Shivamogga Infrastructure Issue: : 108 ಆ್ಯಂಬುಲೆನ್ಸ್‌ ಕೊರತೆ : ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?

By Kannadaprabha News  |  First Published Dec 17, 2021, 2:48 PM IST
  •  3ಕ್ಕೆ. (ಲೀಡ್‌) 108 ಆ್ಯಂಬುಲೆನ್ಸ್‌ ಕೊರತೆ: ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
  •  ಕರೂರು, ಬಾರಂಗಿ ಹೋಬಳಿ ಜನರಿಗೆ ಲಾಂಚ್‌ ಸಂಚಾರ ಬಿಟ್ಟರೆ ಬೇರೆ ಗತಿಯೇ ಇಲ್ಲ
  •  ಹಗಲಲ್ಲಿ ಲಾಂಚ್‌ ಓಕೆ, ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಿಸೋದೇ ದೊಡ್ಡ ಚಿಂತೆ

  ಶಿವಮೊಗ್ಗ (ಡಿ.17):  ಒಂದಲ್ಲ ಒಂದು ರೀತಿಯ ಮೂಲಭೂತ ಸೌಕರ್ಯಗಳ (Infrastructure) ಸಮಸ್ಯೆ ಎದುರಿಸುತ್ತ ನಾಗರಿಕ ಜಗತ್ತಿನ ಸೌಲಭ್ಯ ಪಡೆಯಲು ಇನ್ನಿಲ್ಲದಂತೆ ಹೋರಾಡುತ್ತಿರುವ ಶರಾವತಿ ಹಿನ್ನೀರಿನ (Sharavathi Back Water) ಜನರ ಗೋಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇದೀಗ ರಾತ್ರಿ ವೇಳೆ ಆ್ಯಂಬುಲೆನ್ಸ್‌ (Ambulance)  ಇಲ್ಲ ಎನ್ನುವ ಕಾರಣಕ್ಕೂ ಜಗತ್ತನ್ನು ನೋಡಬೇಕಾದ ಎಳೆಯ ಜೀವ ಸದ್ದಿಲ್ಲದೆ ನಂದಿಹೋಗಿದೆ.    ಸಾಗರ(Sagar) ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಏಕೈಕ ಮಾರ್ಗವೆಂದರೆ ಹಿನ್ನೀರಿನಲ್ಲಿ ಚಲಿಸುವ ಲಾಂಚ್‌. ಆದರೆ ಈ ಲಾಂಚ್‌ ಕೇವಲ ಹಗಲು ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದೆ. ರಾತ್ರಿಯಾದರೆ (Night) ಈ ಭಾಗದ ಜನರು ಯಾವುದೇ ಕಾರಣಕ್ಕೂ ಸುಲಭವಾಗಿ ಹೊರಜಗತ್ತಿನ ಸಂಪರ್ಕ ಪಡೆಯುವಂತಿಲ್ಲ. ತೀರಾ ಅನಿವಾರ್ಯವಾದರೆ ನಿಟ್ಟೂರು- ಹೊಸನಗರ (Nittur- Hosanagar) ಅಥವಾ ಕೋಗಾರ್‌- ಕಾರ್ಗಲ್‌ ಮೂಲಕ ಸಾಗರ ಹೋಗಬೇಕು. 5 ಕಿ.ಮೀ. ದೂರ ತಲುಪಲು ನೂರಾರು ಕಿ. ಮೀ. ದೂರ ಸಾಗಿ ಬರಬೇಕಾಗಾದ ದುಸ್ಥಿಃತಿ.

ರಾತ್ರಿಯ ವೇಳೆ ಯಾರಿಗಾದರೂ ಅನಾರೋಗ್ಯ (Health Issues) ಉಂಟಾದರೆ ಆ್ಯಂಬುಲೆನ್ಸ್‌ ಸೇವೆ ಇಲ್ಲ. ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health Centre) ಕಳೆದ 20 ದಿನದಿಂದ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತಗೊಂಡಿದ್ದಕ್ಕೆ ಕುಟುಂಬವೊಂದು ದೊಡ್ಡ ಬೆಲೆ ತೆರುವಂತಾಗಿದೆ.

Latest Videos

undefined

ಸಾಗರ ತಾಲೂಕಿನ ತುಮರಿ (Tumari) ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆ್ಯಂಬುಲೆನ್ಸ್‌ ಸೇವೆಯನ್ನು ಏಕಾಏಕಿ ನಿಲ್ಲಿಸಲಾಗಿದೆ. ಸುಮಾರು 8 ಪಂಚಾಯಿತಿ ವ್ಯಾಪ್ತಿಯ 20 ಸಾವಿರ ಜನರಿಗೆ ಸೇವೆ ನೀಡಬೇಕಾಗಿದ್ದ ಈ ಆರೋಗ್ಯ ಕೇಂದ್ರಕ್ಕೆ ರೋಗ ಬಡಿದಿದೆ. ಹಗಲು ಹೇಗೋ ಜನರು ಲಾಂಚ್‌ ಮೂಲಕ ಸಾಗರದಿಂದ ಆ್ಯಂಬುಲೆನ್ಸ್‌ ತರಿಸಿ ಆಸ್ಪತ್ರೆಗೆ (Hospital) ಹೋಗುತ್ತಾರೆ. ಆದರೆ ರಾತ್ರಿ ವೇಳೆ?

ಕಳೆದ ರಾತ್ರಿ ಅಪಘಾತವೊಂದು ನಡೆಯಿತು. ಆದರೆ, ತುರ್ತು ಚಿಕಿತ್ಸೆಗೆ (Tratment) ಈ ಗಾಯಾಳುಗಳನ್ನು ಕರೆದೊಯ್ಯಲು ಸಾಧ್ಯವಾಗಲಿಲ್ಲ. ಏಕೆಂದರೆ ಇತ್ತ ಲಾಂಚ್‌ ಸೇವೆ ಇಲ್ಲ, ಅತ್ತ ಆ್ಯಂಬುಲೆನ್ಸ್‌ ಕೂಡ ಇಲ್ಲ. ಇನ್ನಾವುದೋ ಖಾಸಗಿ ವಾಹನ (Private Vehicle) ಹಿಡಿದು ನೂರಾರು ಕಿ.ಮೀ. ದೂರ ಸುತ್ತಿ ಸಾಗರ ಆಸ್ಪತ್ರೆ ತಲುಪುವಷ್ಟರಲ್ಲಿ ಎಂತಹ ಅನಾಹುತ ಆಗುತ್ತದೆಯೋ ಗೊತ್ತಿಲ್ಲ.

ಇದೇ ವೇಳೆಗೆ ಚೈತ್ರಾ ಎಂಬ ಮಹಿಳೆಗೆ ರಾತ್ರಿ ವೇಳೆ ಹೆರಿಗೆ ನೋವು (Labour Pain) ಕಾಣಿಸಿಕೊಂಡಿದೆ. ಈ ಸಂದರ್ಭ ಕಠಿಣವಾಗಿದೆ. ಆದರೆ, ಸಾಗರಕ್ಕೆ ಕರೆದೊಯ್ಯಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಹೇಗೋ ಮಾಡಿ ಖಾಸಗಿ ವಾಹನದ (Private Vehicle) ಮೂಲಕ ನೂರಾರು ಕಿ.ಮೀ. ದೂರ ಪ್ರಯಾಣಿಸಿ ಸಾಗರ ತಲುಪುವಷ್ಟರಲ್ಲಿ ತಾಯಿಯ (Mother) ಪರಿಸ್ಥಿತಿ ಗಂಭೀರವಾಗಿತ್ತು. ಹೇಗೋ ವೈದ್ಯರು ತಾಯಿಯ ಜೀವ ಉಳಿಸಿದರು. ಆದರೆ ಮಗು (Baby) ಉಳಿಯಲಿಲ್ಲ.

ಈ ಘಟನೆ ಆ ಭಾಗದ ಜನರಲ್ಲಿ ತೀವ್ರ ಆಕ್ರೋಶ ಹುಟ್ಟು ಹಾಕಿದೆ. ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ. ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆ್ಯಂಬುಲೆನ್ಸ್‌ ಒಂದನ್ನು ನೀಡುವಂತೆ ಆಗ್ರಹಿಸಿದ್ದಾರೆ.

  •  108 ಆ್ಯಂಬುಲೆನ್ಸ್‌ ಕೊರತೆ: ಶರಾವತಿ ಹಿನ್ನೀರು ಜನರ ಗೋಳಿಗೆ ಕೊನೆ ಎಂದು?
  •  ಕರೂರು, ಬಾರಂಗಿ ಹೋಬಳಿ ಜನರಿಗೆ ಲಾಂಚ್‌ ಸಂಚಾರ ಬಿಟ್ಟರೆ ಬೇರೆ ಗತಿಯೇ ಇಲ್ಲ
  •  ಹಗಲಲ್ಲಿ ಲಾಂಚ್‌ ಓಕೆ, ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಿಸೋದೇ ದೊಡ್ಡ ಚಿಂತೆ
  • ಲಾಂಚ್‌ ಕೇವಲ ಹಗಲು ವೇಳೆಯಲ್ಲಿ ಮಾತ್ರ ಸಂಚರಿಸುತ್ತಿದೆ
  • ರಾತ್ರಿ ವೇಳೆ ಆ್ಯಂಬುಲೆನ್ಸ್‌ ಇಲ್ಲ ಎನ್ನುವ ಕಾರಣಕ್ಕೂ ಜಗತ್ತನ್ನು ನೋಡಬೇಕಾದ ಎಳೆಯ ಜೀವ ಸದ್ದಿಲ್ಲದೆ ನಂದಿಹೋಗಿದೆ
click me!