ವರುಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು : ವರುಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು 2013 ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆದು, Þಗಿ 5 ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅನ್ನಭಾಗ್ಯದಂತಹ ನೂರಾರು ಜನಪರ ಯೋಜನೆಗಳನ್ನು ನಾಡಿನ ಜನರಿಗೆ ನೀಡಿದ್ದಾರೆ. ವರುಣ ಕ್ಷೇತ್ರ ಪ್ರತಿಯೊಂದು ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರು, ಸುಸಜ್ಜಿತ ರಸ್ತೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ನೀಡಿ ವರುಣವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆ. ಹೀಗಾಗಿ, ಈ ಚುನಾವನಣೆಯಲ್ಲಿ ಮತ್ತೆ ಅವರು ವರುಣದಿಂದಲ್ಲೇ ಸ್ಪರ್ಧಿಸಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
undefined
ವರುಣದಲ್ಲಿ ಲಿಂಗಾಯಿತ ಮತಗಳು ಅಧಿಕವಿದ್ದು, ನಂತರ ದಲಿತರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲವು ಖಚಿತ ಎಂದು ಅವರು ಹೇಳಿದರು. ಕಾಂಗ್ರೆಸ್ ಮುಖಂಡರಾದ ನಾಗೇಶ್, ಪರಶಿವಮೂರ್ತಿ, ಆಯರಹಳ್ಳಿ ಪೂರ್ಣಚಂದ್ರ, ಸಿ. ಮಹೇಶ್, ನಾಗೇಂದ್ರ, ಕುಮಾರ್, ಮಂಜಪ್ಪ ಇದ್ದರು.
ಹೈ ಕಮಾಂಡ್ ಒಪ್ಪಿದರೆ ಎರಡು ಕಡೆ ಸ್ಪರ್ಧೆ
ಕೋಲಾರ (ಏ.02): ‘ನಾನು ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದ ನಂದಿನಿ ಪ್ಯಾಲೇಸ್‌ನಲ್ಲಿ ಏ.9ರಂದು ಕಾಂಗ್ರೆಸ್ ಆಯೋಜಿಸಿರುವ ಸತ್ಯಮೇವ ಜಯತೆ ಸಮಾವೇಶದ ಅಂಗವಾಗಿ ಶನಿವಾರ ನಡೆದ ಪುರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ, ಸಿದ್ದರಾಮಯ್ಯನವರಿಗೆ ಕೋಲಾರದಿಂದಲೇ ಸ್ಪರ್ಧಿಸಲು ಕಾರ್ಯಕರ್ತರು ತೀವ್ರ ಒತ್ತಡ ಹಾಕಿದರು.
ಈ ಬಗ್ಗೆ ಪ್ರತಿಕ್ರಿಯಿಸಿ, ವರುಣ ಮತ್ತು ಕೋಲಾರ ಎರಡೂ ಕಡೆ ಸ್ಪರ್ಧೆ ಮಾಡುವ ಇಚ್ಛೆ ನನಗಿದೆ. ಆದರೆ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ವರುಣ ನನ್ನ ಸ್ವ ಕ್ಷೇತ್ರ. ಇದು ನನ್ನ ಕೊನೆಯ ಚುನಾವಣೆ. ವರುಣ ಕ್ಷೇತ್ರದಿಂದ ನನ್ನ ರಾಜಕೀಯ ಆರಂಭವಾಗಿದ್ದು, ತಾಲೂಕು ಬೋರ್ಡ್, ಶಾಸಕ ಸ್ಥಾನ, ಲೋಕಸಭೆಗೆ ಅಲ್ಲಿಂದಲೇ ಸ್ಪರ್ಧೆ ಮಾಡಿದ್ದೇನೆ. ಆದ್ದ ರಿಂದ ವರುಣದಲ್ಲಿ ನಿಲ್ಲುತ್ತಿದ್ದೇನೆ. ನನ್ನ ಹುಟ್ಟೂರಿನಿಂದ ಸ್ಪರ್ಧಿಸಬೇಕು ಅನ್ನೋದು ನನ್ನ ಆಸೆ. ಕೋಲಾರ ಸೇರಿ ರಾಜ್ಯದ 25 ಕಡೆ ಸ್ಪರ್ಧೆಗೆ ನನಗೆ ಆಗ್ರಹವಿದೆ. ಇನ್ನು, ಮಾನಸಿಕವಾಗಿ ಕೋಲಾರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಎರಡು ಕಡೆಯಿಂದ ಅವಕಾಶ ಕೊಟ್ಟರೂ ನಿಲ್ಲುವೆ ಎಂದು ತಿಳಿಸಿದರು.
ಕಳ್ಳರನ್ನು ಕಳ್ಳ ಎನ್ನುವುದು ಅಪರಾಧವೇ: ರಣದೀಪ್ ಸಿಂಗ್ ಸುರ್ಜೇವಾಲ
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ಪರಾರಿಯಾದ ಚೋರರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿಯವರು, ರಾಹುಲ್ ಗಾಂಧಿಗೆ ಪ್ರಶ್ನಿಸಲು ಅವಕಾಶ ಇಲ್ಲದಂತೆ ಪ್ರಕರಣ ದಾಖಲು ಮಾಡಿ 2 ವರ್ಷ ಜೈಲು ಶಿಕ್ಷೆ ಕೊಡಿಸಿದ್ದಾರೆ. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ, ಪ್ರಜಾತಂತ್ರದ ಧಮನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹೋರಾಟ ಬೆಂಬಲಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಆರಗ ರಾಜೀನಾಮೆಗೆ ಆಗ್ರಹ: ಕಗ್ಗಲೀಪುರದ ಬಾಲಕಿಯ ಅತ್ಯಾಚಾರ ಪ್ರಕರಣ ನಡೆದು ವಾರ ಕಳೆದಿಲ್ಲ. ಅಷ್ಟರಲ್ಲೇ ಕೋರಮಂಗಲದಲ್ಲಿ ಯುವತಿಯನ್ನು ನಾಲ್ವರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನು ಜನ ಕಳೆದುಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಸಮಾಜದಲ್ಲಿನ ದುಷ್ಟರು, ಸಮಾಜಘಾತುಕರನ್ನು ಸದೆ ಬಡೆಯಬೇಕಿದ್ದ ಬಿಜೆಪಿ ಸರ್ಕಾರವು ರೌಡಿಶೀಟರ್, ಕೊಲೆಗಡುಕರಿಗೆ ರತ್ನಗಂಬಳಿ ಹಾಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದರ ಫಲವನ್ನು ಜನಸಾಮಾನ್ಯರು ಉಣ್ಣುವಂತಾಗಿದೆ.