ಝಟ್ಕಾ ವರ್ಸಸ್ ಹಲಾಲ್, ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಖರೀದಿಗೆ ಕ್ಯೂ!

Published : Apr 03, 2022, 11:03 AM ISTUpdated : Apr 03, 2022, 11:06 AM IST
ಝಟ್ಕಾ ವರ್ಸಸ್ ಹಲಾಲ್,  ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಖರೀದಿಗೆ ಕ್ಯೂ!

ಸಾರಾಂಶ

* ಹಿಂದೂ ಸಂಘಟನೆ ಮುಖಂಡರಿಂದ ಮಾಂಸ ಮಾರಾಟ  * ಝಟ್ಕಾ ಕಟ್ ಮಾಂಸ ಖರೀದಿ ಗೆ ಕ್ಯೂ ನಿಂತ ಜನರು  * ಬಜರಂದಗಳದ ಜಿಲ್ಲಾ ಸಂಚಾಲಕನಿಂದ ಕುರಿ ಮಾಂಸ ಮಾರಾಟ  

ಆಲ್ದೂರು ಕಿರಣ್, ಚಿಕ್ಕಮಗಳೂರು

ಚಿಕ್ಕಮಗಳೂರು(ಏ.03): ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹಲಾಲ್ ಕಟ್ ಹಾಗೂ ಝಟ್ಕಾ ಕಟ್ ವಿವಾದ ತೀವ್ರಗೊಂಡಿದ್ದು, ಯುಗಾದಿ ಮರುದಿನ ನಡೆಯುವ ಹೊಸತೊಡಕಿಗೆ  ಮಾಂಸ ಖರೀದಿ ಮಾಡಲು ಜನರು ಮಾರುಕಟ್ಟೆಯುತ್ತ ಬರುತ್ತಿದ್ದಾರೆ. ಇದರ ನಡುವೆ ಚಿಕ್ಕಮಗಳೂರಿನಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಕರದ ಪತ್ರ ಮೂಲಕ ಹಲಾಲ್ ಕಟ್ ಮಾಂಸ ಖರೀದಿಸಿದಂತೆ ಮನವಿ ಮಾಡಿತ್ತು. ಹಲಾಲ್ ಮಾಡಿದ ಮಾಂಸ ಬೇಡವೆಂದು ಹಿಂದೂಗಳಿಗೆ ಝಟ್ಕಾ ಕಟ್ ಮಾಂಸ ಮಾರೋದಕ್ಕೆ ಹಿಂದೂ ಸಂಘಟನೆ ಮುಖಂಡರು ಮುಂದಾಗಿ ಮಾಂಸ ಮಾರುತ್ತಿದ್ದಾರೆ.

ನೆರೆ ಮನೆ ವಿವಾಹಿತ ಮಹಿಳೆಯ ಮತಾಂತರಗೊಳಿಸಿ 'ನಿಖಾ' ಮಾಡಿಕೊಂಡ ಯುವಕ!

ಬಜರಂದಗಳದ ಜಿಲ್ಲಾ ಸಂಚಾಲಕನಿಂದ ಕುರಿ ಮಾಂಸ ಮಾರಾಟ 

ಝಟ್ಕಾ ಕಟ್ ವರ್ಸಸ್ ಹಲಾಲ್ ಕಟ್ ದಂಗಲ್ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜೋರಾಗಿದೆ. ಹಲಾಲ್ ಕಟ್ ಗೆ ಪ್ರತಿಯಾಗಿ ಜಿಲ್ಲೆಯಲ್ಲಿ ಝಟ್ಕಾ ಕಟ್ ಅಬ್ಬರ ಜೋರಾಗಿದೆ. ಹಿಂದೂ ಸಂಘಟನೆಯ ಮುಖಂಡರಗಳೇ ಮಾಂಸ ಮಾರಾಟ ಮಾಡಲು ಮುಂದಾಗಿದ್ದಾರೆ .ಹಿಜಬ್ ವಿವಾದದಲ್ಲಿ ಹೈಕೋರ್ಟ್ ತೀರ್ಪಿಗೆ ಮುಸ್ಲಿಮರು ತೋರಿದ ಕ್ರಿಯೆಗೆ ಪ್ರತಿಕ್ರಿಯೇ ತೋರಿದ ಹಿಂದೂ ಸಂಘಟನೆಗಳು ಮುಸ್ಲಿಂ ಬ್ಯಾನ್ ಅಭಿಯಾನ ಆರಂಭಿಸಿದ್ದರು. ಇದೀಗ, ಹಲಾಲ್ ಮಾಡಿದ ಮಾಂಸವನ್ನ ಖರೀದಿಸಬೇಡಿ ಎಂದು ಹಿಂದೂಗಳೇ ಮಾಂಸ ಮಾರೋದಕ್ಕೆ ಮುಂದಾಗಿದ್ದು ಯುಗಾದಿಯ ಹೊಸತೊಡಕಿಗೆ ಸಂಘಟನೆಗಳು ಮಾಂಸ ಮಾರುತ್ತಿದ್ದಾರೆ.ಚಿಕ್ಕಮಗಳೂರಿ ಬಜರಂಗಳದ ಜಿಲ್ಲಾ ಸಂಚಾಲಕ ಶ್ಯಾಮ್ ವಿ ಗೌಡ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ಜನರಿಗೆ ಕುರಿ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ. ಚನ್ನರಾಯಪಟ್ಟಣದಿಂದ ಕುರಿಗಳನ್ನು ರೈತರಿಂದ ಖರೀದಿಸಿದ್ದು ಅವುಗಳನ್ನು ಝಟ್ಕಾ ಕಟ್ ಮೂಲಕ ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳದಲ್ಲೇ ಮಾಂಸ  ಕಟ್  ಮಾಡಿಮ ಕ್ಲಿನ್ ಮಾಡಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಕೆ.ಜೆ ಗೆ 600 ರೂನಂತೆ ಮಾರಾಟ ಮಾಡಲಾಗುತ್ತಿದೆ. 

ನೆರೆ ಮನೆ ವಿವಾಹಿತ ಮಹಿಳೆಯ ಮತಾಂತರಗೊಳಿಸಿ 'ನಿಖಾ' ಮಾಡಿಕೊಂಡ ಯುವಕ!

ಕುರಿ ಮಾಂಸ : ಹೋಂ ಡಿಲವರಿಗೆ ಅವಕಾಶ 

ಹಿಂದೂ ಗಳು ಹಲಾಲ್ ಮಾಂಸವನ್ನು ಖರೀದಿಸಬಾರದು ಎನ್ನುವ ಉದ್ದೇಶದಿಂದ ಶ್ಯಾಮ್  ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾಂಸವನ್ನು ನೀಡಲಾಗಿದ್ದು ಹೋಮ ಡಿಲವರಿಯ ಸೌಲಭ್ಯವನ್ನೂ ನೀಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ  ಹೋಂ ಡಿಲಬರಿಗೆ ಮಾಹಿತಿ ನೀಡಲಾಗಿದ್ದು ಜನರು ಕೂಡ ಪೋನ್ ಮಾಡಿ ಅರ್ಡರ್ ಮಾಡುತ್ತಿದ್ದಾರೆ. 500 ಕೆ.ಜಿಗೂ ಅಧಿಕ ಆರ್ಡರ್ ಇರುವುದರಿಂದ ಹಿಂದೂ ಸಂಘಟನೆಗಳೇ ಕುರಿಗಳನ್ನ ತರಿಸಿ ಬೆಳಿಗ್ಗಿನ ಜಾವದಿಂದ ಕಡಿದು ಮಾರಾಟ ಮಾಡುತ್ತಿದ್ದಾರೆ. ಕೆಲವರಿಗೆ ಹೋಂ ಡಿಲವರಿ ಕೂಡ ಕೊಡುತ್ತಿದ್ದಾರೆ. ಮತ್ತೆ ಕೆಲವರು ಮಾಂಸ ಕಡಿಯುವ ಜಾಗಕ್ಕೆ ಬಂದು ಮಾಂಸವನ್ನ ಕೊಂಡುಕೊಳ್ಳುತ್ತಿದ್ದಾರೆ.ಸರತಿ ಸಾಲಿನಲ್ಲಿ ನಿಂತು ಜನರು ಮಾಂಸವನ್ನು ಖರೀದಿಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ಕುರಿಗಳನ್ನ ಕಡಿದಿದ್ದು, ಆರ್ಡರ್ ಜಾಸ್ತಿ ಇರುವುದರಿಂದ ಮತ್ತಷ್ಟು ಕುರಿಗಳನ್ನ ಕಡಿಯಲು ಮುಂದಾಗಿದ್ದಾರೆ. ಹಿಂದೂ ಅಂಗಡಿಗಳು ಇಲ್ಲದ ಪಕ್ಕದ ತಾಲೂಕು ಮೂಡಿಗೆರೆಗೂ ಚಿಕ್ಕಮಗಳೂರಿನಿಂದಲೇ ಮಾಂಸವನ್ನ ಕಳಿಸುತ್ತಿದ್ದಾರೆ.

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್