ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಯಿಂದ ಹಾನಿಗೊಳಗಾಗಿ ಸಂಕಷ್ಟಅನುಭವಿಸುತ್ತಿರುವ ರಾಜ್ಯದ ಜನತೆಗೆ ಪರಿಹಾರ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ್ ನೇರವಾಗಿ ಆರೋಪ ಮಾಡಿದರು.
ಗದಗ (ಆ.09): ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಯಿಂದ ಹಾನಿಗೊಳಗಾಗಿ ಸಂಕಷ್ಟಅನುಭವಿಸುತ್ತಿರುವ ರಾಜ್ಯದ ಜನತೆಗೆ ಪರಿಹಾರ ಕೊಡೋದಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ್ ನೇರವಾಗಿ ಆರೋಪ ಮಾಡಿದರು. ಅವರು ಗದಗ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಳೆಯಿಂದಾಗಿ ಕೃಷಿಕ ಸಮುದಾಯ ಮತ್ತೊಮ್ಮೆ ಭಾರೀ ತೊಂದರೆ ಅನುಭವಿಸುತ್ತಿದೆ. ಬೆಳೆದು ನಿಂತ ಬೆಳೆ ನೆಲ ಕಚ್ಚಿದೆ. ಫಸಲು ಕೈ ಸೇರುವ ಲಕ್ಷಣವಿಲ್ಲ. ಮಳೆ ನಿಲ್ಲುವ ಲಕ್ಷಣ ಕೂಡಾ ಇಲ್ಲ. ಆದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದರು. ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕಾದ ಸರ್ಕಾರ ಗಪ್ ಚುಪ್ ಕೂತಿದೆ. ಮಳೆಯಿಂದಾಗಿ ಹಾನಿಗೊಳಗಾದ ಕುಟುಂಬಸ್ಥರಿಗೆ ಇನ್ನೂ ಪರಿಹಾರದ ಹಣ ಮುಟ್ಟಿಲ್ಲ ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗದಗ ನಗರ ಸೇರಿದಂತೆ ಎಲ್ಲ ಕಡೆ ಮಳೆಯಿಂದ ರಸ್ತೆಗಳು ಹಾಳಾಗಿ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ರಸ್ತೆ ಮೇಲೆ ಸಂಚಾರ ಮಾಡುವುದು ದುಸ್ತರವಾಗಿದೆ.
undefined
ಸ್ವಾತಂತ್ರ್ಯೋತ್ಸವ ಆಚರಿಸುವ ನೈತಿಕತೆ ಬಿಜೆಪಿಗಿಲ್ಲ: ಜಿ.ಎಸ್. ಪಾಟೀಲ
ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ರಸ್ತೆ ದುರಸ್ತಿ ಮಾಡಿಸಿ ರಾಜ್ಯದ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಗದಗ ನಗರದಲ್ಲೂ ರಸ್ತೆ ಪಾಟ್ ಹೋಲ್ ಸಮಸ್ಯೆ ಇದೆ. ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಸೋಮವಾರದಿಂದ ಕೆಲಸ ಆರಂಭವಾಗುತ್ತದೆ. ಸರ್ಕಾರದ ಆಡಳಿತ ಕುಸಿತ ಕಂಡಿದೆ, ಕಾರಣ ಗೊತ್ತಾಗುತ್ತಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಅವರ ಪಕ್ಷದ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ. ರಾಜಕೀಯವಾಗಿ ಬಡಿದಾಡಿಕೊಳ್ಳಿ, ಜನರ ಕಷ್ಟಕಾಲದಲ್ಲಿ ಸ್ಪಂದಿಸಿ ಎಂದರು.
ಜನ್ಮದಿನ ಸಿದ್ದರಾಮಯ್ಯನವರೇ ಸ್ಪಷ್ಟೀಕರಿಸಿದ್ದಾರೆ: ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯನವರ 75ನೇ ಜನ್ಮದಿನದ ಅಮೃತ ಮಹೋತ್ಸವವನ್ನು ದಾವಣಗೆರæಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅತೀ ವಿಜೃಂಭಣೇಯಿಂದ ಆಚರಿಸಿದರು. ಅದು ನಾಡಿನ ಜನತೆಗೆ ಗೊತ್ತು. ಅವರ ಜನ್ಮದಿನವನ್ನು ಸಿದ್ದರಾಮಯ್ಯನವರೇ ಸ್ಪಷ್ಟೀಕರಿಸಿದ್ದಾರೆ. ವೀಕೀಪಿಡಿಯಾದಲ್ಲಿ ಅದು ಎಷ್ಟುತೋರಿಸುತ್ತೇ ಅನ್ನುದು ನಮಗೆ ಗೊತ್ತಿಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
Gadag: ಶ್ರಾವಣ ಶನಿವಾರವೇ ಹನುಮ ಮೂರ್ತಿಯನ್ನು ಕಳ್ಳತನ ಮಾಡಿದ ಕಿಡಿಗೇಡಿಗಳು
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಒಗ್ಗಟನ್ನು ಸಹಿಸಲಾರದೆ, ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇ ಎನ್ನುವ ಭಯದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಜನ್ಮದಿನಾಂಕವನ್ನು ಅಂದಿನ ದಿನಮಾನಗಳಲ್ಲಿ ನಮ್ಮ ತಂದೆ ತಾಯಿಗಳು ಬರೆದಿಟ್ಟಿಲ್ಲ. ಶಾಲಾ ದಾಖಾಲಾತಿ ಮಾಡುವ ಸಂದರ್ಭದಲ್ಲಿ ಶಿಕ್ಷಕರು ಬರೆದಿಟ್ಟಿದ್ದು, ವೀಕೀಪಿಡಿಯಾ ಅದು ಸಿದ್ದರಾಮಯ್ಯ ಅವರ ಅಧಿಕೃತ ವೆಬ್ಸೈಟ್ ಅಲ್ಲ ಅವರ ಕುಟುಂಬಸ್ಥರು, ಅವರ ಅಭಿಮಾನಿಗಳು 75ನೇ ಜನಮದಿನವನ್ನು ಆಚರಿಸಿದ್ದಾರೆ. ಅದರಿಂದ ನಿಮ್ಮದೇನು ತಕರಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.