ಕೇಂದ್ರ, ರಾಜ್ಯದ ವಿಫಲತೆಗಳನ್ನು ಜನರಿಗೆ ಮುಟ್ಟಿಸ್ತೇವೆ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್

By Suvarna News  |  First Published Dec 19, 2022, 10:40 PM IST

ಪರೇಶ್ ಮೇಸ್ತನ ಸಾವಿನ ಪ್ರಕರಣವನ್ನು ಮಾತ್ರ ಮುಂದಿಟ್ಟು ನಾವು ಹೋಗ್ತಿಲ್ಲ. ಕಾಂಗ್ರೆಸ್ ತತ್ವ ಸಿದ್ಧಾಂತ, ಯೋಜನೆಗಳು, ಕಾರ್ಯಕ್ರಮಗಳು, ಕೇಂದ್ರ, ರಾಜ್ಯದ ವಿಫಲತೆಗಳನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.


ವರದಿ: ಭರತ್ ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್

ಉತ್ತರ ಕನ್ನಡ (ಡಿ.19): ಪರೇಶ್ ಮೇಸ್ತನ ಸಾವಿನ ಪ್ರಕರಣವನ್ನು ಮಾತ್ರ ಮುಂದಿಟ್ಟು ನಾವು ಹೋಗ್ತಿಲ್ಲ. ಕಾಂಗ್ರೆಸ್ ತತ್ವ ಸಿದ್ಧಾಂತ, ಯೋಜನೆಗಳು, ಕಾರ್ಯಕ್ರಮಗಳು, ಕೇಂದ್ರ, ರಾಜ್ಯದ ವಿಫಲತೆಗಳನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು. ಕಾರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು ಉತ್ತರಕ‌ನ್ನಡ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ, ರಸ್ತೆ ಸಮಸ್ಯೆ, ಸ್ವಂತ ಮನೆಗಳ ಕೊರತೆ, ಕಾಲು ಸಂಕಗಳ ಸಮಸ್ಯೆ, ವಿದ್ಯಾರ್ಥಿಗಳ ಸಮಸ್ಯೆ, ಮೀನುಗಾರರ ಸಮಸ್ಯೆ ಮುಂತಾದ ಹಲವು ಸಮಸ್ಯೆಗಳನ್ನು ಪಟ್ಟಿಯನ್ನು ಪಕ್ಷದ ಮುಖಂಡರಾದ ಡಾ. ಪರಮೇಶ್ವರ ಅವರ ಮುಂದಿರಿಸುತ್ತೇವೆ. ಅವರ ಮೂಲಕ ರಾಜ್ಯ ಚುನಾವಣೆ ಸಮಿತಿಯ ಮುಂದಿಟ್ಟು ಪ್ರಣಾಳಿಕೆಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಎಂದು ಕೇಳುತ್ತೇವೆ. ಅಲ್ಲದೇ, ಜಿಲ್ಲೆಯಲ್ಲಿ ಓದುವ ಎಲ್ಲಾ ವರ್ಗದ‌ ಮಕ್ಕಳಿಗೆ ಉಚಿತ ಪಾಸ್ ನೀಡಲು ಕೂಡಾ ಒತ್ತಾಯಿಸುತೇವೆ. ಜಿಲ್ಲೆಯಲ್ಲಿ ಚುನಾವಣೆಯ ಗೆಲುವಿಗೆ ನಾಯಕ್ವದ ಬದಲಾವಣೆ ಅಗತ್ಯವಿಲ್ಲ ಸಾಮೂಹಿಕ ಒಗ್ಗಟ್ಟಾಗಿ ಪಕ್ಷವನ್ನು ಬಲಪಡಿಸ್ತೇವೆ ಎಂದು  ಹೇಳಿದರು.

Latest Videos

undefined

ಡಿಕೆಶಿ ಒಡೆತನ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ! ಡಿಕೆಶಿ ಫಸ್ಟ್‌ ರಿಯಾಕ್ಷನ್

ಬಳಿಕ ಮಾಜಿ ಶಾಸಕ ಸತೀಶ್ ಸೈಲ್ ಮಾತನಾಡಿ, ಸಿದ್ಧರಾಮಯ್ಯ ಸರಕಾರವಿದ್ದಾಗ ನಾನು 1,900ಕೋಟಿ ರೂ. ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದೇನೆ. ಜಿಲ್ಲೆಗೆ 15,000 ಕೋಟಿ ರೂ ಮೌಲ್ಯದ ಯೋಜನೆಗಳನ್ನು ಸಿದ್ಧರಾಮಯ್ಯ ನೀಡಿದ್ದರು. ಈಗಿರುವ ಶಾಸಕರು ಯೋಜನೆಯ ಅನುಷ್ಠಾನಕ್ಕೆ ತಡ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಕೆಲಸಗಳಲ್ಲಿ 5 ವರ್ಷಗಳನ್ನು ಕಳೆದಿದ್ದಾರೆ. ಜನರು ಅವಕಾಶ ನೀಡಿದ್ರೆ ನಾವು ಜಿಲ್ಲೆಯ ಚಿತ್ರಣ ಬದಲಿಸ್ತೇವೆ.

ನಾನು ಕ್ಯಾಂಡಿಡೇಟ್ ಅನೌನ್ಸ್ ಮಾಡಿಲ್ಲ, ನಾನು ಅಶೀರ್ವಾದ ಮಾಡಿ ಎಂದಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಉತ್ತಮ ಸಂಘಟನೆ ಮಾಡಿ ಜಿಲ್ಲೆಗೆ ಒಳ್ಳೆಯ ಹೆಸರು ತರುತ್ತೇವೆ ಎಂದು ಮಾಜಿ ಶಾಸಕರು ತಿಳಿಸಿದರು.‌ ಕಾರವಾರ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಸಮೀರ್ ನಾಯ್ಕ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ಗಜಾನನ ತಾರಿಕಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚೈತ್ರ ಕೊಠಾರಕರ ಮುಂತಾದವರು ಭಾಗವಹಿಸಿದ್ದರು.

click me!