* ಚಾರಣಿಗರಿಗೆ ಸ್ಫೂರ್ತಿ ಭಾರತಿ
* 36 ದಿನದಲ್ಲಿ 10 ಸಾವಿರದ 500 ಕ್ಕೂ ಹೆಚ್ಚು ಕೀ.ಮಿ ಪ್ರವಾಸ
* 2021 ಮಾ. 27 ರಿಂದ ಪ್ರವಾಸ ಆರಂಭ
ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ(ಮೇ.10): ಲಾಂಗ್ ಬೈಕ್ ರೈಡ್(Bike Ride) ಮಾಡುವುದು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ಲಾಂಗ್ ಬೈಕ್ ಡ್ರೈವ್ ಇಷ್ಟ ಪಡುತ್ತಾರೆ. ಆದರೆ ಇದೊಂದು ಸವಾಲಿನ ಹಾಗೂ ಕಷ್ಟದ ಕೆಲಸ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣು ಮಗಳು(Woman) ಸವಾಲಿನ ಕೆಲಸವನ್ನು ಸಲೀಸಾದ ಕೆಲಸ ಎಂದು ಭಾವಿಸಿ ಬೈಕ್ ಮೂಲಕ ಭಾರತ ಪ್ರವಾಸ(India Tour) ಮಾಡುತ್ತಿದ್ದಾಳೆ. ಹೌದು, ದೆಹಲಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಆ ಹೆಣ್ಣು ಮಗಳು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ತಂಗಿದ್ದು, ಯಾರು ಆ ಹೆಣ್ಣು ಮಗಳು ಅನ್ನೋದನ್ನ ನೋಡೋಣ ಈ ರಿಪೋರ್ಟ್‌ನಲ್ಲಿ.
ಯಾರು ಆ ಬೈಕರ್ ಹೆಣ್ಣು ಮಗಳು?
ನಾವು ನಿಮಗೆ ಇಂದು ಬೈಕ್ ಮೂಲಕ ಭಾರತ ಪ್ರವಾಸ ಮಾಡಲು ಹೊರಟಿರುವ ಬಗ್ಗೆ ಹೇಳುತ್ತಿರುವುದು ಭಾರತಿ ಕೋಟ್ಲಾ(Bharati Kotla). ಇವರು ಹುಟ್ಟಿದ್ದು ಬಳ್ಳಾರಿಯಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ತಾಳೂರುನಲ್ಲಿ, ಪ್ರೌಢ ಶಿಕ್ಷಣ ಎಸ್ ಜಿ ಸ್ಕೂಲ್, ಪದವಿ ಶಿಕ್ಷಣ ಬಸವರಾಜೇಶ್ವರಿ ಸೈನ್ಸ್ ಕಾಲೇಜ್, ಬಿಇಡಿ ಶಿಕ್ಷಣ. ಕೊಟ್ಟೂರೇಶ್ವರ ಬಿಇಡಿ ಕಾಲೇಜ್, ಎಂಸಿಎ ಇಗ್ನೋ ಕಾಲೇಜ್ ಬಳ್ಳಾರಿಯಲ್ಲಿ ಶಿಕ್ಷಣ ಪಡೆದು, ಬೆಂಗಳೂರಿನ ಐಟಿ ಕಂಪನಿಯಲ್ಲಿ 15 ವರ್ಷ ಟೆಕ್ನಿಕಲ್ ರೈಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವಿವಾಹಿತೆರಾಗಿರುವ ಭಾರತಿ ಅವರು 10 ವರ್ಷದ ಅವಧಿಯಲ್ಲಿ ಪ್ರಪಂಚ ಪ್ರವಾಸ(World Tour) ಮಾಡುವ ಉದ್ದೇಶ ಹೊಂದಿದ್ದು, 5 ವರ್ಷದಲ್ಲಿ ಭಾರತದಲ್ಲಿ ಪ್ರತ್ಯೇಕ ರಾಜ್ಯ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದಾರೆ.
ಲಂಚಾವತಾರ: ಪ್ರಧಾನಿಗೆ ದೂರು ನೀಡಿದ್ದ ಕಂಟ್ರಾಕ್ಟರ್ ಮೇಲೇ ಕೇಸ್..!
ಯಾಕೆ ಈ ನಿರ್ಧಾರ?
ಮೊದಲು ಅವರ ಬಾಲ್ಯದ ಕನಸು ಪ್ರಪಂಚ ಸುತ್ತುವದಾಗಿತ್ತು. ಅವರು ಸೇವೆ ಸಲ್ಲಿಸುತ್ತಿದ್ದ ಕಚೇರಿಯಲ್ಲಿ ಒತ್ತಡದ ಕೆಲಸದಿಂದಾಗಿ ನೌಕರಿ ಬಿಡುವ ನಿರ್ಧಾರ ಮಾಡಿದಾಗ ಹೊಳೆದಿದ್ದು, ಬಾಲ್ಯದ ಕನಸನ್ನು ನನಸು ಮಾಡುವದು ಇವರ ಉದ್ದೇಶವಾಗಿದೆ.
ಮುಂದೆ ಹೇಗೆ ಎನ್ನುವ ಯೋಚನೆ?
ಮುಂದೆ ಹೇಗೆ ಎನ್ನುವ ಯೋಚನೆ ಕಾಡತೊಡಗಿದಾಗ ಕೃಷಿಯತ್ತ ಹೋಗುವ ಮನಸು ಮಾಡಿದರು. ಅದಕ್ಕಾಗಿ ಕರ್ನಾಟಕ(Karnataka) ಮತ್ತು ಮಹಾರಾಷ್ಟ್ರ(Maharashtra) ರಾಜ್ಯಾದ್ಯಂತ 2 ವರ್ಷದಲ್ಲಿ ವಾರದ ಕೊನೆಯಲ್ಲಿ ಪ್ರಗತಿ ಪರ ರೈತರನ್ನು ಭೇಟಿ ಮಾಡಿ, ಸಾವಯವ ಕೃಷಿ(Organic Farming) ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಕೆಲವು ಕಾರಣಾಂತರಗಳಿಂದ ಕೃಷಿಯ ಕಡೆಗೆ ಹೋಗುವ ನಿರ್ಧಾರ ಕೈಬಿಟ್ಟು, ಮತ್ತೆ ಮನಸ್ಸು ಬದಲಿಸಿ ತಮಗೆ ಇಷ್ಟವಾದ ಬೈಕ್ ಲ್ಲಿ ಭಾರತ ಸುತ್ತುವ ಕಾಯಕವನ್ನು ಭಾರತಿ ಮುಂದುವರಿಸಿದ್ದಾರೆ.
ಅವರ ಮುಂದಿರುವ ಯೋಜನೆ ಮತ್ತು ಯೋಚನೆ
ಪ್ರವಾಸ ಮಾಡುವ ಮೊದಲು ಅವರಿಗೆ ಒದಗಿದ ಬಹು ದೊಡ್ಡ ಸವಾಲೆಂದರೆ ಹಣಕಾಸು. ದುಡ್ಡನ್ನು ಜೋಡಿಸುವುದು ಹೇಗೆ ಎಂದು ಅವರ ಯೋಚನೆಮಾಡುವಾಗ ಹೊಳೆದದ್ದು ಅವರ ಭಾಗದ ಅಸ್ತಿಯನ್ನು ಮಾರಿ ಅದನ್ನು ಒಂದು ವ್ಯಾಪಾರದಲ್ಲಿ ತೊಡಗಿಸಿ ಬಂದಂತಹ ಲಾಭದಲ್ಲಿ ಪ್ರವಾಸ ಕೈಗೊಳ್ಳುವುದು.
ಯೋಜನೆ ಹೇಗೆ?
ಮೊದಲು ಕಡಿಮೆ ಹಣದಲ್ಲಿ ಪ್ರವಾಸ ಮಾಡುವುದು. ವಾಹನ ಸವಾರರ ಲಿಫ್ಟ್ ಕೇಳಿ ಪ್ರವಾಸ ಮುಂದುವರೆಸುವುದು. ಸ್ಥಳೀಯ ಮಠಮಾನ್ಯಗಳಲ್ಲಿ ವಸತಿ ವ್ಯವಸ್ಥೆ ಜೊತೆಗೆ ಕಡಿಮೆ ದರದಲ್ಲಿ ಊಟ-ಉಪಹಾರ ಮಾಡುತ್ತಾ ಸರಳ ಪ್ರವಾಸ ಕೈಗೊಳ್ಳುವುದು.
2019 ರಲ್ಲಿ ಮತ್ತೆ ಯೋಚನೆಮಾಡಿ ಬೈಕ್ ಲ್ಲಿ ಪ್ರವಾಸ ಮಾಡುವ ನಿರ್ಧಾರ ಮಾಡಿ, ಸೆಪ್ಟೆಂಬರ್ ತಿಂಗಳಲ್ಲಿ ಬಜಾಜ್ ಅವೇಂಜರ್ 220 cc ಬೈಕ್ ಖರೀದಿಸಿ, 2020ರ ಕೊರೋನಾ(Coronavirus) ಮೊದಲನೇ ಅಲೆಯ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಯೋಜನೆ ತಯಾರಿಸಿ 2021 ಮಾ. 27 ರಿಂದ ತಮ್ಮ ಪ್ರವಾಸ ಆರಂಭಿಸಿದರು.
ಬೈಕರ್ ಭಾರತಿ ಬೈಕ್ ಪ್ರವಾಸ
ಮೊದಲನೇ ಪ್ರವಾಸದಲ್ಲಿ ಉತ್ತರ ಭಾರತ ಸುತ್ತುವ ಉದ್ದೇಶ ವಿಟ್ಟುಕೊಂಡ ಭಾರತಿಯವರು ದೆಹಲಿಯನ್ನು ಕೇಂದ್ರ ವಾಗಿಟ್ಟುಕೊಂಡು ಬೆಂಗಳೂರಿನಿಂದ ದೆಹಲಿಗೆ ಬೈಕಲ್ಲಿ 4 ದಿನದಲ್ಲಿ 2100 ಕೀ. ಮಿ. ಪ್ರಯಾಣ ಮಾಡಿದರು.
ನಂತರ ಏ. 12. 2021 ರಂದು ಉತ್ತರಾಖಾಂಡದ ಹರಿದ್ವಾರದಲ್ಲಿ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಹೃಷಿಕೇಶ, ಚೋಪ್ತಾ ವನ್ನು ಒಂದು ವಾರದಲ್ಲಿ ಮುಗಿಸಿದರು. ಕೋವಿಡ್ ಎರಡನೇ ಅಲೆಯ ಕಾರಣದಿಂದ ಪ್ರವಾಸ ಸ್ಥಗಿತ ಗೊಳಿಸಿ ದೆಹಲಿಗೆ ಮರಳಿದರು.
ಲಾಕ್ಡೌನ್ ಸಡಿಲ ಗೊಂಡ ನಂತರ 2021 ರ ಜೂ. 30 ಕ್ಕೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲೇ ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನು, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಸ್ಪಿತಿವ್ಯಾಲಿ ರೈಡ್ ಮಾಡಿದ್ದಾರೆ. ಜಮ್ಮು ಕಾಶ್ಮೀರ ದಲ್ಲಿ "ತಾರ್ಸರ್ ಮಾರ್ಸರ್ " ಲೇಕ್ ಚಾರಣ ವನ್ನು 3 ದಿನದಲ್ಲಿ 50 ಕೀಮಿ ಕ್ರಮಿಸಿ, ಕಾಶ್ಮೀರ ಗ್ರೇಟ್ ಲೆಕ್ಸ್ ಚಾರಣದಲ್ಲಿ 6 ಸರೋವರಗಳನ್ನು ವೀಕ್ಷಣೆ ಮಾಡುತ್ತಾ 7 ದಿನದಲ್ಲಿ 72 ಕೀಮಿ ಚಾರಣ ಮಾಡಿದ್ದಾರೆ. ಲೇ ಲಡಾಕ್ ಲ್ಲಿ ಸಮುದ್ರ ಮಟ್ಟದಿಂದ ಅತೀ ಎತ್ತರದ ಕಣಿವೆ ಪ್ರದೇಶಗಳಾದ "ಕರ್ ದುಂಗ್ಲಾ" ದಿಂದ "ಸುಮೋರೀರಿ" ಲೇಕ್ ವರೆಗೆ ಪ್ರವಾಸ ಮುಗಿಸಿದ್ದಾರೆ.
ಮೇಲಿನ ಎಲ್ಲಾ ಎತ್ತರದ ಕಣಿವೆ ಪ್ರದೇಶಗಳನ್ನು 2 ತಿಂಗಳಲ್ಲಿ 4500 ಕಿಲೋ ಮೀಟರ್ ಸುತ್ತಿದ್ದಾರೆ. ಇವು ಅತೀ ಕಠಿಣ ಮತ್ತು ಭಯಾನಕ ತಾಣಗಳಾಗಿದ್ದು ಇಂತವುಗಳನ್ನು ಏಕಾಂಗಿಯಾಗಿ ಪ್ರವಾಸ ಮಾಡಿದ್ದಾರೆ. 2021ರ ಸೆಪ್ಟೆಂಬರ್ 9 ರಂದು ಭಾರತ ದೇಶದ ಕರಾವಳಿ ಪ್ರದೇಶ ವಾದ "ಗುಜರಾತಿನ ಕಚ್ ನಿಂದ ಪಶ್ಚಿಮ ಬಂಗಾಳದ ಕಲ್ಕತ್ತಾ" ದವರೆಗೆ 36 ದಿನದಲ್ಲಿ 10 ಸಾವಿರದ 500 ಕ್ಕೂ ಹೆಚ್ಚು ಕೀ.ಮಿ ಪ್ರವಾಸ ಮಾಡಿದ್ದಾರೆ.
ಬೈಕರ್ ಭಾರತಿಯವರ ಕರಾವಳಿ ಪ್ರದೇಶದ ರೈಡ್ ರೀತಿಯಾಗಿದೆ
ದೆಹಲಿಯಿಂದ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಓಡಿಸ್ಸಾ, ಪಶ್ಚಿಮ ಬಂಗಾಳದಿಂದ ಮತ್ತೆ ದೆಹಲಿಗೆ ಬೈಕ್ ಲ್ಲಿ ರೈಡ್ ಮಾಡಿದ್ದಾರೆ. ಇದಲ್ಲದೆ 2018 ರ ಜೂನ್ ನಲ್ಲಿ ಕಾಶ್ಮೀರ ದ ಅಮರನಾಥ ಯಾತ್ರೆ. 2019 ರ ಜನವರಿ ಯಲ್ಲಿ ಲೇ ಲಡಾಕಿನ "ಚಾಧರ್ ಫ್ರೋಜನ್ " ರಿವರ್ ಟ್ರಕಿಂಗ್. 2017ರ ಸೆಪ್ಟೆಂಬರ್ ನಲ್ಲಿ ಉತ್ತರಖಾಂಡಿನ ಬದರಿ ನಾಥ್ ಕೇದಾರನಾಥ್ ಪ್ರವಾಸ ಕೈಗೊಂಡಿದ್ದಾರೆ.
Koppal: ನಗರದಲ್ಲಿ ಓಡಾಡದ ಸಿಟಿ ಬಸ್‌ಗಳು: ಸಂಚಾರ ಸ್ಥಗಿತದಿಂದ ತೊಂದರೆ
ಇನ್ನೂ ದೇಶದ ವಿವಿಧ ರಾಜ್ಯಗಳಿಗೆ ತೆರಳಿ ಅಲ್ಲಿರುವ ನೈಸರ್ಗಿಕ ಸಂಪತ್ತು, ಧಾರ್ಮಿಕ ಕೇಂದ್ರಗಳು, ಪ್ರವಾಸಿ, ಚಾರಣ ತಾಣ ಗಳು ಸೇರಿದಂತೆ, ಅಲ್ಲಿಯ ಭಾಷೆ, ನೆಲ ಜಲ ಪರಿಸರಗಳನ್ನು ವೀಕ್ಷಿಸುವ ಗುರಿಯನ್ನು ಹೊಂದಿದ್ದಲ್ಲದೇ ಸಂಸ್ಕೃತಿ ಭಾರತದಾದ್ಯಂತ ಪ್ರಚಾರ ಮಾಡುವ ಮಹದಾಸೆ ಅವರದಾಗಿದೆ.
ಇದರಿಂದಾಗಿ ಚಾರಣಿಗರಿಗೆ ಸ್ಫೂರ್ತಿ, ಪ್ರವಾಸಿಗರಿಗೆ ಉತ್ತೇಜನ, ಇನ್ನೊಬ್ಬರ ಅನುಭವ ಏನೇ ಇರಲಿ. ಅದನ್ನು ಪ್ರಚಾರ ಮಾಡದೆ, ನಮ್ಮ ವ್ಯಯಕ್ತಿಕ ಅನುಭವವೇ ಮುಖ್ಯ ಎನ್ನುವ ದ್ಯೇಯ ಇಟ್ಟುಕೊಂಡು, ಮನುಷ್ಯನಿಗೆ ಅಸಾಧ್ಯ ವಾದುದು ಯಾವುದು ಇಲ್ಲಾ ಎನ್ನುವುದು ಬೈಕರ್ ಭಾರತಿ ಉದ್ದೇಶ. ಹಾಗಾದ್ರೆ ಇವರ ಜರ್ನಿಗೆ ಆಲ್ ದಿ ಬೆಸ್ಟ್ ಹೇಳೋಣವೇ.