ಶೃಂಗೇರಿಗೆ ಪಾದಯಾತ್ರೆ ಹೊರಟವರಿಗೆ ಬೀದಿನಾಯಿ ಸಾಥ್, ಕ್ಷೇತ್ರ ತಲುಪಿದ ನಂತರ ಕಣ್ಮರೆ!

By Suvarna News  |  First Published Feb 4, 2023, 7:29 PM IST

ಶೃಂಗೇರಿಗೆ ಹೋಗುತ್ತಿದ್ದ ಪಾದಯಾತ್ರಿ ಗಳಿಗೆ ನಾಯಿಯೊಂದು ಕೊನೆವರೆಗೂ ಸಾಥ್ ನೀಡಿದ ಅಪರೂಪದ ಘಟನೆ ನಡೆದಿದೆ. ಯಾತ್ರಿಗಳೊಂದಿಗೆ ತಾನು ನಡೆಯುತ್ತಾ ಕ್ಷೇತ್ರ ಸೇರಿ ನಂತರ ಕಣ್ಮರೆಯಾಗಿದೆ. ಅಪರೂಪದ ವಿದ್ಯಮಾನ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಉಡುಪಿ (ಫೆ.4): ಶೃಂಗೇರಿ ದೇವಿಯ ಸನ್ನಿಧಾನಕ್ಕೆ ಹೋಗುತ್ತಿದ್ದ ಪಾದಯಾತ್ರಿ ಗಳಿಗೆ ನಾಯಿಯೊಂದು ಕೊನೆವರೆಗೂ ಸಾಥ್ ನೀಡಿದ ಅಪರೂಪದ ಘಟನೆ ನಡೆದಿದೆ. ಯಾತ್ರಿಗಳೊಂದಿಗೆ ತಾನು ನಡೆಯುತ್ತಾ ಕ್ಷೇತ್ರ ಸೇರಿ ನಂತರ ಕಣ್ಮರೆಯಾಗಿದೆ. ಅಪರೂಪದ ವಿದ್ಯಮಾನ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಪೇತ್ರಿಯ ಛಾಯಾಗ್ರಾಹಕ ಕಮಲೇಶ್ ಮತ್ತು ಗೆಳೆಯರು ಪಾದಯಾತ್ರೆ ಹೊರಟಿದ್ದರು. ಯಾವಾಗಲೂ ಬಿಡುವಿನ ಸಂದರ್ಭದಲ್ಲಿ ಮಾರಣಕಟ್ಟೆ, ಧರ್ಮಸ್ಥಳ, ಕದ್ರಿ ಮಂಜುನಾಥ ಕ್ಷೇತ್ರಗಳಿಗೆ ಪಾದಯಾತ್ರೆ ಮಾಡುವುದು ಈ ತಂಡದ ಹವ್ಯಾಸ. ಬಿಡುವಿದ್ದಾಗ ನಾನಾ ಕ್ಷೇತ್ರಗಳಿಗೆ ಹೋಗಿ ಸಂದರ್ಶನ ಮಾಡುವುದು ಮಾಮೂಲು. ಈ ಬಾರಿ ಇವರ ತಂಡ  ಶೃಂಗೇರಿ ಶ್ರೀ ಶಾರದಾಂಬೆಯ ಕ್ಷೇತ್ರಕ್ಕೆ ಹೊರಟಿತ್ತು. ಈ ಪಾದಯಾತ್ರಿಗಳ ತಂಡಕ್ಕೆ ಹೀಗೊಂದು  ವಿಚಿತ್ರ ಅನುಭವ ಆಗಿದೆ.

ಹೆಬ್ರಿ  ತಾಲೂಕು ಸೋಮೆಶ್ವರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ಹೆಣ್ಣು ನಾಯಿ ತಂಡಕ್ಕೆ ಜೊತೆಯಾಗಿದೆ. ಆಗುಂಬೆ ಘಾಟಿಯಲ್ಲಿ ದಾರಿ ತಪ್ಪಿ ಶ್ವಾನಕ್ಕೆ ಸಮಸ್ಯೆಯಾಗಬಾರದೆಂದು ತಂಡ ವಾಪಸು ಕಳುಹಿಸಿತ್ತು. ಆದರೂ ಈ ನಾಯಿ ಪಾದಯಾತ್ರಿಗಳ ಬೆನ್ನು ಬಿಟ್ಟಿಲ್ಲ.

Tap to resize

Latest Videos

undefined

ಶೃಂಗೇರಿ ಮಾರ್ಗ ಮಧ್ಯೆ ಬಿದಿರುಗೋಡು ಬಳಿ ಮತ್ತೆ ತಂಡದ ಮುಂದೆ  ಶ್ವಾನ ಪ್ರತ್ಯಕ್ಷವಾಗಿದೆ. ಬಳಿಕ‌ ಶೃಂಗೇರಿ ಕ್ಷೇತ್ರದವರೆಗೂ ಬಂದು  ಶಾರದಾಂಬೆಯ ಕ್ಷೇತ್ರದ ಮುಂಭಾಗದ ಚಪ್ಪಲಿ ಸ್ಟಾಂಟ್ ನಲ್ಲಿ ನಿಂತಿದೆ.

ಶೃಂಗೇರಿ: ಎಲೆಚುಕ್ಕಿ ರೋಗ ನಿವಾರಣೆಗೆ ಕೋಟಿ ಕುಂಕುಮಾರ್ಚನೆ

ಅಲ್ಲಿಂದ ಮತ್ತೆ ಶ್ವಾನ  ಕಣ್ಮರೆಯಾಗಿದೆ ಎಂದು ತಂಡದ ಸದಸ್ಯರು ಹೇಳುತ್ತಾರೆ. ಶ್ವಾನವನ್ನು ಮರಳಿ ಸೋಮೇಶ್ವರ ಕ್ಕೆ ಬಿಡಲು ಶೃಂಗೇರಿಯ ಊರಿಡೀ ಹುಡುಕಾಡಿದರೂ ಈ ಶ್ವಾನ ಪತ್ತೆಯಾಗಿಲ್ಲವಂತೆ.

ಶೃಂಗೇರಿಯಿಂದ ತವರಿಗೆ ತೆರಳುತ್ತಿರುವ 'ಕಾಶ್ಮೀರ ಪುರವಾಸಿನಿ'; ಶಾರದಾಂಬೆಯ ಮಿಶನ್ ಕಾಶ್ಮೀರ್ ಕತೆ

ಮಾರ್ಗ ಮಧ್ಯೆ ಇತರ ಶ್ವಾನಗಳಿಂದ ರಕ್ಷಣೆಗಾಗಿ ದೇವರು ಕಳುಹಿಸಿರಬಹುದು ಎಂದು ತಿಳಿದ ತಂಡ ತಮ್ಮ ಪ್ರವಾಸವನ್ನು ದಾಖಲೀಕರಣ ಮಾಡಿಕೊಂಡಿದ್ದಾರೆ. ಸದ್ಯ ಶ್ವಾನದ ತೀರ್ಥ ಯಾತ್ರೆ ವೃತಾಂತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರೀತಿ ಮತ್ತು ವಿಶ್ವಾಸಕ್ಕೆ ಇನ್ನೊಂದು ಹೆಸರೇ ನಾಯಿ. ಮುಖ ಪ್ರಾಣಿಯ ಮುಗ್ದ ವಿಶ್ವಾಸವೇ ಈ ಪಾದಯಾತ್ರೆಗಳಿಗೆ ರೋಮಾಂಚನ ಉಂಟುಮಾಡಿದೆ.

ಕಾಶ್ಮೀರಕ್ಕೆ ಹೊರಟ ಶಾರದಾಂಬೆಯ ದರ್ಶನ ಪಡೆದ ಬೆಂಗಳೂರಿಗರು

click me!