ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಕೇಸ್ ಭೇದಿಸಿದ ಸರ್ಕಲ್ ಇನ್ಸಪೆಕ್ಟರ್: ದಾವಣಗೆರೆಯ ಸಿಪಿಐಗೆ ದಕ್ಕಿದ ರಾಷ್ಟ್ರಪತಿ ಪದಕ

By Girish Goudar  |  First Published Feb 4, 2023, 6:29 PM IST

ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿರವರ ಹತ್ಯೆ ಪ್ರಕರಣದ ತನಿಖೆಯ ಟೀಂನಲ್ಲಿದ್ದು, ಸೇವೆ ಸಲ್ಲಿಸಿ ಪ್ರಕರಣಗಳನ್ನು ಭೇದಿಸಿದಕ್ಕೆ ಈ ಗೌರವ ಸಂದಿದೆ. 


ವರದಿ : ವರದರಾಜ್‌

ದಾವಣಗೆರೆ(ಫೆ.04): ರಾಷ್ಟ್ರಪತಿ ಪದಕಕ್ಕೆ ದಾವಣಗೆರೆಯ ಸಂಚಾರಿ ಪೋಲಿಸ್ ಠಾಣೆಯ ಸಿಪಿಐ ಅನಿಲ್‌ರವರು ಆಯ್ಕೆಯಾಗಿದ್ದಾರೆ. ಅವರು ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿರವರ ಹತ್ಯೆ ಪ್ರಕರಣದ ತನಿಖೆಯ ಟೀಂನಲ್ಲಿದ್ದು, ಸೇವೆ ಸಲ್ಲಿಸಿ ಪ್ರಕರಣಗಳನ್ನು ಭೇದಿಸಿದಕ್ಕೆ ಈ ಗೌರವ ಸಂದಿದೆ. ಮೆರಿಟೋರಿಯಸ್ ಮೆಡಲ್(ರಾಷ್ಟ್ರಪತಿ ಪದಕ) ನ್ನು 18 ವರ್ಷ ಸೇವೆ ಪೂರೈಸಿದ ಬಳಿಕ ಕೊಡಮಾಡಲಾಗುತ್ತದೆ. ಅ 18 ವರ್ಷದ ಸರ್ವಿಸ್ ನಲ್ಲಿ ಒಬ್ಬ ಅಧಿಕಾರಿ ಮಾಡಿದ ಸಾಧನೆಗಳನ್ನು ಪರಿಗಣಿಸಿ ಮೆಡಲ್ ನೀಡಲಾಗುತ್ತಂತೆ. ಇನ್ನು ಆಯಾ ಇಲಾಖೆಯ ಹಿರಿಯ ಹಾಗೂ ಮೇಲ್ಅಧಿಕಾರಿಗಳು ಒಬ್ಬ ಅಧಿಕಾರಿಯ ಸಾಧನೆ ‌ಬಗ್ಗೆ ತಯಾರು ಮಾಡುವ ವರದಿ ಸಲ್ಲಿಕೆ ಮಾಡುವುದರಿಂದ ಈ ಗೌರವ ಮೆಡಲ್ ಮೂಲಕ ಗೌರವಿಸಲಾಗುತ್ತದೆ. ಅನಿಲ್ ರವರ ಸೇವೆಯಲ್ಲಿ ಸಲ್ಲಿಸಿ ಸಾಕಷ್ಟು ಪ್ರಕರಣಗಳು ಬೇಧಿಸಿದ್ದರಿಂದ ಸರ್ಕಾರ ಇದನ್ನು ಗಮನಿಸಿ ರಾಷ್ಟ್ರಪತಿ ಮೆಡಲ್ ನೀಡಲು ಆಯ್ಕೆ ಮಾಡಲಾಗಿದೆ.

Tap to resize

Latest Videos

ಯಾವ್ಯಾವ ಪ್ರಕರಣಗಳು ಭೇದಿಸಿದಕ್ಕೆ ದಕ್ಕಿತು ಮೆಡಲ್...! 

ಅನಿಲ್ ರವರು ಪೋಲಿಸ್ ಇಲಾಖೆಯಲ್ಲಿ ತನಿಖೆ ಸಹಾಯಕರಾಗಿ, ತನಿಖಾಧಿಕಾರಿಯಾಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ, ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ, ಸೇರಿದ್ದಂತೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪೋಲಿಸ್ ಅಧಿಕಾರಿಯಾಗಿದ್ದಾಗ 17 ಕೆಜಿ ಬಂಗಾರ ರಾಬರಿಯಾಗಿತ್ತು, ಅದನ್ನು ಪತ್ತೆ ಮಾಡುವಲ್ಲಿ ಅನಿಲ್ ರವರು ಯಶಸ್ವಿಯಾಗಿದ್ದರು, ಇದಲ್ಲದೆ ಪಾವಗಡದ ಶನಿಮಹಾತ್ಮ ದೇವಸ್ಥಾನದಲ್ಲಿದ್ದ ವ್ಯಕ್ತಿ ಅಭಾರಣಗಳನ್ನು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಮೂರು ಗಂಟೆಯಲ್ಲಿ ಹಿಡಿದು ನ್ಯಾಯಾಂಗ ಒಪ್ಪಿಸಿಸುವಲ್ಲು ಅನಿಲ್ ರವರು ಸಫಲರಾಗಿದ್ದರು, ಇದಲ್ಲದೇ ಬೆಂಗಳೂರಿನ ಶ್ರೀರಾಮಪುರದಲ್ಲಿ ಕಾರ್ಪೋರೇಟ್ ಕಿಡ್ನ್ಯಾಪ್ ಕೇಸ್ ಬೇಧಿಸಿದ್ದ ಅನಿಲ್ ರವರು, ಆರರಿಂದ ಏಳು ಮುಖ್ಯವಾದ ಕಿಡ್ನ್ಯಾಪ್ ಪ್ರಕರಣಗಳನ್ನು ಬೇಧಿಸಿದ್ದರಿಂದ ಈ ಗೌರವ ಅನಿಲ್ ರವರಿಗೆ ಸಂದಿದೆಯಂತೆ. 

ಹಾವೇರಿ: ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಶಿಕ್ಷಕರ ದಿಢೀರ್‌ ಭೇಟಿ, ರಾತ್ರಿಯೂ ಕ್ಲಾಸ್‌!

ರಾಷ್ಟ್ರಪತಿ ಪದಕ ಪಡೆದ ಪೋಲಿಸ್‌ ಅಧಿಕಾರಿಯವರು ಹೇಳೋದೇನು...! 

ಮೆಲ್ ದೊರೆತರಿಂದ ಪ್ರತಿಕ್ರಿಯಿಸಿದ ಸಿಪಿಐ ಅನಿಲ್ ರವರು ನನ್ನ ಸೇವೆಯನ್ನು ಮೇಲಾಧಿಕಾದಿಗಳು ಪರಿಗಣಿಸಿ 18 ವರ್ಷದ ಬಳಿಕ ಈ ಮೆರಿಟೋರಿಯಸ್ ಪದಕ ದೊರಕುವಂತೆ ಮಾಡಿದ್ದಾರೆ. ಅ ಎಲ್ಲಾ ಮೇಲಾಧಿಕಾರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಈ ಮೆಡಲ್ ಈಗಾಗಲೇ ಘೋಷಣೆ ಮಾಡಲಾಗಿದ್ದು, ಅದನ್ನು ಆಗಸ್ಟ್ ಇಲ್ಲ ನವೆಂಬರ್ ನಲ್ಲಿ ಮೆಡಲ್ ಹಸ್ತಾಂತರ ಮಾಡ್ತಾರೆ, ಮೆಡಲ್ ಗಾಗಿ ಸಾಕಷ್ಟು ಜನ್ರ ಹೆಸರನ್ನು ಶಿಫಾರಸು ಮಾಡಿದ್ದರು, ಅಷ್ಟು ಜನ್ರಲ್ಲಿ ನಮಗೆ ಮಾತ್ರ ಮೆಡಲ್ ದೊರೆತಿದೆ ಅಂದ್ರೇ ಅದು ಹೆಮ್ಮೆಯ ವಿಚಾರ ಎಂದು ಸಂಚಾರಿ ಪೋಲಿಸ್ ಠಾಣೆಯ ಸಿಪಿಐ ಅನಿಲ್ ಹರ್ಷ ವ್ಯಕ್ತಪಡಿಸಿದರು.

click me!