ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಮತ್ತೆ ಪ್ರವೇಶಾವಕಾಶ: ಶಿಕ್ಷಣಕ್ಕೆ ಕಾಳಜಿ ತೋರಿದ ಶಾಸಕ ಗಣೇಶ್‌ ಪ್ರಸಾದ್‌

By Kannadaprabha News  |  First Published Jul 3, 2023, 8:43 PM IST

ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಬೋಧಕ, ಬೋಧಕೇತರರ ಹುದ್ದೆ ಮಂಜೂರಾಗಿಲ್ಲ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಈ ಸಾಲಿಗೆ ಪಶು ಸಂಗೋಪನಾ ಡಿಪ್ಲೋಮಾ ಪ್ರವೇಶ ಮಾಡಿಕೊಳ್ಳುವುದು ಬೇಡ ಎಂದು ಆದೇಶ ಹೊರಡಿಸಿತ್ತು. 


ರಂಗೂಪುರ ಶಿವಕುಮಾರ್‌

ಗುಂಡ್ಲುಪೇಟೆ (ಜು.03): ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಈ ಸಾಲಿನ ಡಿಪ್ಲೋಮಾ ಪ್ರವೇಶಕ್ಕೆ 2023-24 ನೇ ಶೈಕ್ಷಣಿಕ ಸಾಲಿನ ಪಶು ಸಂಗೋಪನಾ ಡಿಪ್ಲೋಮಾ ಪ್ರವೇಶಕ್ಕೆ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಆದೇಶ ಅರಿತ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಆಸಕ್ತಿಯ ಫಲವಾಗಿ ಈ ಸಾಲಿಗೆ ಮತ್ತೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಶಿಕ್ಷಣಕ್ಕೆ ತಮ್ಮ ಕಾಳಜಿ ಕ್ಷೇತ್ರದ ಜನತೆಗೆ ತೋರಿಸಿದ್ದಾರೆ.

Tap to resize

Latest Videos

undefined

ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಬೋಧಕ, ಬೋಧಕೇತರರ ಹುದ್ದೆ ಮಂಜೂರಾಗಿಲ್ಲ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಈ ಸಾಲಿಗೆ ಪಶು ಸಂಗೋಪನಾ ಡಿಪ್ಲೋಮಾ ಪ್ರವೇಶ ಮಾಡಿಕೊಳ್ಳುವುದು ಬೇಡ ಎಂದು ಆದೇಶ ಹೊರಡಿಸಿತ್ತು. ಈ ಸಾಲಿನ ಪ್ರವೇಶ ಸಿಗದೆ ಇದ್ದರೆ 50 ಮಂದಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಕ್ಷೇತ್ರದ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಡಾ. ರವಿಕುಮಾರ್‌ ಸಿ ಸಂಪರ್ಕಿಸಿ ಮೊದಲಿಗೆ ಮಾಹಿತಿ ಪಡೆದಿದ್ದಾರೆ. 

ಕೇಂದ್ರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್‌ ಟಾಂಗ್‌

ನಂತರ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಜೊತೆ ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ನ ಸಮಸ್ಯೆಯ ಬಗ್ಗೆ ಚರ್ಚಿಸಿದ ಪರಿಣಾಮ 50 ಮಕ್ಕಳಿಗೆ ಪ್ರವೇಶಾವಕಾಶ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಸಚಿವ ಕೆ.ವೆಂಕಟೇಶ್‌ ಅವರೊಂದಿಗೆ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಚರ್ಚಿಸಿದ ಬೆನ್ನಲ್ಲೇ ಸಚಿವ ಕೆ.ವೆಂಕಟೇಶ್‌ ಸಹ ಶಾಸಕರ ಮನವಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಸಚಿವರೊಂದಿಗೆ ಮಾತನಾಡಿ ಇಂದೇ ಆದೇಶ ಹೊರಡಿಸಿ ಎಂದು ಸೂಚನೆ ನೀಡಿದ್ದಾರೆ. 

ಸಚಿವ ಕೆ.ವೆಂಕಟೇಶ್‌ ಅವರ ಸೂಚನೆಯ ಬೆನ್ನಲ್ಲೆ ಜು.1ರ ಸಂಜೆಯೊಳಗೆ ಶೈಕ್ಷಣಿಕ ಸಾಲಿಗೆ ಪಶು ಸಂಗೋಪನೆಯಲ್ಲಿ 2ವರ್ಷ ಅವಧಿಯ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವಂತೆ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಸಚಿವರು ಜು.1ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿಯೇ ಬಿಟ್ಟಿದ್ದಾರೆ. ಕುಲ ಸಚಿವರ ಪರಿಷ್ಕೃತ ಅ​ಧಿಸೂಚನೆ ಪ್ರಕಾರ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ನಲ್ಲಿ 50 ಸೀಟು ಭರ್ತಿ ಮಾಡಲು ಅವಕಾಶ ಕಲ್ಪಿಸಿ ಆದೇಶ ಕೂಡ ಹೊರಡಿಸಿದ್ದಾರೆ. ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಗೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲ ಸಚಿವರೊಂದಿಗೆ ಮಾತನಾಡಿದ್ದೇನೆ.

ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಆರ್‌.ನರೇಂದ್ರ

ಬರಗಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳಿಗೆ ಈ ವರ್ಷದ ಪ್ರವೇಶ ಸಿಗಲಿದೆ. ಯಾವುದೇ ಆತಂಕ ಬೇಡ. ಶನಿವಾರವೇ ಪ್ರವೇಶಕ್ಕೆ ಪರಿಷ್ಕೃತ ಸೂಚನೆ ಹೊರ ಬಿದ್ದಿದೆ.
-ಕೆ.ವೆಂಕಟೇಶ್‌, ಪಶು ಸಂಗೋಪನಾ ಸಚಿವ

click me!