ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

By Suvarna News  |  First Published May 25, 2021, 6:55 PM IST

* ಒಂದೇ ದಿನ ಗಂಡ ಹೆಂಡತಿ ಸಾವು
*ಅಪ್ಪೇನಹಳ್ಳಿ ಅಂಗಡಿ ಪರಮೇಶ್ವರಪ್ಪ ದಂಪತಿ ಒಂದೇ ದಿನ ಸಾವು
* ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಬಂದ ಕೆಲವು ಗಂಟೆಗಳಲ್ಲಿ  ಪತ್ನಿ ನಿಧನ


ಕೂಡ್ಲಿಗಿ(ಬಳ್ಳಾರಿ), (ಮೇ.25): ಒಂದೇ ದಿನ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿರೋ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಬೆಳಗ್ಗೆ ಪತಿ ಸಾವನ್ನಪ್ಪಿದ್ರೆ, ಸಂಜೆ ವೇಳೆ, ಪತ್ನಿ ಸಾವನ್ನಪ್ಪಿದ್ದಾರೆ.

 ತಾಲೂಕು ಗುಡೇಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಪ್ಪೇನಹಳ್ಳಿ ಗ್ರ‍ಾಮದ  ಖಾಸಗಿ ಗುತ್ತಿಗೆದಾರ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಅಂಗಡಿ ಪರಮೇಶ್ವರಪ್ಪ (65) ಕೋವಿಡ್ ನಿಂದ ಸೋಮವಾರ ಬೆಳಿಗ್ಗೆ  ಸಾವನ್ನಪ್ಪಿದ್ದರು. ಬಳಿಕ ಪತ್ನಿ ಅಂಗಡಿ ವಾಮದೇವಮ್ಮ(60) ಸಹ ಸೋಮವಾರ ರಾತ್ರಿ 8 ಗಂಟೆಗೆ  ಹೖದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗಂಡ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಯೂ ಸಾವನ್ನಪ್ಪಿದ್ದಾರೆ. 

Tap to resize

Latest Videos

ದಾವಣಗೆರೆ : ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ನಿಧನ

ಸೋಮವಾರ ಬೆಳಿಗ್ಗೆ 9 ಗಂಟೆಗೆ ಬಳ್ಳಾರಿ ವಿಮ್ಸ್ ನಲ್ಲಿ  ಗಂಡ ಅಂಗಡಿ ಪರಮೇಶ್ವರಪ್ಪ ಕೋವಿಡ್ ನಿಂದ  ಬಳ್ಳಾರಿ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದು ಆತನ ಶವವನ್ನು ಸ್ವಗ್ರಾಮ ಅಪ್ಪೇನಹಳ್ಳಿ ಗ್ರಾಮಕ್ಕೆ ತಂದು ಕೋವಿಡ್ ನಿಯಮದಂತೆ ಸಂಜೆ 3 ಗಂಟೆಗೆ ಅಂತ್ಯಕ್ರಿಯೆ ಮಾಡಲಾಗಿತ್ತು. ಆ ಸಮಯದಲ್ಲಿ ಈತನ ಪತ್ನಿ ವಾಮದೇವಮ್ಮ ಸಹ ಅಂತ್ಯಕ್ರಿಯೆಲ್ಲಿ ಭಾಗವಹಿಸಿದ್ದಳು. 

click me!