ಪಿಎಫ್‌ಐನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕೋಲಾರದಲ್ಲಿ ಜಿಲ್ಲಾ ಕಚೇರಿಯ ಬೀಗ ಒಡೆದು ಪರಿಶೀಲನೆ ನಡೆಸಿ ಬಳಿಕ ಬೀಗ ಜಡಿದಿದ್ದಾರೆ.
ಕೋಲಾರ: ಪಿಎಫ್‌ಐನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕೋಲಾರದಲ್ಲಿ ಜಿಲ್ಲಾ ಕಚೇರಿಯ ಬೀಗ ಒಡೆದು ಪರಿಶೀಲನೆ ನಡೆಸಿ ಬಳಿಕ ಬೀಗ ಜಡಿದಿದ್ದಾರೆ.
ದೇಶದಲ್ಲಿ ಪಿಎಫ್ಐ ಸಂಘಟನೆಗೆ ನಿಷೇಧ ಹೇರಿರುವ ಬೆನ್ನಲೇ, ಕೋಲಾರ ಜಿಲ್ಲೆಯಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. NIA ವಿರುದ್ಧ ಪ್ರತಿಭಟನೆ ಮಾಡುವ ಭರದಲ್ಲಿ ಸೆಪ್ಟೆಂಬರ್ 22ನೇ ತಾರೀಖಿನಂದು ಪಿಎಫ್ಐ ನ ಕೋಲಾರ ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್ ರಾಷ್ಟ್ರೀಯ ಹೆದ್ದಾರಿ 75 ನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
undefined
ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಇನ್ನು ನಿನ್ನೆ ಪಿಎಫ್ಐನ (PFI) ಕೋಲಾರ (Kolara) ಜಿಲ್ಲಾ ಅಧ್ಯಕ್ಷ ಇಮ್ತಿಯಾಜ್ ಅಹ್ಮದ್ ಸೇರಿದಂತೆ ಏಳು ಮಂದಿ ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ನಸುಕಿನಲ್ಲಿ ಬಂಧಿಸುವ ಮೂಲಕ ಶಾಕ್ ನೀಡಿದ್ದಾರೆ. ಏಕಾಏಕಿ ದಾಳಿ ನಡೆಸಿದ ಪೊಲೀಸರು ಇಮ್ತಿಯಾಜ್ ಅಹ್ಮದ್, ಸಿದ್ದಿಕ್ ಪಾಷ, ವಾಸೀಂ ಪಾಷ,ಅಲ್ಲಾ ಬಕಾಶ್, ನಯಾಜ್ ಪಾಷಾ, ಶಹಬಾಜ್ ಪಾಷಾ ಹಾಗೂ ನೂರ್ ಪಾಷಾ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪಿಎಫ್‌ಐ ದಾಳಿ ವೇಳೆ ಸಾವರ್ಕರ್ ಸೇರಿ ಹಲವು ಪುಸ್ತಕ, ಹಣ ಪತ್ತೆ
ಇಂದು ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ (central govt) ಬ್ಯಾನ್ ಮಾಡಿರುವ ಹಿನ್ನೆಲೆ, ಪೊಲೀಸರು ಮತ್ತೆ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಪಿಎಫ್ಐನ ಜಿಲ್ಲಾ ಕಚೇರಿ ಬಂದ್ ಮಾಡಲು ತಹಸೀಲ್ದಾರ್ ನಾಗರಾಜ್ (Nagaraj) ಹಾಗೂ ಡಿವೈಎಸ್ಪಿ ಮುರುಳಿಧರ್ (Muralidhar) ಭೇಟಿ ನೀಡಿದ್ದು, ಜಿಲ್ಲಾ ಕಚೇರಿಯ ಬೀಗ ಮುರಿದು ಕಚೇರಿ ಪರಿಶೀಲನೆ ನಡೆಸಿ ಮಹಜರು ಮಾಡಿದ ಬಳಿಕ ಕಚೇರಿಗೆ ಬೀಗ ಹಾಕಿದ್ದಾರೆ.
ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ (Mahalakshmi badavane) ಶಹಜಾನ್ ಉನ್ನೀಸಾ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದು ಪಿಎಫ್ಐ ಜಿಲ್ಲಾ ಕಚೇರಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ಮುಜಾಹಿದ್ ಪಾಷಾ ಎಂಬುವವರ ಹೆಸರಲ್ಲಿ ಮಾಡಲಾಗಿರುವ ಬಾಡಿಗೆ ಕರಾರು ಪತ್ರ ಸಹ ಪೊಲೀಸರಿಗೆ ಸಿಕ್ಕಿದ್ದು,ಕಳೆದ ಮೂರು ವರ್ಷಗಳಿಂದ ಇದೆ ಮನೆಯನ್ನು ಕಚೇರಿಯನ್ನಾಗಿ ಮಾಡಿಕೊಂಡಿದ್ದರು.