ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!

ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!

Published : Jul 03, 2026, 02:46 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಅವರ ಅಭಿಮಾನಿಗಳಿಂದಲೇ ಹೊಸ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಸಾಕ್ಷಿಯೊಬ್ಬರಿಗೆ, ದರ್ಶನ್ ಅಭಿಮಾನಿಯೂ ಹಾಗೂ ಮತ್ತೊಬ್ಬ ಸಾಕ್ಷಿಯೂ ಆಗಿರುವ ವ್ಯಕ್ತಿಯೇ ಬೆದರಿಕೆ ಹಾಕಿದ್ದು, ಸಾಕ್ಷ್ಯ ನಾಶದ ಯತ್ನದಡಿ ಇದೀಗ ಪೊಲೀಸರ ವಶವಾಗಿದ್ದಾರೆ.  

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿ 2 ವರ್ಷವೇ ಕಳೆದುಬಿಟ್ಟಿದೆ. ಅವರನ್ನ ಹೊರಗೆ ತರಲು ಆತನ ಕುಟುಂಬ ಇನ್ನಿಲ್ಲದ ಪ್ರಯತ್ನಗಳನ್ನ ಮಾಡ್ತಿದೆ.. ಬಟ್​ ಕೋರ್ಟ್​ ಮಾತ್ರ ದರ್ಶನ್​ ಒಂದು ವರ್ಷ ಜೈಲಿನಲ್ಲೇ ಇರಬೇಕು ಅಂತ ಹೇಳಿಬಿಟ್ಟಿದೆ.. ಪರಿಸ್ತಿತಿ ಹೀಗಿರುವಾಗ್ಲೇ ದರ್ಶನ್​ ಅಭಿಮಾನಿಗಳು ಮತ್ತೊಂದು ಎಡವಟ್ಟು ಮಾಡಿಬಿಟ್ಟಿದ್ದಾರೆ.. ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿರುವಾಗ್ಲೇ ದರ್ಶನ್​​ ಅಭಿಮಾನಿಗಳು ಮತ್ತು ಈ ಕೇಸ್​ನಲ್ಲೀ ಸಾಕ್ಷಿಯೂ ಆಗಿರುವನೊಬ್ಬ ಮತ್ತೊಬ್ಬ ಸಾಕ್ಷಿಗೆ ಬೆದರಿಕೆ ಹಾಕಿದ್ದಾನೆ. ಕೋರ್ಟ್​ನಲ್ಲಿ ಸಾಕ್ಷಿ ಹೇಳದಂತೆ ವಾರ್ನ್​ ಮಾಡಿದ್ದಾನೆ. ಸದ್ಯ ಬೆದರಿಕೆ ಹಾಕಿದವರೆಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.

ಕೇಸ್​ನಲ್ಲಿ ಸಾಕ್ಷಿಯಾಗಿದ್ದ ಪುನೀತ್, ಈಗ ಸಾಕ್ಷ್ಯ ನಾಶದ ಕೇಸ್ ನಲ್ಲಿ ತನ್ನಿಬ್ಬರು ಸಹಚರರ ಜತೆ ಅರೆಸ್ಟ್ ಆಗಿದ್ದಾನೆ. ಇಂಥಹ ಅಭಿಮಾನಿಗಳಿಂದ ದರ್ಶನ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಾಕ್ಷಿ ನಾಶ ಮಾಡೋದು.. ಸಾಕ್ಷಿಗಳನ್ನ ಬೆದರಿಸೋದು.. ಇದೇ ಮೊದಲೇನೂ ಅಲ್ಲ.. ಆದ್ರೆ ಸಾಕ್ಷಿ ಹೆಳಬೇಕಿದ್ದೋನೇ ಮತ್ತೊಂದು ಸಾಕ್ಷಿ ಮೇಲೆ ಒತ್ತಡ  ಹೇರಿದ್ದು ಈಗ ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಬಿಗ್​​​ ಟ್ವಿಸ್ಟ್​​ ಕೊಡುತ್ತೆ.. ಕೋರ್ಟ್​ ಪ್ರಕರಣವನ್ನ ನೋಡುವ ರೀತಿಯನ್ನೇ ಬದಲಿಸಿಬಿಡುತ್ತೆ ಅನ್ನೋದು ವಕೀಲರ ಮಾತು. ಸೋ ದರ್ಶನ್​ ಅಭಿಮಾನಿಗಳು ಬಾಸ್‌ ಸಹಾಯ ಮಾಡಲು ಹೋಗಿ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದ್ದಾರೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more