2023ರ ಚುನಾವಣೆ ದೇಶದ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ

By Kannadaprabha News  |  First Published Apr 2, 2023, 7:05 AM IST

2023ರ ಚುನಾವಣೆ ದೇಶದ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಕೋಟೆ ಬೆಟ್ಟಯ್ಯ ಅಭಿಪ್ರಾಯಪಟ್ಟರು.


 ಎಚ್‌.ಡಿ. ಕೋಟೆ :  2023ರ ಚುನಾವಣೆ ದೇಶದ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಕೋಟೆ ಬೆಟ್ಟಯ್ಯ ಅಭಿಪ್ರಾಯಪಟ್ಟರು.

ತಾಲೂಕಿನ ದಲಿತ ಸಂಘಟನೆಗಳ ಐಕ್ಯ ಸಮನ್ವಯ ಸಮಿತಿಯಿಂದ ಶನಿವಾರ ನಡೆದ ಕರ್ನಾಟಕದ ವಿಧಾನಸಭೆ ಚುನಾವಣೆಯ ಸಂಬಂಧ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.

Latest Videos

undefined

ದೇಶದಲ್ಲಿ ಧರ್ಮದ ಹೆಸರಿನಲ್ಲಿಗಳ ಹೆಸರಿನಲ್ಲಿ ಮತ್ತು ದೇವರು ದಿಂಡಿರ ಹೆಸರಿನಲ್ಲಿ ಸುಲಿದು ಸಿಪ್ಪೆ ಮಾಡುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಜಾಗೃತರಾಗಬೇಕಾದ ಶೋಷಿತ ಸಮುದಾಯಗಳು ಇಂದು ಮೌಢ್ಯ ಮತ್ತು ಕಂದಚಾರಕ್ಕೆ ಸಿಲುಕಿ ನಲುಗುತ್ತಿವೆ ಎಲ್ಲ ಶೋಷಿತ ಸಮುದಾಯಗಳ ಸಂಘಟನೆಗಳು ಒಂದಾಗಿ ಶಕ್ತಿಗಳನ್ನು ಸೋಲಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಗತಿಪರ ಮುಖಂಡ ಅಕ್ಬರ್‌ ಪಾಷ ಮಾತನಾಡಿ, ನೂರಾರು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಅಸಮಾನತೆ ಅಸ್ಪ ೃಶ್ಯತೆ ಮತ್ತು ತಾರತಮ್ಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ವ್ಯವಸ್ಥಿತ ರಾಜಕೀಯ ಗುಂಪು ನಮ್ಮ ಮೇಲೆ ಸವಾರಿ ಮಾಡುತ್ತಿದೆ, ಇದನ್ನು ಕೊನೆಗಾಣಿಸಬೇಕಾದರೇ ನಮ್ಮ ರಾಜಕೀಯ ನಿರ್ಧಾರ ಗಟ್ಟಿಯಾಗಿರಬೇಕು ಎಂದು ತಿಳಿಸಿದರು.

ಜೀವಿಕ ಉಮೇಶ್‌ ಬಿ. ನೂರಲಕುಪ್ಪೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶವನ್ನು ಆಳುವವರು ಬಂಡವಾಳಶಾಹಿಗಳು, ಭೂಮಾಲೀಕರು, ಭೂಮಾಫಿಯಗಳು, ಹಣವಂತರು ಮತ್ತು ದೇಶದ ಸಂಪತ್ತನ್ನ ಲೂಟಿ ಮಾಡುವ ಕೈಗಳು ಇಂದು ನಮ್ಮನ್ನ ಆಳುತ್ತಿದ್ದು, ಇವರಿಂದ ನಾವು ಯಾವ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯ, ಆದ್ದರಿಂದ ಬಡವರ ಶೋಷಿತರ ಅನ್ಯಾಯಕ್ಕೆ ಒಳಗಾದವರ ಪರವಾಗಿ ಹೋರಾಡುವ ಕೈಗಳನ್ನ ಬಲಪಡಿಸಬೇಕು ಎಂದು ಹೇಳಿದರು.

ದೊಡ್ಡಸಿದ್ದು ಮತ್ತು ಸಣ್ಣಕುಮಾರ ಮಾತನಾಡಿ, ಮುಂಬರುವ ಚುನಾವಣೆ ಶೋಷಿತ ಸಮುದಾಯಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ ಇಂದು ನಾವು ತೆಗೆದುಕೊಳ್ಳುವ ತಿರ್ಮಾನ ಮುಂದಿನ ನಮ್ಮ ಸಮುದಾಯಗಳ ಅಸ್ತಿತ್ವಕ್ಕೆ ಸಹಕಾರಿಯಾಗಬೇಕಿದೆ ಎಂದರು.

ಅಭ್ಯರ್ಥಿಗಳ ನಾಮಪತ್ರ ಅಂತಿಮವಾದ ಮೇಲೆ ತಾಲೂಕಿನ ಎಲ್ಲ ಸಂಘಟನೆಗಳ ಪ್ರಮುಖರು ಸೇರಿ ಅಂತಿಮವಾಗಿ ನಿರ್ಣಯ ಕೈಗೊಳ್ಳಲು ಚರ್ಚೆ ಮಾಡಲಾಯಿತು.  ರಾಜಣ್ಣ, ಸಣ್ಣಕುಮಾರ್‌, ದೊಡ್ಡಸಿದ್ದು, ಸಣ್ಣ ಸ್ವಾಮಿ, ನಿಂಗರಾಜ…, ಗೋವಿಂದ ರಾಜು, ಸಿದ್ದರಾಜು, ಶಿವಣ್ಣ, ಪುಟ್ಟಮಾದು, ದಾಸಯ್ಯ, ಸುರೇಶ್‌, ಕುಮಾರ್‌ ಇದ್ದರು.

ಹೈ ಕಮಾಂಡ್ ಒಪ್ಪಿದರೆ ಎರಡು ಕಡೆ ಸ್ಪರ್ಧೆ

ಕೋಲಾರ (ಏ.02): ‘ನಾನು ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ನಂದಿನಿ ಪ್ಯಾಲೇಸ್‌ನಲ್ಲಿ ಏ.9ರಂದು ಕಾಂಗ್ರೆಸ್‌ ಆಯೋಜಿಸಿರುವ ಸತ್ಯಮೇವ ಜಯತೆ ಸಮಾವೇಶದ ಅಂಗವಾಗಿ ಶನಿವಾರ ನಡೆದ ಪುರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ, ಸಿದ್ದರಾಮಯ್ಯನವರಿಗೆ ಕೋಲಾರದಿಂದಲೇ ಸ್ಪರ್ಧಿಸಲು ಕಾರ್ಯಕರ್ತರು ತೀವ್ರ ಒತ್ತಡ ಹಾಕಿದರು. 

ಈ ಬಗ್ಗೆ ಪ್ರತಿಕ್ರಿಯಿಸಿ, ವರುಣ ಮತ್ತು ಕೋಲಾರ ಎರಡೂ ಕಡೆ ಸ್ಪರ್ಧೆ ಮಾಡುವ ಇಚ್ಛೆ ನನಗಿದೆ. ಆದರೆ, ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ವರುಣ ನನ್ನ ಸ್ವ ಕ್ಷೇತ್ರ. ಇದು ನನ್ನ ಕೊನೆಯ ಚುನಾವಣೆ. ವರುಣ ಕ್ಷೇತ್ರದಿಂದ ನನ್ನ ರಾಜಕೀಯ ಆರಂಭವಾಗಿದ್ದು, ತಾಲೂಕು ಬೋರ್ಡ್‌, ಶಾಸಕ ಸ್ಥಾನ, ಲೋಕಸಭೆಗೆ ಅಲ್ಲಿಂದಲೇ ಸ್ಪರ್ಧೆ ಮಾಡಿದ್ದೇನೆ. ಆದ್ದ ರಿಂದ ವರುಣದಲ್ಲಿ ನಿಲ್ಲುತ್ತಿದ್ದೇನೆ. ನನ್ನ ಹುಟ್ಟೂರಿನಿಂದ ಸ್ಪರ್ಧಿಸಬೇಕು ಅನ್ನೋದು ನನ್ನ ಆಸೆ. ಕೋಲಾರ ಸೇರಿ ರಾಜ್ಯದ 25 ಕಡೆ ಸ್ಪರ್ಧೆಗೆ ನನಗೆ ಆಗ್ರಹವಿದೆ. ಇನ್ನು, ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಎರಡು ಕಡೆಯಿಂದ ಅವಕಾಶ ಕೊಟ್ಟರೂ ನಿಲ್ಲುವೆ ಎಂದು ತಿಳಿಸಿದರು.

ಕಳ್ಳರನ್ನು ಕಳ್ಳ ಎನ್ನುವುದು ಅಪರಾಧವೇ: ರಣದೀಪ್‌ ಸಿಂಗ್‌ ಸುರ್ಜೇವಾಲ

ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ಪರಾರಿಯಾದ ಚೋರರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿಯವರು, ರಾಹುಲ್‌ ಗಾಂಧಿಗೆ ಪ್ರಶ್ನಿಸಲು ಅವಕಾಶ ಇಲ್ಲದಂತೆ ಪ್ರಕರಣ ದಾಖಲು ಮಾಡಿ 2 ವರ್ಷ ಜೈಲು ಶಿಕ್ಷೆ ಕೊಡಿಸಿದ್ದಾರೆ. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ, ಪ್ರಜಾತಂತ್ರದ ಧಮನ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಹೋರಾಟ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!