Farmers Child Scholarship : ಜಿಲ್ಲೆಯಲ್ಲಿ 1,152 ಮಂದಿಗೆ ರೈತ ವಿದ್ಯಾನಿಧಿ ಸಿಕ್ಕಿಲ್ಲ

By Kannadaprabha News  |  First Published Dec 17, 2021, 12:38 PM IST
  •  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುಖ್ಯಮಂತ್ರಿ ರೈತ ವಿದ್ಯಾನಿಧಿ
  •  ಅರ್ಧದಷ್ಟು ಮಕ್ಕಳಿಗೆ ಸಿಕ್ಕಿಲ್ಲ ಸಿಎಂ ವಿದ್ಯಾನಿಧಿ  
  • ಅರ್ಜಿ ಸಲ್ಲಿಸಿದ ಜಿಲ್ಲೆಯ ಅರ್ಧದಷ್ಟು ರೈತ ಮಕ್ಕಳಿಗೆ ಇನ್ನೂ ಸಿಕ್ಕಿದಿರುವುದು ಒಂದಡೆಯಾದರೆ ಮತ್ತೊಂದಡೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ ಎಂಬ ನೆಪ

 ಚಿಕ್ಕಬಳ್ಳಾಪುರ (ಡಿ.17):  ರಾಜ್ಯ ಸರ್ಕಾರದ (Karnataka Govt) ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುಖ್ಯಮಂತ್ರಿ ರೈತ ವಿದ್ಯಾನಿಧಿ (Chief Minister Raitha Vidya Nidhi ) ಯೋಜನೆ ಲಾಭ ಅರ್ಜಿ ಸಲ್ಲಿಸಿದ ಜಿಲ್ಲೆಯ ಅರ್ಧದಷ್ಟು ರೈತ (Farmers) ಮಕ್ಕಳಿಗೆ ಇನ್ನೂ ಸಿಕ್ಕಿದಿರುವುದು ಒಂದಡೆಯಾದರೆ ಮತ್ತೊಂದಡೆ ಆಧಾರ್‌ ಕಾರ್ಡ್‌ (Aadhaar card) ಲಿಂಕ್‌ ಆಗಿಲ್ಲ ಎಂಬ ನೆಪವೊಡ್ಡಿ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ವಿಲೇವಾರಿ ಆಗದೇ ಧೂಳು ತಿನ್ನುತ್ತಿವೆ.  ಹೌದು, ಉನ್ನತ ಶಿಕ್ಷಣ  (Education) ಕ್ಷೇತ್ರದಲ್ಲಿ ರೈತ ಮಕ್ಕಳನ್ನು ಪ್ರೋತ್ಸಾಯಿಸುವ ಸಲುವಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಭಾರಿಗೆ ಸಿಎಂ ರೈತವಿದ್ಯಾನಿಧಿ ಯೋಜನೆ ಘೋಷಿಸಿದರೂ ಇದುವರೆಗೂ ಅರ್ಜಿ ಸಲ್ಲಿಸಿದ ಜಿಲ್ಲೆಯ ಅರ್ಧದಷ್ಟುಮಕ್ಕಳಿಗೆ ಅದರ ಲಾಭ ಸಿಗದಿರುವುದು ಎದ್ದು ಕಾಣುತ್ತಿದೆ.

2,945 ಮಂದಿ ಅರ್ಜಿ:  ಸರ್ಕಾರ ರೈತ (Farmers) ವಿದ್ಯಾನಿಧಿ ಯೋಜನೆ ಘೋಷಿಸಿದ ಬೆನ್ನಲೇ ಪಿಯುಸಿ (PUC) ಓದುತ್ತಿರುವ ವಿದ್ಯಾರ್ಥಿಗಳನ್ನು (Students) ಮೊದಲಗೊಂಡು ಐಟಿಐ (ITI), ಡಿಪ್ಲೋಮಾ, ಪದವಿ, ವಿವಿಧ ವೃತ್ತಿಪರ ಕೋರ್ಸ್‌ಗಳ ಜೊತೆಗೆ ಬಿ,ಇ, ಎಂಬಿಬಿಎಸ್‌ನಂತ (MBBS) ಉನ್ನತ ಶಿಕ್ಷಣ ಓದುತ್ತಿರುವ ಜಿಲ್ಲೆಯ ರೈತರ ಮಕ್ಕಳು ಒಟ್ಟು 2,945 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು ಆ ಪೈಕಿ ಸರ್ಕಾರ ಇದುವರೆಗೂ 1,793 ವಿದ್ಯಾರ್ಥಿಗಳಿಗೆ ಮಾತ್ರ ಒಟ್ಟು 48 ಲಕ್ಷದಷ್ಟುಆರ್ಥಿಕ ನೆರವನ್ನು ಸಿಎಂ ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳ ಖಾತೆಗೆ (Bank Account) ನೇರವಾಗಿ ಡಿಬಿಟಿ (DBT) ಮುಖಾಂತರ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಇನ್ನೂ 1,152 ಮಕ್ಕಳಿಗೆ ಯೋಜನೆಯ ಲಾಭ ದೂರ ಇದ್ದು ಅರ್ಜಿ ಸಲ್ಲಿಸಿರುವ 2,000 ಕ್ಕೂ ಅಧಿಕ ಅರ್ಜಿಗಳು ಆಧಾರ್‌ (Aadhaar) ಲಿಂಕ್‌ ಆಗದ ಕಾರಣಕ್ಕೆ ಪ್ರೋತ್ಸಾಹ ಧನ ಮಂಜೂರು ಮಾಡಲು ಆಗದೇ ಅರ್ಜಿಗಳನ್ನು ಬಾಕಿ ಇರಿಕೊಳ್ಳಲಾಗಿದೆ.

Tap to resize

Latest Videos

undefined

ಜಿಲ್ಲೆಗೆ ಒಟ್ಟು 48 ಲಕ್ಷ ಬಿಡುಗಡೆ:  ಜಿಲ್ಲೆಯಲ್ಲಿ ಇದುವರೆಗೂ ಸಿಎಂ ರೈತ ವಿದ್ಯಾನಿಧಿ ಯೋಜನೆಯಡಿ ಸಲ್ಲಿಕೆಯಾಗಿರುವ 2,945 ಅರ್ಜಿಗಳ ಪೈಕಿ ಇದುವರೆಗೂ 1,793 ಮಂದಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಇನ್ನೂ 1,152 ಅರ್ಜಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕಿದೆ. ಒಟ್ಟು 1,793 ವಿದ್ಯಾರ್ಥಿಗಳಿಗೆ ಸರ್ಕಾರ ನಿಗಧಿಪಡಿಸಿದ ಪ್ರೋತ್ಸಾಹ ಧನ ಒಟ್ಟು 48 ಲಕ್ಷ ಬಿಡುಗಡೆಗೊಳಿಸಿದ್ದು ಆ ಪೈಕಿ ಬಾಗೇಪಲ್ಲಿಯಲ್ಲಿ 357 ಮಕ್ಕಳಿಗೆ 9.80 ಲಕ್ಷ, ಚಿಕ್ಕಬಳ್ಳಾಪುರದಲ್ಲಿ 420 ಮಕ್ಕಳಿಗೆ 11.65 ಲಕ್ಷ ರು, ಚಿಂತಾಮಣಿಯಲ್ಲಿ 353 ಮಕ್ಕಳಿಗೆ 9.69 ಲಕ್ಷ ರು, ಗೌರಿಬಿದನೂರಲ್ಲಿ 454 ಮಕ್ಕಳಿಗೆ 12.36 ಲಕ್ಷ ರು, ಗುಡಿಬಂಡೆಯಲ್ಲಿ 17 ಕ್ಕಳಿಗೆ 48 ಸಾವಿರ ರು, ಹಾಗೂ ಶಿಡ್ಲಘಟ್ಟದಲ್ಲಿ 192 ಮಕ್ಕಳಿಗೆ 5.30 ಲಕ್ಷ ರು, ಪ್ರೋತ್ಸಾಹ ಧನವನ್ನು ಬಿಡುಗಡೆಗೊಳಿಸಿದೆ.

ಜಿಲ್ಲೆಯಲ್ಲಿ 2,945 ಮಕ್ಕಳು ರೈತ ವಿದ್ಯಾನಿದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಆ ಪೈಕಿ 1,793 ಮಂದಿಗೆ ಪ್ರೋತ್ಸಾಹ ಧನವನ್ನು ಅವರವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 1,152 ಮಕ್ಕಳಿಗೆ ಪ್ರೋತ್ಸಾಹ ಧನ ಬಾಕಿ ಇದೆ. ಶೀಘ್ರದಲ್ಲಿ ಹಂತ ಹಂತವಾಗಿ ಎಲ್ಲರಿಗೂ ಬರಲಿದೆ

ಎಲ್‌.ರೂಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ.

  •  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುಖ್ಯಮಂತ್ರಿ ರೈತ ವಿದ್ಯಾನಿಧಿ
  • ಯೋಜನೆ ಲಾಭ ಅರ್ಜಿ ಸಲ್ಲಿಸಿದ ಜಿಲ್ಲೆಯ ಅರ್ಧದಷ್ಟು ರೈತ ಮಕ್ಕಳಿಗೆ ಸಿಕ್ಕಿಲ್ಲ
  • ಮತ್ತೊಂದಡೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ ಎಂಬ ನೆಪ
  • ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ವಿಲೇವಾರಿ ಆಗದೇ ಧೂಳು ತಿನ್ನುತ್ತಿವೆ.
click me!