FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?

FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?

Published : Jun 22, 2026, 09:36 PM IST

ಭೀಮಾತೀರದ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಅಪ್ಪುಗೌಡನನ್ನು ಚಡಚಣ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಕೊಲ್ಲಲು ಯೋಜಿಸಿದ್ದರೂ, 6 ಮಂದಿ ಹತ್ಯೆಯಾಗಿದ್ದರಿಂದ ಬೆಚ್ಚಿಬಿದ್ದ ಪಾತಕಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ. ಈ ಬಂಧನದಿಂದ ಜಮೀನು ವಿವಾದಕ್ಕಾಗಿ ನಡೆದ ಈ ಭೀಕರ ಕೃತ್ಯದ ಸಂಪೂರ್ಣ ಸತ್ಯಾಂಶ ಬಯಲಾಗಿದೆ.

ವಿಜಯಪುರ: ಇಡೀ ರಾಜ್ಯವನ್ನೇ ನಡುಗಿಸಿದ್ದ ಭೀಮಾತೀರದ ಭೀಕರ ಸಾಮೂಹಿಕ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್, ನಟೋರಿಯಸ್ ಪಾತಕಿ ಅಪ್ಪುಗೌಡನನ್ನು ಚಡಚಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಬಂಧನದ ಬೆನ್ನಲ್ಲೇ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆ ರಕ್ತಪಾತದ ಕುರಿತು ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ.

15 ದಿನ ಮೊದಲೇ ಸಿದ್ಧವಾಗಿತ್ತು ಮಾಸ್ಟರ್ ಪ್ಲಾನ್!

ಗೋವಿಂದಪುರ ಗ್ರಾಮದ ಕೇವಲ 25 ಎಕರೆ ಜಮೀನಿಗಾಗಿ ನಡೆದ ಈ ನೆತ್ತರ ಹಾದಿಗೆ ಅಪ್ಪುಗೌಡ ಸುಮಾರು 15 ದಿನಗಳ ಹಿಂದೆಯೇ ಸ್ಕೆಚ್ ಹಾಕಿಕೊಟ್ಟಿದ್ದ. ನಿರಾಳೆ ಕುಟುಂಬಸ್ಥರನ್ನು ಮುಗಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಅಪ್ಪುಗೌಡ ತನ್ನ ಇಬ್ಬರು ಅಳಿಯಂದಿರ ಜೊತೆಗೂಡಿ ಸುಮಾರು 20 ತಲವಾರುಗಳನ್ನು ಸಿದ್ಧಪಡಿಸಿ ಈ ಕೃತ್ಯಕ್ಕೆ ತರಬೇತಿ ನೀಡಿದ್ದ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬಯಲಾಗಿದೆ.

ಇಬ್ಬರ ಹತ್ಯೆಗೆ ಸ್ಕೆಚ್, ಆದರೆ ಬಿದ್ದದ್ದು 6 ಹೆಣಗಳು!

ಅಪ್ಪುಗೌಡನ ಅಸಲಿ ಪ್ಲಾನ್ ಪ್ರಕಾರ ಅಲ್ಲಿ ನಡೆಯಬೇಕಾಗಿದ್ದು ಕೇವಲ ನಿರಾಳೆ ಕುಟುಂಬದ ಇಬ್ಬರು ಪ್ರಮುಖ ಸದಸ್ಯರ ಹತ್ಯೆ ಮಾತ್ರ. ಆದರೆ ಘಟನಾ ಸ್ಥಳಕ್ಕೆ ನಿರಾಳೆ ಕುಟುಂಬದ ಆರೂ ಸದಸ್ಯರು ಒಟ್ಟಿಗೆ ಬಂದಿದ್ದರಿಂದ, ಸ್ಥಳದಲ್ಲಿದ್ದ ಹಂತಕರು ಗಾಬರಿಗೊಂಡಿದ್ದಾರೆ. ಮಚ್ಚು-ಲಾಂಗುಗಳ ಅಮಲಿನಲ್ಲಿ ಹಾಗೂ ಹಿಂಸೆಯ ಜೋಶ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆಲ್ಲಾ ದಾಳಿ ಮಾಡಿದ ಗ್ಯಾಂಗ್, ಇಬ್ಬರ ಬದಲಿಗೆ ಅನಾಮತ್ತಾಗಿ 6 ಜನರ ಹೆಣವಿಟ್ಟಿದ್ದಾರೆ.

ಪತರುಗುಟ್ಟಿ ಹೋದ ಮಾಸ್ಟರ್ ಮೈಂಡ್!

ಯಾವಾಗ ಇಬ್ಬರ ಬದಲಿಗೆ ಆರು ಜನರು ಹತ್ಯೆಯಾದ ಸುದ್ದಿ ತಿಳಿಯಿತೋ, ಮಾಸ್ಟರ್ ಪ್ಲಾನ್ ಕೊಟ್ಟಿದ್ದ ಅಪ್ಪುಗೌಡನೇ ಬೆಚ್ಚಿಬಿದ್ದಿದ್ದಾನೆ. ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನ್ನ ಫೋನ್ ಸ್ವಿಚ್ ಆಫ್ ಮಾಡಿದ ಅಪ್ಪುಗೌಡ, ಬೆಂಗಳೂರು ಬಿಟ್ಟು ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದ. ಆದರೆ ಚಡಚಣ ಪೊಲೀಸರು ಈತನ ಚಲನವಲನದ ಮೇಲೆ ನಿಗಾ ಇಟ್ಟು ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭೀಮಾತೀರದಲ್ಲಿ ಶಾಂತಿ ನೆಲೆಸಿದೆ ಎನ್ನುವಷ್ಟರಲ್ಲಿ ಅಪ್ಪುಗೌಡನಂತಹ ಕ್ರಿಮಿನಲ್‌ಗಳ ಉದಯವಾಗಿರುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಪ್ಪುಗೌಡನ ಬಂಧನದಿಂದ ಭೀಮಾತೀರದ ಹತ್ಯಾಕಾಂಡದ ಕಂಪ್ಲೀಟ್ ರಹಸ್ಯ ಬಯಲಾಗಿದ್ದು, ಕಾನೂನು ಕುಣಿಕೆ ಬಿಗಿಯಾಗಿದೆ.

23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
Read more