ಪುತ್ರಿ ಕಾಣೆ ದೂರು : ಸೀಡಿ ಲೇಡಿ ಕುಟುಂಬಕ್ಕೆ ಸಿಸಿಬಿ ಬುಲಾವ್‌

By Kannadaprabha NewsFirst Published May 26, 2021, 7:07 AM IST
Highlights
  • ‘ಸೀಡಿಯಲ್ಲಿರುವುದು ನಾನೇ’ ಎಂದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ
  • ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸೀಡಿ ಲೇಡಿಯ ಕುಟುಂಬ
  •  ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಸಿಸಿಬಿ ಪೊಲೀಸರ ನೋಟಿಸ್‌

ವಿಜಯಪುರ (ಮೇ.26): ಸೀಡಿಯಲ್ಲಿರುವುದು ನಾನೇ’ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಒಪ್ಪಿಕೊಂಡ ಬೆನ್ನಲ್ಲೇ, ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸೀಡಿ ಲೇಡಿಯ ಕುಟುಂಬಸ್ಥರನ್ನು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಸೀಡಿ ಲೇಡಿ ಪೋಷಕರು ಬೆಳಗಾವಿ ಎಪಿಎಂಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಬೆಂಗಳೂರಿನ ಆರ್‌.ಟಿ.ನಗರ ಠಾಣೆಗೆ ಹಸ್ತಾಂತರವಾಗಿತ್ತು. ಬಳಿಕ ಸಿಸಿಬಿ ಪೊಲೀಸರು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು. 

ಸೀಡಿಲಿದ್ದದ್ದು ನಾನೇ ಎಂದ ಜಾರಕಿಹೊಳಿ, ಶಂಕಿತ ಕಿಂಗ್‌ಪಿನ್‌ಗಳಿಂದ ಜಾಮೀನು ಅರ್ಜಿ ..

ಈ ಹಿನ್ನೆಲೆಯಲ್ಲಿ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿರುವ ಯುವತಿ ಪೋಷಕರಿಗೆ ನೋಟಿಸ್‌ ನೀಡಿದ್ದಾರೆ. ಮೇ 21ರಂದು ಈ ನೋಟಿಸ್‌ ಹೊರಡಿಸಿದ್ದು, ಲಾಕ್‌ಡೌನ್‌ ಮುಗಿದ ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

click me!