Hubballi Smart City ದೇಶದ ಮೊದಲ ಗ್ರೀನ್ ಮೋಬಿಲಿಟಿ ಕಾರಿಡಾರ್ ಶೀಘ್ರ ಸಂಚಾರಕ್ಕೆ‌ ಮುಕ್ತ!

By Suvarna News  |  First Published Apr 3, 2022, 5:51 PM IST

ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಯಡಿ 80ಕೋಟಿ ರೂಪಾಯಿ ವೆಚ್ಚದಲ್ಲಿ 9.2 ಕಿಲೋಮೀಟರ್ ಉದ್ದದ ಹಸಿರು ಸಂಚಾರಿ ಪಥ   ಕಾಮಗಾರಿ ಮೊದಲೇ ಹಂತ ಮುಕ್ತಯವಾಗಿದೆ.


ಹುಬ್ಬಳ್ಳಿ (ಎ.3): ಸ್ಮಾರ್ಟ್ ಸಿಟಿ (SmartCity) ಯೋಜನೆಯಡಿ 80ಕೋಟಿ ರೂಪಾಯಿ ವೆಚ್ಚದಲ್ಲಿ 9.2 ಕಿಲೋಮೀಟರ್ ಉದ್ದದ ಹಸಿರು ಸಂಚಾರಿ ಪಥ (Green mobility Corridor) ಕಾಮಗಾರಿ ಮೊದಲೇ ಹಂತ ಮುಕ್ತಯವಾಗಿದ್ದು, ದೇಶದ 100 ನಗರಗಳ ಸ್ಮಾರ್ಟ್ ಸಿಟಿ ಯೋಜನೆಗಳ ಪೈಕಿ, ಹುಬ್ಬಳ್ಳಿಯಲ್ಲಿ ಮೊದಲನೆಯದಾಗಿ ಅನುಷ್ಠಾನಗೊಳಿಸಲಾಗುತ್ತಿದೆ.  

ಮೊದಲ ಹಂತದಲ್ಲಿ 7.2 ಕೋಟಿ ವೆಚ್ಚದಲ್ಲಿ 640 ಮೀಟರ್ ಉದ್ದದ ನಾಲಾ ಅಭಿವೃದ್ಧಿ ಹಾಗೂ ಸೈಕಲ್ ಪಾತ್ (Cycle path) ನಿರ್ಮಾಣ ಮಾಡಲಾಗಿದೆ. ಮುಂದಿನ 15 ದಿನಗಳಲ್ಲಿ ಉದ್ಘಾಟನೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವ ಪ್ಲಾನ್ ಮಾಡಲಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

Latest Videos

undefined

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಣಕಲ್ ನಾಲಾ ಹಿಂಭಾಗದ ಜಲಮಂಡಳಿ ಕಚೇರಿ, ಲಿಂಗರಾಜ ನಗರದ ಹತ್ತಿರ ಸ್ಮಾರ್ಟ್ ಸಿಟಿ ಯೋಜನೆಯ ಕೈಗೊಂಡಿರುವ ಹಸಿರುಪಥ (ಗ್ರೀನ್ ಮೋಬಿಲಿಟಿ) ನಿರ್ಮಾಣ ಕಾಮಗಾರಿಯನ್ನು ಫ್ರೆಂಚ್ ಅಭಿವೃದ್ಧಿ ಏಜೆನ್ಸಿಯ ನಿಯೋಗದ ಸದಸ್ಯರೊಂದಿಗೆ  ವೀಕ್ಷಿಸಿ ಮಾತನಾಡಿದರು.

Udupi: ಮನೆ ಪಕ್ಕವೇ ಘನತ್ಯಾಜ್ಯ ಘಟಕಕ್ಕೆ ಅವಕಾಶ ಕೊಟ್ಟು ಮಾದರಿಯಾದ ಸಚಿವ!

ಫ್ರಾನ್ಸ್‌ದಿಂದ ಆಗಮಿಸಿರುವ ಸುಸ್ಥಿರ ನಗರಾಭಿವೃದ್ಧಿ ಕಾರ್ಯಗಳ ತಂಡದ ನಿಯೋಗವು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಹಸಿರು ಸಂಚಾರಿ ಪಥ (Green mobility corridor) ಕಾಮಗಾರಿಯು ವೀಕ್ಷಿಸುತ್ತಿದೆ. ಯುರೋಪ್ ಯುನಿಯನ್ ದೇಶಗಳಲ್ಲಿ ಕೈಗೊಂಡ ಕಾಮಗಾರಿಗಿಂತ ಭಿನ್ನವಾಗಿದೆ ಎಂದು ತಿಳಿಸಿದೆ. ನಾಲಾ ಪಕ್ಕದಲ್ಲಿ ಸೈಕಲ್ ಪಾತ್, ಗಾರ್ಡನ್ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮಧ್ಯರಾತ್ರಿವರೆಗೆ ವಾಕ್ ಮಾಡಬಹುದು. ಸ್ಮಾರ್ಟ್ ಸಿಟಿ ಆಗಲು ಹುಬ್ಬಳ್ಳಿ ಧಾರವಾಡ ದಾಪುಗಾಲು ಇಡುತ್ತಿದೆ ಎಂದರು.

ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ ( National institute of urban Affairs) ನಿಯೋಗದ ನಿರ್ದೇಶಕ ( Director) ಹಿತೇಶ್ ವೈದ್ಯ (Hitesh Vaidya) ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಈ ತರಹದ ಕಾಮಗಾರಿಯನ್ನು ಕೈಗೊಂಡಿರುವುದು ಬಹಳ ಸಂತಸ ತಂದಿದೆ ಎಂದಿದ್ದಾರೆ.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಚೇರ್ಮನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ್ ಅವರು ತಂಡಕ್ಕೆ ಮಾಹಿತಿ ನೀಡಿದರು.

Slush Field Race ಕತ್ನಳ್ಳಿ ಜಾತ್ರೆ ಕೆಸರು ಗದ್ದೆ ಓಟದಲ್ಲಿ ಗೆದ್ದು ಬೀಗಿದ ಮುಸ್ಲಿಂ ಯುವಕ!

ಕಾರ್ಯಪಡೆಯ (Taskforce) ನಾಯಕಿ ಜ್ಯೂಲಿಯೆಟ್ ಲಿ ಪ್ಯಾನೆರರ್, (Juliet panerar) ಸಹನಾಯಕ ಜ್ಯೂಲಿಯೆನ್ ಬೊಗಿಲೆಟ್ಟೊ, ಸ್ಮಾರ್ಟ್ ಸಿಟಿ ವಲಯದ ವ್ಯವಸ್ಥಾಪಕಿ ಫ್ಯಾನಿ ರಗೋಟ್, ನಯೀಮ್ ಕೇರುವಾಲಾ, ವಿವೇಕ್ ಸಂಧು, ಡಾ.ಶಾಲಿನಿ ಮಿಶ್ರಾ, ಡಾ.ಮಹ್ಮದ್ ಆರೀಫ್, ಆಕಾಂಕ್ಷ ಲಾರೊಯಿಯಾ, ಇಂದರ್‌ಕುಮಾರ್ ಅವರು ಉಣಕಲ್ ನಾಲಾ ಹಿಂಭಾಗದ ಬಳಿ ನಿರ್ಮಿಸುತ್ತಿರುವ ಗ್ರೀನ್ ಮೊಬಿಲಿಟಿ ಕಾಮಗಾರಿ ವೀಕ್ಷಿಸಿದರು.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕ (Smartcity Managing Director ) ಶಕೀಲ್ ಅಹ್ಮದ್ ಮತ್ತಿತರರು ಕಾಮಗಾರಿಗಳ ಮಾಹಿತಿಯನ್ನು ನಿಯೋಗಕ್ಕೆ ಒದಗಿಸಿದರು.

click me!