ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಸಭೆಯಲ್ಲಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು

By Kannadaprabha News  |  First Published Jul 3, 2023, 8:24 PM IST

ದಾಖಲೆ ಪತ್ರಗಳು ಮತ್ತಿತರೆ ಕೆಲಸಗಳಿಗಾಗಿ ಬರುವ ಸಾರ್ವಜನಿಕರನ್ನು ಕಚೇರಿಗಳಿಗೆ ಪದೇಪದೆ ಅಲೆದಾಡಿಸಬೇಡಿ, ಅವರೊಂದಿಗೆ ಸೌಜನ್ಯದಿಂದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. 


ಕುದೂರು (ಜು.03): ದಾಖಲೆ ಪತ್ರಗಳು ಮತ್ತಿತರೆ ಕೆಲಸಗಳಿಗಾಗಿ ಬರುವ ಸಾರ್ವಜನಿಕರನ್ನು ಕಚೇರಿಗಳಿಗೆ ಪದೇಪದೆ ಅಲೆದಾಡಿಸಬೇಡಿ, ಅವರೊಂದಿಗೆ ಸೌಜನ್ಯದಿಂದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕುದೂರು ಹೋಬಳಿಗೆ ಭೇಟಿ ನೀಡಿದ ಶಾಸಕರು ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜನರ ಕೆಲಸಕಾರ್ಯಗಳನ್ನು ನಿರ್ಲಕ್ಷ್ಯ ಮಾಡದೇ ತ್ವರಿತವಾಗಿ ಮಾಡಿಕೊಡಬೇಕು ಎಂದು ತಿಳಿಸಿದರು.

ಕುದೂರು ಪಟ್ಟಣವನ್ನು ರೇಷ್ಮೆ ಪಟ್ಟಣ ಎಂದು ಕರೆಯುತ್ತಾರೆ. ಇಲ್ಲಿರುವ ನೇಕಾರರ ಪಟ್ಟಿಯನ್ನು ತಯಾರು ಮಾಡಿ ಉತ್ಸಾಹಿ ಯುವಕರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ಕೊಡಲಾಗುತ್ತದೆ. ಕುದೂರು ಗ್ರಾಮದಲ್ಲಿ ಸಿಲ್‌್ಕಹಬ್‌ ಮಾಡಬೇಕು. ಇದಕ್ಕಾಗಿ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರಗಳನ್ನು ಕೊಡಿಸಲಾಗುವುದು. ನಂತರ ಸಂತೇಮಾಳಕ್ಕೆ ಭೇಟಿ ನೀಡಿ ಎಪಿಎಂಸಿ ಮಾದರಿಯಲ್ಲಿ ರೈತರಿಗೆ ಅನುಕೂಲವಾಗುವ ಹಾಗೆ ಕೋಲ್ಡ್‌ ಸ್ಟೋರೇಜ್‌ ಮಾಡಲಾಗುವುದು ಎಂದು ತಿಳಿಸಿದರು.

Tap to resize

Latest Videos

Ramanagara: ಜನ​ಪ್ರ​ತಿ​ನಿ​ಧಿ​ಗಳ ಸಹ​ಕಾರವಿದ್ದರೆ ಆಂಗ್ಲ ಶಾಲೆಗೆ ಶಂಕು: ಶಾಸಕ ಬಾಲಕೃಷ್ಣ

ಶಿಕ್ಷಕರಿಗೆ ಪಾಠ: ಸರ್ಕಾರಿ ಶಾಲೆಗಳ ಕಡೆಗೆ ಪೋಷಕರು ಆಕರ್ಷಕರಾಗಬೇಕಾದರೆ ಮೊದಲು ಇಲ್ಲಿನ ಮೂಲ ಸೌಕರ‍್ಯಗಳು ಸರಿಪಡಿಸುವುದರ ಜೊತೆಗೆ ಶಿಕ್ಷಕರ ಹೊಣೆಗಾರಿಕೆಯೂ ಹೆಚ್ಚಿರಬೇಕು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ನೀಡಬೇಕು. ಆಗ ಮೊದಲು ಶಿಕ್ಷಕರು ಚೆನ್ನಾಗಿ ಇಂಗ್ಲಿಷ್‌ ಮಾತನಾಡಬೇಕು ಮತ್ತು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿ ಶಿಕ್ಷಕರ ಇಂಗ್ಲಿಷ್‌ ಭಾಷಾ ಕೌಶಲ್ಯವನ್ನು ಪರೀಕ್ಷಿಸಿದರು. ಶಿಕ್ಷಣದಲ್ಲಿ ಮಂದಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದಾಗ ಮಾತ್ರ ಸರ್ಕಾರಿ ಶಾಲೆಗಳಿಗೂ ಶೇಕಡಾ 100 ಫಲಿತಾಂಶ ಬರುತ್ತದೆ ಎಂದು ಸಲಹೆ ನೀಡಿದರು.

ನಾನು ದೋಸೆಗಾಗಿ ಎನ್‌ಸಿಸಿ ಸೇರಿದ್ದೆ: ಕುದೂರು ಕೆಪಿಎಸ್‌ ಶಾಲೆಗೆ ಎನ್‌ಸಿಸಿ ಅವಶ್ಯಕತೆ ಇದೆ. ಮೂವತ್ತು ವರ್ಷದ ಹಿಂದೆ ಈ ಶಾಲೆಯಲ್ಲಿ ಎನ್‌ಸಿಸಿ ಇತ್ತು. ಈಗ ಮತ್ತೆ ಅದನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದಾಗ, ನಾನು ಮಂಡ್ಯ ಮುನ್ಸಿಪಲ್‌ ಹೈಸ್ಕೂಲ್‌ನಲ್ಲಿ ಓದುವಾಗ ಎನ್‌ಸಿಸಿಗೆ ಸೇರಿದ್ದೆ. ಎನ್‌ಸಿಸಿಗೆ ಸೇರಿದರೆ ದೋಸೆ ಕೊಡ್ತಾರೆ ಅಂತ ಗೊತ್ತಿತ್ತು. ನಮ್ಮ ಕವಾಯತ್‌ ಮುಗಿದ ನಂತರ ಒಂದು ಟಿಕೆಟ್‌ ಕೊಟ್ಟು ನಿರ್ದಿಷ್ಟಹೋಟೆಲ್‌ಗೆ ಮಸಾಲೆದೋಸೆ ತಿನ್ನಲು ಕಳಿಸುತ್ತಿದ್ದರು. ಆದರೆ ಹೋಟೆಲ್‌ನವನು ಎಷ್ಟುಬುದ್ದಿವಂತ ಎಂದರೆ ಬೇರೆ ಯಾರಾದರೂ ದೋಸೆ ಎಂದರೆ ಜೋರಾಗಿ ಒಂದ್‌ ಮಸಾಲೆ ಅಂತಾ ಕೂಗಿ ಹೇಳೋನು. ಎನ್‌ಸಿಸಿ ವಿದ್ಯಾರ್ಥಿಗಳು ಹೋಗಿ ಚೀಟಿ ಕೊಟ್ಟರೆ ಒಂದು ಎನ್‌ಸಿಸಿ ಮಸಾಲೆ ಅನ್ನೋನು. 

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಇದರಿಂದ ದೋಸೆ ಹಾಕುವ ಭಟ್ಟನಿಗೆ ಅರ್ಥವಾಗಿ ದೋಸೆಯನ್ನು ಚಿಕ್ಕದಾಗಿ ಹಾಕಿ ಕೊಡ್ತಾ ಇದ್ದ. ಇದು ಗೊತ್ತಾಗಿ ನಾನು ಮೊದಲು ದೋಸೆ ತಿಂದು ಆಮೇಲೆ ಚೀಟಿ ಕೊಡುತ್ತಿದ್ದೆ ಎಂದು ತಮ್ಮ ಅನುಭವವನ್ನು ನಗೆ ಚಟಾಕಿ ಹಾರಿಸಿದರು. ಕುದೂರು ಗ್ರಾಮದ ಸಮಸ್ಯೆಗಳನ್ನು ಕನ್ನಡಪ್ರಭದಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖಿಸಿ ಇನ್ನೊಂದು ತಿಂಗಳಲ್ಲಿ ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ತಹಸೀಲ್ದಾರ್‌ ಸುರೇಂದ್ರಮೂರ್ತಿ, ಬಿಇಒ ಜಯಸಿಂಹ, ಕುದೂರು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮಚಿಕ್ಕರಾಜು, ಉಪಾಧ್ಯಕ್ಷ ಕೆ.ಬಿ.ಬಾಲರಾಜು, ಸದಸ್ಯ ಟಿ.ಹನುಮಂತರಾಯಪ್ಪ, ಚಿಕ್ಕಮಸ್ಕಲ್‌ ಸಿದ್ದಲಿಂಗಪ್ಪ, ಕಾಗಿಮಡು ದೀಪು, ಜಗದೀಶ್‌, ಲತಾವೆಂಕಟೇಶ್‌, ರೇಖಾಧನರಾಜ್‌ ಮತ್ತಿತರರು ಹಾಜರಿದ್ದರು.

click me!