ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ

By Kannadaprabha NewsFirst Published Nov 24, 2019, 7:34 AM IST
Highlights

ನಾಡಿನ ಪ್ರಸಿದ್ಧ ತೀರ್ಥಕ್ಷೇತ್ರವಾದ ಕಟೀಲು ದೇವಸ್ಥಾನದಿಂದ ನಡೆಸಲ್ಪಡುವ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿಅವರನ್ನು ಮೇಳದ ತಿರುಗಾಟದಿಂದಲೇ ಕೈಬಿಟ್ಟಿರುವ ಸನ್ನಿವೇಶ ಭಾರಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು(ನ.24): ನಾಡಿನ ಪ್ರಸಿದ್ಧ ತೀರ್ಥಕ್ಷೇತ್ರವಾದ ಕಟೀಲು ದೇವಸ್ಥಾನದಿಂದ ನಡೆಸಲ್ಪಡುವ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿಅವರನ್ನು ಮೇಳದ ತಿರುಗಾಟದಿಂದಲೇ ಕೈಬಿಟ್ಟಿರುವ ಸನ್ನಿವೇಶ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟೀಲು ಕ್ಷೇತ್ರದಲ್ಲಿ ಶುಕ್ರವಾರ ಯಕ್ಷಗಾನ ಮೇಳಗಳ ಈ ವರ್ಷದ ತಿರು​ಗಾ​ಟದ ಆರಂಭದ ಸೇವೆಯಾಟ ನಡೆದಿತ್ತು. ಮಧ್ಯರಾತ್ರಿ ಸುಮಾರಿಗೆ ಪಟ್ಲ ಸತೀಶ್‌ ಶೆಟ್ಟಿಅವರು ಭಾಗವತಿಕೆಗೆ ಸಿದ್ಧರಾಗಿ ಬಂದಿದ್ದರು. ಇನ್ನೇನು ಮೊದಲು ಪದ್ಯ ಹೇಳಿದ್ದ ಭಾಗವತರು ಜಾಗಟೆಯನ್ನು ಹಸ್ತಾಂತರಿಸಲು ಬಾಕಿ ಇತ್ತು. ಅಷ್ಟರಲ್ಲಿ ಹಿಂದಿನಿಂದ ಯಾರೋ ಪಟ್ಲರ ಜೊತೆಗೆ ಮಾತನಾಡಿರುವುದು ವೈರಲ್‌ ಆಗಿರುವ ವಿಡಿಯೋ ತುಣುಕಿನಲ್ಲಿ ಕಂಡುಬಂದಿದೆ. ಆ ಕ್ಷಣದಲ್ಲಿ ಪಟ್ಲರು ರಂಗಸ್ಥಳದಿಂದ ಇಳಿದು ಅಲ್ಲಿಂದಲೇ ನಿರ್ಗಮಿಸಿದ್ದಾರೆ.

ಬೇರೊಬ್ಬಳ ಆಸೆಗೆ ಹೈಡ್ರಾಮಾ: ರಾಕೇಶ್ ಗುಪ್ತನ ಗುಪ್ತ್-ಗುಪ್ತ್ ಆಟ ಬಟಾಬಯಲು

ರಂಗಸ್ಥಳ ಹಿಂದಿನಿಂದ ಪಟ್ಲರನ್ನು ಭಾಗವತಿಕೆ ನಡೆಸದಂತೆ ಸೂಚನೆ ನೀಡಿದ್ದು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿಎಂದು ಹೇಳಲಾಗುತ್ತಿದೆ. ಈ ಕುರಿತು ಮೇಳದ ಯಜಮಾನರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಈ ಬೆಳವಣಿಗೆ ಪಟ್ಲರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಇದು ಕಲಾವಿದರಿಗೆ ಮಾಡಿದ ಅವಮಾನ ಎಂಬ ಆರೋಪ ವ್ಯಕ್ತಗೊಂಡಿದೆ.

ನಾರಾಯಣ ಗೌಡ ವಿಭಿಷಣ, ಬಿಎಸ್‌ವೈ ರಾಮ, KR ಪೇಟೆ ರಾಮರಾಜ್ಯ: ನಳಿನ್

ಲಭ್ಯ ಮೂಲಗಳ ಪ್ರಕಾರ, ಮೇಳದ ಯಜಮಾನಿಕೆ ವಿರುದ್ಧ ಪಟ್ಲರು ಬಹಿರಂಗ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ತಿರುಗಾಟಕ್ಕೆ ಬಾರದಂತೆ ಮೇಳದ ಯಜಮಾನರು ಮೊದಲೇ ಸೂಚಿಸಿದ್ದರು. ಆದರೆ ಸೇವೆಯಾಟದ ಹಿನ್ನೆಲೆಯಲ್ಲಿ ಪಟ್ಲರು ಭಾಗವತಿಕೆ ನಡೆಸಲು ಆಗಮಿಸಿದ್ದರು ಎನ್ನಲಾಗಿದೆ. ಇದನ್ನು ಧಿಕ್ಕರಿಸಿ ಭಾಗವತಿಕೆ ನಡೆಸಲು ಮುಂದಾದಾಗ ಯಜಮಾನರೇ ಪಟ್ಲರನ್ನು ವಾಪಸ್‌ ಚೌಕಿಗೆ ಕರೆಸಿಕೊಂಡರು ಎಂದು ಹೇಳಲಾಗಿದೆ.

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..!

click me!