
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಫೆ.04): ಮುಂಜಾಗೃತಾ ಕ್ರಮಗಳನ್ನು ಅನುಸರಸಿದೆ ಎಚ್ಚರಿಕೆ ವಹಿಸದೆ ಇರುವದರಿಂದ ವಿಶ್ವಮಟ್ಟದಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ರೀತಿಯ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆ ಆಗಿಲ್ಲ ಕ್ಯಾನ್ಸರ್ ತಪಾಸಣೆ ಹೆಚ್ಚಿಸಲಾಗಿದ್ದು, ಹಿಂದಿನ ಕ್ಯಾನ್ಸರ್ ಪೀಡಿತರಿಗೆ ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಆರಂಭಗೊಂಡ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ನಡಿಗೆಗೆ ಚಶಲನೆ ನೀಡಿ, ಮಾತನಾಡಿದರು.
ಕ್ಯಾನ್ಸರ್ ಹೆಚ್ಚಳಕ್ಕೆ ನಮ್ಮ ಜೀವನ ಕ್ರಮ, ಸೇವಿಸುವ ಆಹಾರ ಮತ್ತು ರೋಗ ಲಕ್ಷಣ ಕಂಡಾಗ ನಿರ್ಲಕ್ಷ್ಯ ವಹಿಸುವುದು ಮುಖ್ಯ ಕಾರಣವಾಗಿವೆ. ಕ್ಯಾನ್ಸರ್ ರೋಗಕ್ಕೆ ಕಾರಣವಾದ ಹವ್ಯಾಸಗಳಿಗೆ ದಾಸರಾಗಿರುವವರು ಮತ್ತು ಮಹಿಳೆಯರು ಆರೋಗ್ಯ ಇಲಾಖೆ ಆಯೋಜಿಸುವ ಕ್ಯಾನ್ಸರ್ ಸ್ಕ್ರೀನಿಂಗ್ ಶಿಬಿರಗಳಿಗೆ ಹೋಗಿ, ತಪಾಸಣೆ ಮಾಡಿಸಿಕೊಳ್ಳಬೇಕು ರೋಗ ಆರಂಭಿಕ ಹಂತದಲ್ಲಿದ್ದರೇ ಸೂಕ್ತ ಚಿಕಿತ್ಸೆ ನೀಡಿ ಗುಣಡಿಸಬಹುದು ಎಂದು ಅವರು ತಿಳಿಸಿದರು. ತಪಾಸಣೆಗೆ ಒಳ ಪಟ್ಟಾಗ ಕೆಲವು ಪ್ರಕಾರದ ಕ್ಯಾನ್ಸರ್ ಗಳು ತಕ್ಷಣ ಪತ್ತೆ ಆಗುತ್ತವೆ. ಇನ್ನು ಕೆಲವು ದೀರ್ಘ ಅವಧಿಯಲ್ಲಿ ಗೊತ್ತಾಗುತ್ತವೆ.
ಕರ್ತವ್ಯಲೋಪದ ಆರೋಪ: ಗ್ರಾಮ ಪಂಚಾಯತಿ ಪಿಡಿಓ ಗೋಪಾಲಹಾಂಡ ಸಸ್ಪೆಂಡ್!
ಆದ್ದರಿಂದ ಜಾಗೃತಿ ವಹಿಸಿ, ಮಾರಕ ರೋಗಗಳಿಗೆ ಕಾರಣವಾಗುವ ಅಂಶ, ಕಾರ್ಯಗಳಿಂದ ಆದಷ್ಟು ದೂರವಿರಬೇಕು. ಕ್ಯಾನ್ಸರ್ ತೊಲಗಿಸಲು ಸಮಾಜ ಮತ್ತು ಸಂಘಸಂಸ್ಥೆಗಳ ಸಹಕಾರವು ಇಲಾಖೆ, ಸರಕಾರಕ್ಕೆ ಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಭಂಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ರಾಷ್ಟ್ರೀಯ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲರನ್ನು ತಾಸಣೆ ಒಳಪಡಿಸಲು ಕ್ರಮವಹಿಸಲಾಗಿದೆ.
ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 30 ವರ್ಷ ಮೇಲ್ಪಟ್ಟ ಸಾರ್ವಜನಿಕರು ವರ್ಷಕ್ಕೆ ಒಂದು ಬಾರಿಯಾದರೂ ತಪಾಸಣೆಗೆ ಒಳಪಡಬೇಕು ಎಂದುಅವರಯ ಹೇಳಿದರು. ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ.ಸುಜಾತಾ ಹಸವಿಮಠ ಅವರು ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್ 2022 ರಿಂದ ಜನವರಿ 2023 ವರೆಗೆ ಒಟ್ಟು 1,86,170 ಪುರುಷರು ಮತ್ತು 1,45,280 ಮಹಿಳೆಯರು ಕ್ಯಾನ್ಸರ್ ತಪಾಸಣೆಗೆ ಒಳಪಟ್ಟಿದ್ದಾರೆ. ಕ್ಯಾನ್ಸರ್ ರೋಗದ ಯಾವುದೇ ಹೊಸ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆ ಆಗಿಲ್ಲ. ಹಿಂದಿನ ವರ್ಷಗಳಲ್ಲಿ ಪತ್ತೆ ಆಗಿದ್ದ 14 ಜನ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಿದರು.
ಹಿಟ್ ಅಂಡ್ ರನ್: ತುಳು ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂಬರ್ ಬಂಧನ!
ಜಾಥಾ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಯಾನ್ಸರ್ ಜನಜಾಗೃತಿ ಜಾಥಾ ನಡಿಗೆಯು ಆರೋಗ್ಯ ಇಲಾಖೆಯಿಂದ ಆರಂಭಗೊಂಡು ಎಲ್.ಇ.ಕ್ಯಾಂಟಿನ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ರಾಣಾ ಪ್ರತಾಪಸಿಂಹ ಸರ್ಕಲ್, ಆಲೂರ ವೆಂಕಟರಾವ್ ಸರ್ಕಲ್, ಜಿಲ್ಲಾ ನ್ಯಾಯಾಲಯ ಮೂಲಕ ಸಂಚರಿಸಿ, ಜಿಲ್ಲಾ ಆರೋಗ್ಯ ಇಲಾಖೆಗೆ ಬಂದು ಮುಕ್ತಾಯಗೊಂಡಿತು. ಮತ್ತು ಜಾಥಾ ನಡಿಗೆಯುದ್ದಕ್ಕೂ ಕ್ಯಾನ್ಸರ್ ಕುರಿತು ಘೋಷಣೆಗಳ, ಹಾಡುಗಳ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಿದರು.