
ತೀರ್ಥಹಳ್ಳಿ [ಡಿ.26] ಮಲೆನಾಡಿನ ಪರಿಸರವೇ ಹಾಗೆ... ದೂರ ದೂರ ಮನೆಗಳು. ಕಾಲೇಜು ಮುಗಿಸಿದ ಯುವತಿಯರು ಸಂಜೆ ವೇಳೆಯೂ ಕಿಲೋಮೀಟರುಗಳಷ್ಟು ದೂರ ಇರುವ ಮನೆಗೆ ಒಬ್ಬಂಟಿಯಾಗಿ ನಡೆದುಕೊಂಡೆ ಬರುತ್ತಾರೆ. ಆತಂಕದ ಪ್ರಕರಣಗಳು ಬಹಳ ವಿರಳ. ಆದರೆ ತೀರ್ಥಹಳ್ಳಿಯಲ್ಲಿ ನಡೆದಿರುವ ಈ ಪ್ರಕರಣ ಮಾತ್ರ ಯುವತಿಯರಲ್ಲಿ ಭಯ ಹುಟ್ಟುಹಾಕಿದೆ.
ಆಗುಂಬೆ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹುಚ್ಚನೊಬ್ಬ ಏಕಾಏಕಿ ಹಲ್ಲೆ ಮಾಡಿದ್ದಾನೆ. ಇದನ್ನು ಕಂಡು ಹುಚ್ಚನ ತಡೆಯಲು ಬಂದ ಯುವಕನ ಮೇಲೆಯೂ ಹಲ್ಲೆ ಮಾಡಿದ್ದಾನೆ. ಸಿಟ್ಟಿಗೆದ್ದ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ.
ತೀರ್ಥಹಳ್ಳಿ: ಇಂಥ ಕಲಾವಿದೆ ಮತ್ತೆ ಮತ್ತೆ ಹುಟ್ಟಿ ಬರಲಿ...
ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಬಳಿ ಹಿಂದಿ ಭಾಷೆ ಮಾತನಾಡುತ್ತಿದ್ದ, ವಿಚಿತ್ರ ಕೂದಲು ಬಿಟ್ಟಿದ್ದ ಸೈಕೋ ಒಬ್ಬ ಹುಡುಗಿಗೆ ಹೊಡೆದಿದ್ದಾನೆ, ಟೆಂಪೋ ನಿಲ್ದಾಣದ ಬಳಿ ಸ್ಥಳೀಯರೆಲ್ಲಾ ಸೇರಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಪ್ರತಿ ದಿನ ಸಂಚಾರ ಮಾಡುವ ಮಹಿಳೆಯರು ಮತ್ತು ಯುವತಿಯರನ್ನು ಆತಂಕಕ್ಕೆ ತಳ್ಳಿದೆ.
ತೀರ್ಥಹಳ್ಳಿ: ಬಾಲಕಿ ಮೊಬೈಲ್‌ನಲ್ಲಿತ್ತು ಅವಳದ್ದೇ ಅಶ್ಲೀಲ ಚಿತ್ರ, ಆರೋಪಿ ಸೆರೆ
ಆದರೆ ಸೈಕೋ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣ ಆತನನ್ನು ಹುಡುಕಿ ವಿಚಾರಣೆ ನಡೆಸಬೇಕು. ಜನತೆಗೆ ಈತನಿಂದ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.