: ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಸಂವಿಧಾನ ಬಚಾವೋ ದೇಶ್ ಬಚಾವೋ ಎಂಬ ಘೋಷಣೆಯೊಂದಿಗೆ ಏ.2ರ ಬೆಳಗ್ಗೆ 11ಕ್ಕೆ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದೆ.
ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಸಂವಿಧಾನ ಬಚಾವೋ ದೇಶ್ ಬಚಾವೋ ಎಂಬ ಘೋಷಣೆಯೊಂದಿಗೆ ಏ.2ರ ಬೆಳಗ್ಗೆ 11ಕ್ಕೆ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದೆ.
2023ರ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಹುಚ್ಚುತನದಲ್ಲಿ ಬಿಜೆಪಿ ಸಂವಿಧಾನಬದ್ಧ ಮೀಸಲಾತಿಯನ್ನು ತನ್ನ ಇಚ್ಛೆಗೆ ಅನುಸಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ವಿರೋಧಿ ಧರಣಿ ಹಮ್ಮಿಕೊಂಡಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲಾ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು ಎಂದು ಜಿಲ್ಲಾ ಕಾರ್ಯದರ್ಶಿ ಎಂ. ಶಿವಪ್ರಸಾದ್ ತಿಳಿಸಿದ್ದಾರೆ.
undefined
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಗರ್‌ಹುಕುಂ ರೈತರ ರಕ್ಷಣೆ
ಸೊರಬ (ಏ.02): ತಾಳಗುಪ್ಪದಲ್ಲಿ ರೈತರಿಗಾದ ಅನ್ಯಾಯ ತಾಲೂಕು, ಜಿಲ್ಲೆಯಲ್ಲಿ ಇನ್ನೆಂದೂ ಮರುಕಳಿಸದಂತೆ ಕಾಂಗ್ರೆಸ್‌ವನ್ನು ಅಧಿಕಾರಕ್ಕೆ ತರುವ ಅಗತ್ಯವಿದೆ. ತಾವು ಅಧಿಕಾರಕ್ಕೆ ಬಂದಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳುವ ಜತೆಗೆ ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಬಂಗಾರಧಾಮದಲ್ಲಿ ವಿವಿಧ ಪಕ್ಷಗಳಿಂದ ಸೇರ್ಪಡೆಗೊಂಡ ಕಾರ್ಯಕರ್ತರು, ಮುಖಂಡರನ್ನು ಅಭಿನಂದಿಸಿ ಮಾತನಾಡಿದ ಅವರು, ಜನತೆ ತಮ್ಮನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದರೆ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಸ್.ಬಂಗಾರಪ್ಪ ಅವರಿಗೆ ಬಂಗಾರಪ್ಪ ಅವರೇ ಸಾಟಿ. ರಾಜ್ಯದಲ್ಲಿ ಮತ್ತೊಬ್ಬ ಎಸ್.ಬಂಗಾರಪ್ಪ ಜನಿಸಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನ ಮುಂದಿಟ್ಟುಕೊಂಡು ಮುನ್ನೆಡೆದಾಗ ಮಾತ್ರ ಜನಸಾಮಾನ್ಯರ ಹಿತಕಾಯಲು ಸಾಧ್ಯ ಎಂದರು. ಕ್ಷೇತ್ರದಲ್ಲಿ ನನ್ನ ನಾಯಕತ್ವವನ್ನು ಬೆಂಬಲಿಸಿ ಅನೇಕರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿರುವುದನ್ನು ಸ್ವಾಗತಿಸುವ ಜೊತೆಗೆ ತಮ್ಮ ಮೇಲೆ ಜವಾಬ್ದಾರಿಯೂ ಹೆಚ್ಚಾಗಿದೆ.
ನನ್ನ ಅಭಿವೃದ್ಧಿ ನೋಡಿ ಮತ್ತೊಮ್ಮೆ ನನಗೆ ಆಶೀರ್ವದಿಸಿ: ಶಾಸಕ ಹರ್ಷವರ್ಧನ್
ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯ ಸತೀಶ್ ಅರ್ಜುನಪ್ಪ ಮಾತನಾಡಿ, ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಗೌರವ ಮತ್ತು ಬೆಲೆ ಇಲ್ಲದಂತಾಗಿದೆ. ಕ್ಷೇತ್ರದ ಬಿಜೆಪಿಯಲ್ಲಿ ಆಮ್ಲಜನಕದ ಕೊರತೆ ಇದೆ. ಒಂದು ಸಿಲಿಂಡರ್ ಶಾಸಕರ ಬಳಿ ಇದ್ದರೆ, ಮತ್ತೊಂದು ಸಿಲಿಂಡರ್ ಶಿಕಾರಿಪುರದಲ್ಲಿದೆ. ಸಾಮಾನ್ಯರ ಸ್ಥಿತಿ ಆಮ್ಲಜನಕದ ಕೊರತೆಯಿಂದ ನರಳುವಂತಾಗಿರುವುದು ಇಲ್ಲಿನ ರಾಜಕೀಯ ಸ್ಥಿತಿಯಾಗಿದೆ. ಮಧು ಬಂಗಾರಪ್ಪ ಅವರಿಗೆ ಎಲ್ಲ ಪಕ್ಷದವರನ್ನು ವಿಶ್ವಾಸದಿಂದ ಕಾಣುವ ಗುಣ ಅವರಲ್ಲಿದೆ.
ಅವರನ್ನು ಮುಂದಿನ ಶಾಸಕರನ್ನಾಗಿಸುವ ಜೊತೆಗೆ ಸಚಿವರನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು. ತಾಪಂ ಮಾಜಿ ಸದಸ್ಯರಾದ ಪುರುಷೋತ್ತಮ ಕುಪ್ಪಗಡ್ಡೆ, ಹನುಮಂತಪ್ಪ ಆನವಟ್ಟಿ, ವಿಜಯಕುಮಾರ್ ಜಡೆ, ದೂಗೂರು ಗ್ರಾಪಂ ಅಧ್ಯಕ್ಷೆ ತುಳಸಿ, ಉಪಾಧ್ಯಕ್ಷ ಫಯಾಜ್ ಅಹ್ಮದ್, ಉಳವಿ ಗ್ರಾಪಂ ಸದಸ್ಯೆ ನಾಗಮ್ಮ, ಭೈರಪ್ಪ, ಮುಖಂಡರಾದ ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಜೈಶೀಲಪ್ಪ, ಅಶೋಕ್ ಹೊಸಬಾಳೆ ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಬ್ಲಾಕ್ ಅಧ್ಯಕ್ಷರಾದ ಅಣ್ಣಪ್ಪ ಹಾಲಘಟ್ಟ, ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮಹಿಳಾ ಅಧ್ಯಕ್ಷೆ ಸುಜಾತಾ ಜೋತಾಡಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ವಿ. ಗೌಡ, ಯುವ ಘಟಕದ ಅಧ್ಯಕ್ಷ ಕೆ.ಪಿ. ಪ್ರವೀಣ್ ಕುಮಾರ್, ಮಾಜಿ ಜಿಪಂ ಸದಸ್ಯರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ವೀರೇಶ್ ಕೊಟಗಿ, ಮುಖಂಡರಾದ ಎಚ್. ಗಣಪತಿ, ಎಂ.ಡಿ. ಶೇಖರ್ ಮತ್ತಿತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.