲಗ್ತಾರೆ.

click me!