Kalaburagi: ಪೌರ ಕಾರ್ಮಿಕರಿಗೆ ಸತ್ಕರಿಸಿ ಅಚ್ಚರಿ ಮೂಡಿಸಿದ ಕಲಬುರಗಿ ಪಿಎಸ್‌ಐ..!

By Girish Goudar  |  First Published Apr 3, 2022, 12:51 PM IST

*   ನಗರ ಶುಚಿಯಾಗಿರುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ಮುಖ್ಯ
*  ಎಲ್ಲರೂ ಹಬ್ಬ ಮಾಡ್ತಾರೆ. ಆದ್ರೆ ಪರರ ಸಂತೋಷದಲ್ಲಿ ಸಂಭ್ರಮ ಕಾಣುವುದು ಕೆಲವರಿಗೆ ಮಾತ್ರ ಸಾಧ್ಯ
*  ಪೌರ ಕಾರ್ಮಿಕರ ಮುಖದಲ್ಲಿನ ಸಂತೋಷವೇ ನನಗೆ ಯುಗಾದಿಯ ಸಂಭ್ರಮ ಅಂತಾರೆ ಪಿಎಸ್ಐ
 


ವರದಿ: ಶರಣಯ್ಯ ಹಿರೇಮಠ, ಕಲಬುರಗಿ
ಕಲಬುರಗಿ(ಏ.03):
ನಾಡಿನಾದ್ಯಂತ ಎಲ್ಲಡೆ ಯುಗಾದಿ(Yugadi) ಹಬ್ಬವೇನೋ ಸಂಭ್ರಮದಿಂದ ಆಚರಿಸಲಾಗಿದೆ. ಮನೆ - ಮನೆಗಳಲ್ಲೂ ಸಂಭ್ರಮ ಕಂಡಿದ್ದೇವೆ. ಆದ್ರೆ ಕೆಲವರ ಮನಸ್ಸು ಪರೋಪಕಾರದಲ್ಲಿ ಮಾತ್ರ ಸಂಭ್ರಮಿಸುತ್ತೆ. ಯಾರಿಗಾದ್ರೂ ಒಂದಿಷ್ಟು ಉಪಕಾರ ಮಾಡಿದ್ರೆನೇ ಅವರಿಗೆ ಹಬ್ಬ. ಕಲಬುರಗಿಯ(Kalaburagi) ಪೊಲೀಸ್ ಸಬ್ ಇನ್ಸಪೆಕ್ಟರ್(Police Sub Inspector) ಒಬ್ಬರು ಅಂತಹ ಕಾರ್ಯಗಳಲ್ಲಿ ಹಬ್ಬ ಕಂಡವರು. ಹಾಗಾದ್ರೆ ಯಾರವರು? ಏನು ಅವರ ಪರೋಪಕಾರ? ಅನ್ನೋದಕ್ಕೆ ಈ ಸ್ಟೋರಿ ಓದಿ.

ನಗರ ಶುಚಿಯಾಗಿರುವಲ್ಲಿ ಪೌರ ಕಾರ್ಮಿಕರ(Civil Workers) ಪಾತ್ರ ಬಲು ಮುಖ್ಯ. ಹಬ್ಬ ಹರಿ ದಿನಗಳು ಬಂದಾಗ ನಾವು ನೀವೆಲ್ಲಾ ರಜೆ ಅಂತ ಮನೆಯಲ್ಲಿ ಎಂಜಾಯ್ ಮಾಡ್ತಾ ಇರ್ತಿವಿ. ಆ ದಿನಗಳಲ್ಲಿ ಪೌರ ಕಾರ್ಮಿಕರ ಕೆಲಸ ಇನ್ನಷ್ಟು ಜೋರು. ಹಬ್ಬದ ಸಂಭ್ರಮಗಳಲ್ಲಿ ಜನ ಎಸೆದ ಕಸಗಳನ್ನೆಲ್ಲಾ ತೆಗದುಕೊಂಡು ಹೋಗುವುದೇ ಇವರ ವೃತ್ತಿ. ಹೀಗೆ ಕಸ(Garbage) ತೆಗೆಯಲು ಬಂದವರಿಗೆ ಕರೆದು ಕುರ್ಚಿಯ ಮೇಲೆ ಕುಳ್ಳರಿಸಿ, ಸತ್ಕರಿಸಿ, ಅವರಿಗೆ ಯುಗಾದಿ ಹಬ್ಬಕ್ಕೆ ಹೊಸ ಹೊಸ ಬಟ್ಟೆ, ಹಬ್ಬಕ್ಕೆ ಬೇಕಾದ ದವಸ ಧಾನ್ಯ ಕೊಟ್ಟರೆ? ಅವರಿಗೆ ಹೇಗಾಗಿರಬೇಡ ? 

Latest Videos

undefined

Kalaburagi: ಸೌಹಾರ್ದಯುತವಾಗಿ ಯುಗಾದಿ ಆಚರಿಸಿದ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯ

ಮನೆಗೆ ಕಸ ಒಯ್ಯಲು ಬಂದ ಪೌರಕಾರ್ಮಿಕರಿಗೆ ಈ ರೀತಿ ಸತ್ಕರಿಸಿ ಅವರ ಸಂತಸದಲ್ಲಿ ಹಬ್ಬ ಕಂಡವರು ಕಲಬುರಗಿಯ KSRP PSI ಪುಂಡಲಿಕ. ಹೌದು! ಸದಾ ಜನ ಸಾಮಾನ್ಯರ ಬಗ್ಗೆ ಮಿಡಿಯುವ ಪುಂಡಲಿಕ, ತಾವು ಯುಗಾದಿ ಹಬ್ಬ ಆಚರಿಸುವುದು ಅಷ್ಟೇ ಅಲ್ಲದೇ, ತಮ್ಮ ಮನೆ ಬಾಗಿಲಿಗೆ ಕಸ ಒಯ್ಯಲು ಬರುವ ಪೌರ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಹೊಸ ಹೊಸ ಬಟ್ಟೆ, ದವಸ ಧಾನ್ಯ ಕೊಟ್ಟು, ಸತ್ಕರಿಸಿದ್ದಾರೆ. ಆ ಮೂಲಕ ಅವರಿಗೂ ಯುಗಾದಿ ಹಬ್ಬಕ್ಕೆ ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ. ವಿಶೇಷವಾಗಿ ಆ ಪೌರ ಕಾರ್ಮಿಕರ ಮುಖದಲ್ಲಿನ ಸಂತೋಷವೇ ನನಗೆ ಯುಗಾದಿಯ ಸಂಭ್ರಮ ಎನ್ನುತ್ತಾರೆ ಪಿಎಸ್ಐ ಪುಂಡಲಿಕ್

ಕಲಬುರಗಿ ನಗರದ ಗ್ರೀನ್ ಹೌಸ್ KIDB ಅಪಾರ್ಟಮೆಂಟ್‌ನಲ್ಲಿ ವಾಸಿಸುವ PSI ತಮ್ಮ ಬಡಾವಣೆಯಲ್ಲಿ ಅತ್ಯಂತ ಜನಪ್ರೀಯರಾದವರು. PSI ಪುಂಡಲಿಕ್ ಸಾಹೇಬ್ರು, ಕರೆಯುತ್ತಿದ್ದಾರೆ ಅಂದಾಗ ಕಸ ಒಯ್ಯಲು ಬಂದ ಪೌರ ಕಾರ್ಮಿಕರಿಗೆ ನಿಜಕ್ಕೂ ಆತಂಕ. PSI ಸಾಹೇಬ್ರು ಕರಿತಿದಾರೆ ಅಂದ್ರೆ ಮತ್ತೆನಪ್ಲಾ ಅಂದುಕೊಂಡವರಿಗೆ ನಿಜಕ್ಕೂ ಶಾಕ್ ಕೊಟ್ಟಿದ್ದು ಪಿಎಸ್ಐ ಪುಂಡಲಿಕ್. 

ಕಲಬುರಗಿಯಲ್ಲಿ ಗೋವುಗಳ ಮಾರಣ ಹೋಮ..!

ಬಡಾವಣೆಯ ಜನರನ್ನೆಲ್ಲರ ಸಮ್ಮುಖದಲ್ಲಿ ಪೌರ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಕುರ್ಚಿ ಮೇಲೆ ಕುಳ್ಳರಿಸಿ, ಅವರಿಗೆ ಯುಗಾದಿಗೆ ಉಡುಗೊರೆಗಳನ್ನು(Gift) ನೀಡಿ, ಅವರಿಗೆ ಶಾಲು, ಹಾರದ ಮೂಲಕ ಸತ್ಕರಿಸಿ ಅವರ ಸೇವಾ ಕಾರ್ಯವನ್ನು ಕೊಂಡಾಡಿದಾಗ ನಿಜಕ್ಕೂ ಆ ಪೌರ ಕಾರ್ಮಿಕರ ಕಣ್ಣಂಚು ತೇವವಾಗಿದ್ದವು.. ಅಷ್ಟೇ ಅಲ್ಲದೇ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಹೊಸ ಹೊಸ ಬಟ್ಟೆ, ಹಬ್ಬಕ್ಕೆ(Festival) ಅಗತ್ಯವಾದ ದವಸ ಧಾನ್ಯ ಉಡುಗೊರೆಯಾಗಿ ನೀಡಿದ್ದಾರೆ. ಎಲ್ಲರೂ ಹಬ್ಬ ಮಾಡ್ತಾರೆ. ಆದ್ರೆ ಪರರ ಸಂತೋಷದಲ್ಲಿ ಸಂಭ್ರಮ ಕಾಣುವುದು ಕೆಲವರಿಗೆ ಮಾತ್ರ ಸಾಧ್ಯ. ಆ ಸಾಲಿನಲ್ಲಿ psi ಪುಂಡಲಿಕ್ ಸಹ ಒಬ್ಬರು.
 

click me!