ಕೈ ಕಾಲು ಕಳೆದುಕೊಂಡರೂ ಸಾಧನೆ; ವಿದ್ಯಾರ್ಥಿಗಳೊಂದಿಗೆ ಬ್ಲೇಡ್ ರನ್ನರ್ ಶಾಲಿನಿ ಸಂವಾದ

By Web DeskFirst Published Nov 23, 2019, 6:38 PM IST
Highlights

ಬೆಂಗಳೂರಿನ ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ ಎಲ್ಲರಿಗೂ ಸ್ಪೂರ್ತಿ. ರೋಗಾಣುವಿನಿಂದ ತನ್ನ ಎರಡೂ ಕೈ ಕಾಲು ಕಳೆದುಕೂಂಡರೂ ಶಾಲಿನಿ ಸಾಧನೆಗೈದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಶಾಲಿನಿ ಮಣಿಪಾಲ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಗೊಳ್ಳೋ ಮೂಲಕ, ಯುವಜನಾಂಗದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದ್ದಾರೆ.

ಮಣಿಪಾಲ(ನ.23): ಬದುಕು ಇರುವುದು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದಕ್ಕೆ ಹೊರತು ಕೆಡಿಸಿಕೊಳ್ಳುವುದಕ್ಕಲ್ಲ ಎಂದು ಖ್ಯಾತ ಬ್ಲೇಡ್ ರನ್ನರ್ ಬೆಂಗಳೂರಿನ ಶಾಲಿನಿ ಸರಸ್ವತಿ ಹೇಳಿದರು.  ರಿಕೇಟ್ ನಿಯಲ್ ಎಂಬ ರೋಗಾಣುಗಳ ಸೋಂಕಿನಿಂದ ಕೈ ಮತ್ತು ಕಾಲುಗಳನ್ನು ಕಳೆದುಕೊಂಡು, ಕಾಲಿಗೆ ಬ್ಲೇಡ್ ಗಳನ್ನು ಅಳವಡಿಸಿಕೊಂಡು, ಓಡುವುದನ್ನು ಅಭ್ಯಾಸ ಮಾಡಿ, ಅಂಗವಿಕಲರ ಟಿ44 ವಿಭಾಗದ 100 ಮೀಟರ್ ಓಟದಲ್ಲಿ ಏಶ್ಯಾದಲ್ಲಿಯೇ 3ನೇ ಸ್ಥಾನದಲ್ಲಿರುವ ಶಾಲಿನಿ ಸರಸ್ವತಿ ಅವರು, ಶನಿವಾರ ಇಲ್ಲಿನ ಮಾಹೆಯ ಮ್ಯಾರಾಥಾನ್ 2020 ಸರಣಿಯಲ್ಲಿ ಮೊದಲ ಉಪನ್ಯಾಸ ನೀಡಿದರು. ಅವರು ಮೈ ಲೈಫ್ ಮೈ ಜರ್ನಿ ಎಂಬ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ಕೈಕಾಲು ಕಳೆದುಕೊಂಡು ವಿಧಿಗೆ ಸವಾಲೆಸೆದ ಹುಡುಗಿ

ಉತ್ತಮ ಗೆಳೆಯರನ್ನು ಸಂಪಾದಿಸಿ, ಅವರೊಂದಿಗೆ ಗಟ್ಟಿಯಾದ ಸಂಬಂಧವನ್ನು ಉಳಿಸಿಕೊಳ್ಳಿ, ಈ ಸಂಬಂಧಗಳು ಕೊಡುವ ಸಂತೋಷ ಹಣವಾಗಲಿ ಹುದ್ದೆಯಾಗಲಿ ಕೊಡುವುದಿಲ್ಲ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

 ಜೀವನದಲ್ಲಿ ಮಾನಸಿಕವಾಗಿ ಕುಸಿದ ಕ್ಷಣ ಯಾವುದು ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತನ್ನ ಜೀವನದಲ್ಲಿ ಅಂತಹ ಕ್ಷಣವೇ ಬಂದಿಲ್ಲ, ಎರಡೂ ಕೈ ಎರಡೂ ಕಾಲುಗಳನ್ನು ಕಳೆದುಕೊಂಡು 2 ವರ್ಷ ಹಾಸಿಗೆಯಲ್ಲಿದ್ದಾಗ, ಹೀಗಿರುವುದು ನನ್ನ ಬದುಕೇ ಅಲ್ಲ ಎಂದೆನ್ನಿಸಿ ಬ್ಲಾಗ್ ಬರೆಯುವುದಕ್ಕೆ ಆರಂಭಿಸಿದೆ.
 ಜೀವನದಲ್ಲಿ ಪ್ರತಿಯೊಂದು ಘಟನೆಗಳು ಆಯಾಯ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ನಡೆಯುತ್ತವೆ. ನನ್ನ ಬದುಕು ಹಾಗೇ ನಡೆದಿದೆ ಎಂದರು.

ಇದನ್ನೂ ಓದಿ: ದೇಶದ ಮೊದಲ ದೃಷ್ಠಿ ಹೀನ ಐಎಎಸ್‌ ಅಧಿಕಾರಿ ಹೆಗ್ಗಳಿಕೆಗೆ ಪ್ರಾಂಜಲ್ ಪಾತ್ರ

ತನ್ನ ಮದುವೆಯ 4ನೇ ವರ್ಷಾಚರಣೆಗೆ ಗಂಡ ಪ್ರಶಾಂತ್ ಜೊತೆ ಕಾಂಬೋಡಿಯಾಕ್ಕೆ ಹೋಗಿದ್ದಾಗ ಅಲ್ಲಿನ ಬೀದಿ ನಾಯಿಗಳಿಂದ ರಿಕೆಟ್ ಸಿಯಲ್ ಎಂಬ ಬ್ಯಾಕ್ಟೀರಿಯಾದಿಂದ ತನಗೆ ಸೋಂಕ ತಗಲಿತ್ತು. ಅದರಿಂದ ಕೈಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಆದರೇ ಇಂದಿಗೂ ತನಗೆ ಬೀದಿ ನಾಯಿಗಳ ಮೇಲೆ ತಿರಸ್ಕಾರ ಇಲ್ಲ. ನಾಯಿಗಳೆಂದರೇ ನನಗೆ ಬಹಳ ಪ್ರೀತಿ. ಇಂದಿಗೂ ನನ್ನ ತಾಯಿಯೊಂದಿಗೆ ಅವರ ರಕ್ಷಣೆ ಮಾಡುತ್ತಿದ್ದೇನೆ ಎಂದರು.

ನನ್ನ ಜೀವನದಲ್ಲಿ ಗುರಿ ಎಂಬುದಿಲ್ಲ, ಗುರಿ ಸಾಧನೆಯಾದ ಮೇಲೆ ಅದು ಅಲ್ಲಿಗೆ ಮುಗಿಯುತ್ತದೆ, ನನಗೆ ಸಾಧನೆ ಮುಗಿಸುವುದು ಇಷ್ಟವಿಲ್ಲ, ಆದ್ದರಿಂದ ನನಗೆ ಜೀವನದಲ್ಲಿ ಆಕಾಂಕ್ಷೆಗಳು ಮಾತ್ರ ಇವೆ ಎಂದರು. 2016ರಲ್ಲಿ ಬೆಂಗಳೂರಿನಲ್ಲಿ ನಡೆದ 10ಕೆ ಓಟದಲ್ಲಿ ಬ್ಲೇಡ್ ಧರಿಸಿ ಓಡಿದ ಏಕೈಕ ಓಟಗಾರ್ತಿ ಶಾಲಿನಿ ಸರಸ್ವತಿ, 2018ರಲ್ಲಿ ರಾಷ್ಟ್ರೀಯ ಪ್ಯಾರ ಅಥ್ಲೆಟಿಕ್ಸ ನ 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿದ್ದು, ಟೋಕಿಯೋದಲ್ಲಿ 2020ರಲ್ಲಿ ನಡೆಯುವ ಸಮ್ಮರ್ ಪ್ಯಾರಾಲಂಪಿಕ್ ನಲ್ಲಿ ಭಾಗವಹಿಸುವುದಕ್ಕೆ ಕಠಿಣ ಅಭ್ಯಾಸ ನಡೆಸುತ್ತಿರುವಪುದಾಗಿ ಹೇಳಿದರು. 
 

click me!