Mysuru Dasara ಮೈಸೂರು ದಸರಾ ಸಿದ್ಧತೆ ಜೋರು: ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

By Suvarna News  |  First Published Aug 2, 2022, 8:16 PM IST

ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಸರಳವಾಗಿ ಆಚರಿಸ್ಪಟ್ಟಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಭರ್ಜರಿ ಸಿದ್ಧತೆಗಳು ನಡೆದಿವೆ.


ಮೈಸೂರು, (ಆಗಸ್ಟ್.02): ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಆಗಸ್ಟ್ 7 ರಂದು ದಸರಾ ಗಜಪಡೆಗೆ ಸ್ವಾಗತ ಸಿಗಲಿದ್ದು, ಅರಮನೆಗೆ ಬರುವ ಮಾವುತ ಕಾವಾಡಿ ಕುಟುಂಬಗಳಿಗಾಗಿ ತಾತ್ಕಾಲಿಕ ಶೆಡ್‌ಗಳು ನಿರ್ಮಾಣಗೊಳ್ಳುತ್ತಿವೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿ ಸರಳವಾಗಿ ಆಚರಿಸ್ಪಟ್ಟಿದ್ದ ದಸರಾ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ. ಈಗಾಗಿ ಆರಂಭದಿಂದಲೇ ದಸರಾ ತಯಾರಿ ಜೋರಾಗಿದೆ. ಅರಮನೆಗೆ ದಸರಾ ಆನೆಗಳನ್ನು ಬರಮಾಡಿಕೊಳ್ಳಲು ತಯಾರಿ ನಡೆದಿದ್ದು, ಆನೆಗಳೊಂದಿಗೆ ಆಗಮಿಸುವ ಮಾವುತರು ಹಾಗೂ ಕಾವಾಡಿ ಕುಟುಂಬಗಳಿಗೆ ಶೆಡ್ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

Tap to resize

Latest Videos

ಕಳೆಗಟ್ಟಿದ ಅರಮನೆ ಅಂಗಳದಲ್ಲಿ 40 ಕುಟುಂಬಗಳ ವಾಸ್ತವ್ಯಕ್ಕೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ಗಜಪಡೆ ಆಗಮನಕ್ಕೂ ಒಂದು ವಾರ ಮುನ್ನವೇ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಈ ಬಾರಿ 15 ಆನೆಗಳು ದಸರಾದಲ್ಲಿ ಭಾಗಿಯಾಗುತ್ತಿವೆ.

Mysuru Dasara ಈ ಬಾರಿ ಮೈಸೂರು ದಸರಾ ವೈಭವ ಜೋರು, ಸಭೆಯಲ್ಲಿ ನಿರ್ಧಾ

ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಆಗಸ್ಟ್ 7 ರಂದು 9 ಆನೆಗಳ ಬರುತ್ತಿವೆ. ಆ ಆನೆಗಳ ತಂಡಕ್ಕೆ ಆಗಸ್ಟ್ 10 ರಂದು ಅರಮನೆಯಲ್ಲಿ ಸ್ವಾಗತ ಸಿಗಲಿದೆ. ಈ ಬಾರಿ 150ಕ್ಕೂ ಅಧಿಕ ಮಾವುತ ಹಾಗೂ ಕಾವಾಡಿಗಳ ಕುಟುಂಬಸ್ಥರು ಭಾಗಿಯಾಗುತ್ತಿದ್ದು,  ಮೂಲ ಸೌಕರ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭ ಆಗಿದೆ.

ಒಟ್ಟಾರೆ ಮೈಸೂರು ದಸರಾ ನೋಡೊಕೆ ಬಲು ಚಂದೆ. ಚೆಂದದ ದಸರಾ ಮೆರುಗನ್ನು ಹೆಚ್ಚು ಮಾಡುವ ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಕಾತರವಾಗಿದೆ.

ದಸರಾಕ್ಕೆ ಆನೆ ಮಾವುತ, ಕಾವಾಡಿಗರ ಬಹಿಷ್ಕಾರ
ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಾಡಿಗರ ಸಂಘ ನಿರ್ಧರಿಸಿದೆ. ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದರೂ ಇದುವರೆಗೂ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿನ್ನೆ(ಸೋಮವಾರ) ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ.

ಆ. 7 ರಂದು ವೀರನಹೊಸಳ್ಳಿಯಿಂದ ಗಜಪಯಣ ಅರಂಭವಾಗಲಿದೆ. ಅಯಾ ಶಿಬಿರಗಳಲ್ಲಿ ಆನೆಗಳ ನಿರ್ವಹಣೆ ಹೊರತುಪಡಿಸಿ ಹುಲಿ ಹಿಡಿಯುವುದು, ಕಾಡಾನೆ ಹಿಡಿಯುವುದು ಸೇರಿದಂತೆ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯ ಬಹಿಷ್ಕರಿಸಿ ಪ್ರತಿಭಟಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಮುಖ ಮೇಘರಾಜ್ ಮಾಹಿತಿ ನೀಡಿದ್ದಾರೆ.

ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡಿದಲ್ಲಿ ಮಾತ್ರ ಹೆಚ್ಚುವರಿ ಕೆಲಸ ನಿರ್ವಹಿಸಲಾಗುವುದು ಎಂದಿದ್ದಾರೆ. ದುಬಾರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಗೌಸ್ ಖಾನ್, ಉಪಾಧ್ಯಕ್ಷ ಜೆ.ಕೆ.ಡೋಬಿ, ಪ್ರಧಾನ ಕಾರ್ಯದರ್ಶಿ ಫರ್ವಿನ್ ಪಾಷಾ, ಪ್ರಮುಖರಾದ ಮತ್ತಿಗೋಡಿನ ಜೆ.ಕೆ.ವಸಂತ, ರಾಂಪುರದ ನಾಗೇಶ್, ಜೈವಾಲ್ ಸೇರಿದಂತೆ ದುಬಾರೆ, ಮತ್ತಿಗೋಡು, ಸಕ್ರೆಬೈಲು, ಕೆ.ಗುಡಿ, ರಾಂಪುರ ಶಿಬಿರಗಳ ಮಾವುತ, ಕಾವಾಡಿಗರು ಪಾಲ್ಗೊಂಡಿದ್ದರು.
 

click me!