ಡಾ. ವಿದ್ಯಾ ಕುಂದರಗಿ ಓರ್ವ ಸೃಜನಶೀಲ ಬರಹಗಾರರಾಗಿದ್ದು, ಅವರ ‘ಕನ್ನಡ ಶಿಕ್ಷಣ ವಿಕಾಸ ಮತ್ತು ಸಾಹಿತ್ಯ ನವೋದಯ’ ಗ್ರಂಥ ಉತ್ತಮ ಕೃತಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡ (ಡಿ.19): ಡಾ. ವಿದ್ಯಾ ಕುಂದರಗಿ ಓರ್ವ ಸೃಜನಶೀಲ ಬರಹಗಾರರಾಗಿದ್ದು, ಅವರ ‘ಕನ್ನಡ ಶಿಕ್ಷಣ ವಿಕಾಸ ಮತ್ತು ಸಾಹಿತ್ಯ ನವೋದಯ’ ಗ್ರಂಥ ಉತ್ತಮ ಕೃತಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಡಾ. ವಿದ್ಯಾ ಕುಂದರಗಿ ಅವರ ‘ಕನ್ನಡ ಶಿಕ್ಷಣ ವಿಕಾಸ ಮತ್ತು ಸಾಹಿತ್ಯದ ನವೋದಯ’ ಕೃತಿ ಬಿಡುಗಡೆ ಹಾಗೂ ಕೃತಿ ಅವಲೋಕನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ಸಾಹಿತ್ಯ ರಚಿಸುವ ಮೂಲಕ ಮಕ್ಕಳಿಗೆ ಕಲಿಸುವಿಕೆಯಲ್ಲಿ ಹೊಸತನ ತರುವಂತಾಗಬೇಕು.
ಅಧಿಕಾರಿಗಳಾದವರು ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಿಕ್ಷಕರಿಗೆ ಮತ್ತು ಮಕ್ಕಳ ಕಲಿಕೆಗೆ ಚುರುಕು ಮುಟ್ಟಿಸಲು ಸಾಧ್ಯ. ಯಾರೇ ಪುಸ್ತಕವನ್ನುಕೊಡಲಿ ಅವರು ಆ ಪುಸ್ತಕವನ್ನು ಓದಬೇಕು. ಅದರ ಬಗ್ಗೆ ಅಭಿಪ್ರಾಯ ಹೇಳಬೇಕು ಎಂಬ ಅಭಿಲಾಷೆ ಲೇಖಕ ಇಟ್ಟುಕೊಂಡು ಪುಸ್ತಕವನ್ನು ನೀಡಿರುತ್ತಾನೆ. ಓದಿ ಅಭಿಪ್ರಾಯ ಹೇಳಿದರೆ ಲೇಖಕನಿಗೆ ಇನ್ನಷ್ಟುಬರೆಯಬೇಕು ಎಂಬ ಹುಮ್ಮಸ್ಸು ಬರುವುದು. ಸಾಹಿತ್ಯ ಸಮೃದ್ಧಿಯಾಗಲು ಬರಹಗಾರನ ಬೆನ್ನು ತಟ್ಟುವ ಕೆಲಸವಾಗಬೇಕು. ನನಗೆ ಯಾರೇ ಪುಸ್ತಕ ಕೊಟ್ಟರೂ ತಿಂಗಳೊಪ್ಪತ್ತಿನಲ್ಲಿ ಅಭಿಪ್ರಾಯ ತಿಳಿಸಿ ಪತ್ರ ಬರೆಯುತ್ತೇನೆ.
Hubballi: ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ.ಶಿವಕುಮಾರ್
ಆಗ ಲೇಖಕರು ತನ್ನ ಶ್ರಮ ಸಾರ್ಥಕವಾಯಿತು ಎಂದು ಪ್ರತಿಕ್ರಿಯಿಸುವರು. ಅದಕ್ಕಾಗಿ ನಿಮಗೆ ಯಾರಾದರು ಪುಸ್ತಕ ಕೊಟ್ಟರೆ ಬಿಡುವು ಮಾಡಿಕೊಂಡು ಓದಿ ಪ್ರತಿಕ್ರಿಯಿಸುವ ರೂಢಿ ಬೆಳೆಸಿಕೊಳ್ಳಿ ಎಂದರು. ಇಂದಿನ ಶಿಕ್ಷಣ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬೇರೆಯಾಗಿಲ್ಲ. ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಬದ್ಧತೆ ಇಲ್ಲದಾಗಿದೆ. ಶಿಕ್ಷಣ ಇಲಾಖೆಯಲ್ಲಿ ಇರುವವರು ಇಡೀ ಸಮಾಜಕ್ಕೆ ಮಾರ್ಗದರ್ಶಕರಂತೆ ಇರಬೇಕಾಗಿದೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ವ್ಯಕ್ತಿಯಾಗಿರುವ ನಾನು ಏನಾದರೂ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಇಡೀ ಶಿಕ್ಷಣ ಕುಲಕ್ಕೆ ಕೆಟ್ಟಹೆಸರು ಬರುತ್ತದೆ ಎಂದರು.
ರಾಜಕಾರಣ ಇಂದು ಕಲುಷಿತಗೊಂಡಿದೆ. ಗಂಭೀರತೆ ಮಾಯವಾಗುತ್ತಿದೆ. ಅಲ್ಲಿ ಬದಲಾವಣೆ ಕಾಣುವುದು ಅಸಾಧ್ಯವಾಗುತ್ತಿದೆ. ಆ ಕಾರಣಕ್ಕಾಗಿ ಶಿಕ್ಷಣ ಇಲಾಖೆಯ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಹೊಸ ಸಮಾಜ ರೂಪಿಸುವತ್ತ ಶಿಕ್ಷಕ ಸಮೂಹ ಮತ್ತು ಶಿಕ್ಷಣಾಧಿಕಾರಿಗಳು ಆಲೋಚಿಸುವಂತಾಗಬೇಕು. ಹೊರಟ್ಟಿ, ಶಿಕ್ಷಕರನ್ನೊಳಗೊಂಡು ಶಿಕ್ಷಣ ಕ್ಷೇತ್ರದಲ್ಲಿಯ ಎಲ್ಲ ಅಧಿಕಾರಿಗಳು ಮೌಲಿಕ ಕೃತಿ ರಚಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಸಾಧ್ಯ. ಕೃತಿ ರಚನೆಯಲ್ಲಿ ಡಾ. ವಿದ್ಯಾ ಕುಂದರಗಿಯವರ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ, ಪರಿಶ್ರಮ ಅಪಾರವಾಗಿದೆ. ಈ ಕೃತಿ ಸಂಶೋಧನಾ ಕ್ಷೇತ್ರಕ್ಕೊಂದು ಉತ್ತಮ ಕೊಡುಗೆಯಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಡಾ. ಬಸು ಬೇವಿನಗಿಡದ ಮಾತನಾಡಿ, ಧಾರವಾಡದ ‘ಡೈಟ್’ ಉತ್ತರ ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿದ್ದು, ಈ ಭಾಗದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಯಲ್ಲಿ ಚಾರಿತ್ರಿಕ ಕಾರ್ಯ ಮಾಡಿದೆ. ಕ.ವಿ.ವಿ. ಹಾಗೂ ಇತರ ಸಂಸ್ಥೆ ಸ್ಥಾಪನೆಯಲ್ಲಿ ಅದರ ಪಾತ್ರ ಅನನ್ಯವಾದುದು. ಡಾ. ವಿದ್ಯಾಕುಂದರಗಿ ಅವರು ಟ್ರೇನಿಂಗ್‌ಕಾಲೇಜಿನ ಬಗ್ಗೆ ಸಂಗ್ರಹಿಸಿದ ಮಾಹಿತಿ, ಪಟ್ಟಪರಿಶ್ರಮ ಅಪಾರ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಡಾ. ವಿದ್ಯಾಕುಂದರಿಯವರು ರಚಿಸಿದ ಇಂತಹ ಅಮೂಲ್ಯ ಕೃತಿಯನ್ನುಎಲ್ಲರೂಓದುವುದರಿಂದಗ್ರಂಥಕರ್ತರಿಗೆ ಪೋ›ತ್ಸಾಹ ನೀಡಿದಂತೆ. ಇಂತಹ ಮೌಲ್ಯಾಧಾರಿತ ಕೃತಿಗಳ ರಚನೆಅವರಿಂದಾಗಲಿ ಎಂದು ಹಾರೈಸಿದರು.
ಸಮಾಜದ ಸರ್ವರಿಗೂ ಶಿಕ್ಷಣ ಸಂಸ್ಥೆ ಅನುಕೂಲವಾಗಲಿ: ಸಚಿವ ಎಂಟಿಬಿ ನಾಗರಾಜ್
ಒಂದನೇ ಗೋಷ್ಠಿಯಲ್ಲಿ ಕನ್ನಡ ಶಿಕ್ಷಣ ವಿಕಾಸ ಮತ್ತು ಸಾಹಿತ್ಯದ ನವೋದಯ ಕುರಿತು ವಿವಿಧ ವಿಷಯಗಳ ಮೇಲೆ ಡಾ. ಗುರುಪಾದ ಮರಿಗುದ್ದಿ, ಡಾ. ಶಿವಾನಂದ ಕೆಳಗಿನಮನಿ, ಡಾ. ವೆಂಕಟಗಿರಿ ದಳವಾಯಿ, ಡಾ. ಗುಂಡಣ್ಣ ಕಲಬುರ್ಗಿ ಹಾಗೂ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿದರು. ಹಿರಿಯ ಸಾಹಿತಿ ವೆಂಕಟೇಶ ಮಾಚಕನೂರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. 2ನೇ ಗೋಷ್ಠಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಹೇಮಾ ಪಟ್ಟಣಶೆಟ್ಟಿವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಸಾ.ಶಿ. ಇಲಾಖೆಯ ವಿಶ್ರಾಂತ ನಿರ್ದೇಶಕ ಶಿವಶಂಕರ ಹಿರೇಮಠ ಸಮಾರೋಪ ನುಡಿಗಳನ್ನಾಡಿದರು. ಕ.ವಿ.ವ. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಭಾವಿಕಟ್ಟಿ, ಆರ್.ಎಂ. ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ದರಗದ, ಸುಜಾತಾ ತಿಮ್ಮಾಪೂರ, ಗುರು ತಿಗಡಿ, ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ ಮುಂತಾದವರು ಭಾಗವಹಿಸಿದ್ದರು.