Hubballi-Dharwad 7 ತಿಂಗಳಲ್ಲಿ 75 ಕೆರೆ ನಿರ್ಮಾಣದ ಗುರಿ

By Suvarna News  |  First Published May 10, 2022, 12:47 PM IST
  • ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆ 
  • ಮೊದಲ ಅಮೃತ ಸರೋವರ ನೂತನ ಕೆರೆ ನಿರ್ಮಾಣಕ್ಕೆ ಚಾಲನೆ
  • ಖಾಸಗಿ ಕಂಪನಿಗಳ ಸಿ.ಎಸ್.ಆರ್‌. ಕಾರ್ಯ ಚಟುವಟಿಕೆಯಡಿ ಕೆರೆಗಳಿಗೆ ಕಾಯಕಲ್ಪ!
  • ಭವಿಷ್ಯದ ಜಲ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳಿ.

ಹುಬ್ಬಳ್ಳಿ (ಮೇ.10): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 75  ಕೆರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಶರೇವಾಡ  ಗ್ರಾಮದ 3 ಎಕರೆ ಪ್ರದೇಶದಲ್ಲಿ ಜಿಲ್ಲೆಯ ಮೊದಲ ಅಮೃತ ಸರೋವರ ಕೆರೆ ನಿರ್ಮಾಣ ಮಾಡಲಾಗುತ್ತಿದೆ. 

ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ 75 ಅಮೃತ ಸರೋವರಗಳ ಪೈಕಿ ಮೊದಲನೆಯ ಅಮೃತ ಸರೋವರವನ್ನು ಟಾಟಾ ಕಂಪನಿಯವರ ಸಿ.ಎಸ್.ಆರ್‌. ಕಾರ್ಯ ಚಟುವಟಿಕೆಯಡಿ ನೂತನ ಕೆರೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಗಿದೆ‌.  ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್  ಜೋಶಿ ಭೂಮಿ ಪೂಜೆ ನೆರವೇರಿಸಿದ್ದಾರೆ.

Tap to resize

Latest Videos

ಏಳು ತಿಂಗಳಲ್ಲಿ75 ಕೆರೆಗಳ ನಿರ್ಮಾಣದ ಗುರಿ: ಮುಂದಿನ 7 ತಿಂಗಳ ಅವಧಿಯಲ್ಲಿ 75 ಕೆರೆಗಳನ್ನು ಅಮೃತ ಸರೋವರ ಹೆಸರಿನಲ್ಲಿ  ನಿರ್ಮಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿ 60 ಕೋಟಿ ಜನರು ಶುದ್ಧ ಕುಡಿಯುವ ನೀರು ಸಿಗದೇ ಕಷ್ಟ ಎದುರಿಸುತ್ತಿದ್ದಾರೆ. ನೀರು ಅಮೃತವಿದ್ದಂತೆ, ಇಸ್ರೇಲ್ ದೇಶದಲ್ಲಿ  ನೀರಿನ ಪ್ರತಿ ಹನಿಯನ್ನು ಸದ್ಬಳಕೆ ಮಾಡಿಕೊಳ್ಳುವ ತಾಂತ್ರಿಕತೆಗಳನ್ನು ಪಾಲಿಸುತ್ತಾರೆ.  ನಮ್ಮ ದೇಶದಲ್ಲಿಯೂ  ನೀರಿನ ಸದ್ಬಳಕೆಗೆ ಆದ್ಯತೆ ನೀಡುವ ಉದ್ದೇಶದಿಂದ ಅಮೃತ ಯೋಜನೆಯಡಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

VOCAL FOR LOCAL ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳಕ್ಕೆ ಮುಂದಾದ ರಾಜ್ಯ ಸರಕಾರ

ಅನೇಕ ಕಡೆಗಳಲ್ಲಿ ಬೋರೆವೆಲ್ ಮೂಲಕ ನೀರು ಪೂರೈಸಲಾಗುತ್ತದೆ. ಅದು ಕುಡಿಯಲು ಯೋಗ್ಯವಿರುವುದಿಲ್ಲ. ಕೊಳವೆಬಾವಿಗಳು ಬೇಸಿಗೆ ಅವಧಿಯಲ್ಲಿ ಬತ್ತಿ ಹೋಗುತ್ತವೆ. ಆದರೆ ಕೆರೆಯ ನೀರನ್ನು ಶುದ್ಧೀಕರಿಸಿ ಕುಡಿಯಬಹುದು. ನೀರನ್ನು ಮಿತವಾಗಿ ಅಗತ್ಯಕ್ಕೆ ಅನುಗುಣವಾಗಿ  ಬಳಕೆ ಮಾಡಿಕೊಳ್ಳಬೇಕು ಎಂಬ ವಿಚಾರವನ್ನು ಜನರಲ್ಲಿ ಜಾಗೃತಿ‌ಮೂಡಿಸಿ ಕೆರೆಗಳ ಅಭಿವೃದ್ಧಿಗೆ ಮುಂದಾಗುತ್ತಿದ್ದಾರೆ.

BMRCL Recruitment 2022: ಫೈರ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ

ಕೇವಲ ಗ್ರಾಮೀಣ ಭಾಗದ ಕೆರೆಗಳು ಮಾತ್ರವಲ್ಲ, ಮಹಾ ನಗರಗಳಲ್ಲಿ ಕೆರೆಗಳನ್ನು ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಕುಡಿಯುವ ನೀಡಿನ ಸಮಸ್ಯೆ ಮುಂದಿನ ಒಂದು ದಶಕದಲ್ಲಿ ಹೆಚ್ಚಳವಸಗುವ ಸಾದ್ಯತೆ ಇದ್ದು,  ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಅಮೃತ ಸರೋವರ  ಯೋಜನೆ ಜಾರಿಗೊಳಿಸಲಾಗುತ್ತಿದೆ.. ಜಿಲ್ಲೆಯ ಕೈಗಾರಿಕೆಗಳು ಕೆರೆ ಅಭಿವೃದ್ಧಿ ಪಡಿಸಲು ಸಿಎಸ‌್ಆರ್‌ ಅಡಿ ಧನ ಸಹಾಯ ನೀಡುವಂತೆ ಕೋರಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಂದಾಗಿದ್ದಾರೆ. 

ಶರೇವಾಡದ ಕೆರೆ ಇತರೆ ಕೆರೆಗಳಿಗೆ ಮಾದರಿಯಾಗಬೇಕು. ಕೆರೆಗಳ ನಿರ್ಮಾಣದಿಂದ ದೇಶದಲ್ಲಿ ನೀರಿನ ಸಮಸ್ಯೆ ತಪ್ಪಲಿದೆ ಎಂದು  ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್  ಜೋಶಿ ತಿಳಿಸಿದ್ದಾರೆ.

Mandya Rain Effect 90ಕ್ಕೂ ಹೆಚ್ಚು ತೆಂಗಿನಮರ ನೆಲಸಮ, ಕಣ್ಣೀರಿಟ್ಟ ವೃದ್ಧೆ

click me!