
ಶಿವಮೊಗ್ಗ(ಆ.17): ಕಳೆದ ವಾರದ ಸುರಿದ ಭಾರೀ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಅನೇಕರು ವಸತಿ ಕಳೆದುಕೊಂಡು ನಿರಾಶ್ರಿತರಿಗೆ ಗೋಪಾಳ ಬಡಾವಣೆಯ ಲಲಿತಾ ಮಹಿಳಾ ಸಂಘ, ಕೈ ದೀಪ ವಿಚಾರ ವೇದಿಕೆ, ಶ್ರೀನಿಕೇತನ ಭಜನಾ ಮಂಡಳಿ, ಶ್ರೀ ಮಾತಾ ಟ್ರಸ್ಟ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಸಹಾಯ ಹಸ್ತ ಚಾಚಿದ್ದಾರೆ.
ಅಗತ್ಯ ವಸ್ತುಗಳ ಹಂಚಿಕೆ:
ನೆರೆಯಿಂದ ಕಂಗೆಟ್ಟಸಂತ್ರಸ್ತರಿಗೆ ಬಡಾವಣೆ ಸೇರಿದಂತೆ ವಿವಿಧ ಕಡೆ ಸಾರ್ವಜನಿಕರಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತಿ ದಿನ ಸಂಗ್ರಹಿಸಿದ ವಸ್ತುಗಳನ್ನು ತಕ್ಷಣವೇ ಕಿಟ್‌ಗಳಾಗಿ ಸಿದ್ಧಪಡಿಸಿ, ರಾಜೀವ ಗಾಂಧಿ ಬಡಾವಣೆ, ಸೀಗೆಹಟ್ಟಿ, ಮಂಡಕ್ಕಿ ಬಟ್ಟಿ, ಕುಂಬಾರಗುಂಡಿ, ನಾಲಬಂದ ಕೇರಿ ಸೇರಿದಂತೆ ವಿವಿಧ ಕಡೆಗಳ ಸಂತ್ರಸ್ತರ ಮನೆಗಳಿಗೆ ಖುದ್ದು ತೆರಳಿ ಕೊಟ್ಟು ಕಣ್ಣೊರೆಸಿ ಬಂದಿದ್ದಾರೆ. ಇದುವರೆಗೆ ಸುಮಾರು 5 ಲಕ್ಷ ರು.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ನೀಡಿದ್ದು ಹಲವರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆ ಹಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ
ಸುನೀತ ಗುರುರಾಜ್, ಲತಾ ಯಡಗೆರೆ, ಭಾರ್ಗವಿ ಭಟ್, ಲತಾ ನಾಗರಾಜ್, ವೀಣಾ ಹರೀಶ್, ಬಳಿಕ ಸುಶೀಲಮ್ಮ, ತಾರಾ ವೆಂಕಟೇಶ್, ಸವಿತಾ ರವೀಂದ್ರ, ಸುನೀತಾ ರಾಘವೇಂದ್ರ, ಸವಿತಾ ವಿಶ್ವನಾಥ್, ಪೂರ್ಣಿಮಾ ಪ್ರಕಾಶ್, ಶಿಲ್ಪಾ ರಾಮಚಂದ್ರ, ಮಮತಾ ಕರುಣಾಕರ್ ಇನ್ನೂ ಮುಂತಾದವರಿದ್ದರು.
ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ ಗ್ಯಾಸ್ ಸ್ಟೌ, ಪಾತ್ರೆ ಸೆಟ್