
ಶಿವಮೊಗ್ಗ[ಡಿ.08]: ಒಂದು ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾದರೆ ಕಾಂಗ್ರೆಸ್ ಪಕ್ಷ ತಕ್ಕ ತಿರುಗೇಟು ನೀಡಲಿದೆ. ಈಗಲೂ ನನಗೆ ಬಿಜೆಪಿಯ ಐದಾರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಎಂಎಲ್ಎಗಳನ್ನು ಮುಟ್ಟಿದರೆ, ನಾನು ಐದಾರು ಬಿಜೆಪಿಯ ಶಾಸಕರನ್ನು ಕರೆ ತರದೇ ಹೋದರೆ ನನ್ನ ಹೆಸರು ಬೇಳೂರು ಗೋಪಾಲಕೃಷ್ಣನೇ ಅಲ್ಲ ಎಂದು ಸವಾಲು ಹಾಕಿದರು.
ಈ ಹಿಂದೆ ಬಿಜೆಪಿಯ 45 ಶಾಸಕರನ್ನು ಎತ್ತಿಹಾಕಿಕೊಂಡು ಹೋಗಿರುವವರು ಇದ್ದರೆ ಅದು ಬೇಳೂರು ಗೋಪಾಲಕೃಷ್ಣ ಮಾತ್ರ. ಹೀಗಿರುವಾಗ ಈಗ ಐದಾರು ಬಿಜೆಪಿಯ ಶಾಸಕರನ್ನು ಕರೆತರುವುದು ಕಷ್ಟವೇ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಬಿಜೆಪಿ ಶಾಸಕರನ್ನು ಕರೆತರದೇ ಹೋದರೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ಬೇಳೂರು ಗುಡುಗಿದ್ದಾರೆ.
ಶೋಭ ಜತೆ ಯಡಿಯೂರಪ್ಪ ಕೇರಳಕ್ಕೆ ಹೋಗಿದ್ದೇಕೆ..