Council Election Karnataka : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಗೆ ಸಿಕ್ತು ಮತ್ತೊಂದು ಬೆಂಬಲ : ಕೈ ಪರ ಒಲವು

By Kannadaprabha News  |  First Published Dec 7, 2021, 1:18 PM IST
  • ಸ್ಥಳೀಯ ಸಂಸ್ಥೆಗಳ ಮಂಡ್ಯ ವಿಧಾನ ಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ರೈತನ ಮಗನಾದ ದಿನೇಶ್‌ ಗೂಳಿಗೌಡ ಅವರಿಗೆ ರೈತರ ಸಂಘದ ಬೆಂಬಲ
  •  ಕಾಂಗ್ರೆಸ್‌ ಅಭ್ಯರ್ಥಿ ಪರ ಒಲವು ವ್ಯಕ್ತಪಡಿಸಿರುವ ರೈತ ಮುಖಂಡರು

ಪಾಂಡವಪುರ (ಡಿ.07):  ಸ್ಥಳೀಯ ಸಂಸ್ಥೆಗಳ ಮಂಡ್ಯ (mandya) ವಿಧಾನ ಪರಿಷತ್‌ (MLC Election) ಕ್ಷೇತ್ರದ ಕಾಂಗ್ರೆಸ್‌ (Congress) ಅಭ್ಯರ್ಥಿ, ರೈತನ ಮಗನಾದ ದಿನೇಶ್‌ ಗೂಳಿಗೌಡ ಅವರಿಗೆ ರೈತರ ಸಂಘದ ಬೆಂಬಲ ದೊರೆತಿದೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಒಲವು ವ್ಯಕ್ತಪಡಿಸಿರುವ ರೈತ (Farmer) ಮುಖಂಡರು ದಿನೇಶ್‌ ಅವರ ಗೆಲುವಿಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಮಾಜಿ ಶಾಸಕರಾದ ರಮೇಶ್‌ ಬಂಡಿ ಸಿದ್ದೇಗೌಡರು ನೇತೃತ್ವದಲ್ಲಿ ಪಾಂಡವಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೃಷ್ಣೇ ಗೌಡ ಅವರು, ಹಿರಿಯ ಕಾಂಗ್ರೆಸ್‌ ಮುಖಂಡರಾದ ಡಾ.ಕೃಷ್ಣ, ಪರಿಷತ್‌ ಚುನಾವಣಾ ಅಭ್ಯರ್ಥಿ ದಿನೇಶ್‌ ಗೂಳಿಗೌಡ ಅವರು ರೈತ ಮುಖಂಡರನ್ನು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ಇದೇ ವೇಳೆ, ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಕೋರಲಾಯಿತು.

ಪ್ರಸಕ್ತ ಸಾಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ದಿನೇಶ್‌ ಗೂಳಿಗೌಡ ಅವರನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ರೈತ ಸಂಘ(Karnataka Raitha Sangha) ಪ್ರಚಾರಕ್ಕೆ ಕೈಜೋಡಿಸಿದೆ. ಇದೇ ವೇಳೆ, ರೈತ ಸಂಘದ ಮುಖಂಡರ ಜೊತೆಗೂಡಿ ಕ್ಯಾತನಹಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಪಾಲ್ಗೊಂಡು ಮತಯಾಚನೆ ಮಾಡಿದರು.

Latest Videos

undefined

ರೈತ ಮುಖಂಡರ ಅಭಯ:  ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ.ಗೋವಿಂದೇಗೌಡರು, ಮುಖಂಡರಾದ ಗೌಡಪ್ಪ, ರಾಮದಾಸ್‌ ಅವರು ಸೇರಿದಂತೆ ರೈತ ಸಂಘದ ಎಲ್ಲ ಹಿರಿಯ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ. ಗೋವಿಂದೇಗೌಡರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜನ ನಾಯಕನ ಅಗತ್ಯವಿದೆ. ಹೀಗಾಗಿ ಈ ಬಾರಿ ಸ್ವತಃ ರೈತರ ಮಗನಾದ, ಕಾಂಗ್ರೆಸ್‌ ಅಭ್ಯರ್ಥಿಯವರಾದ ದಿನೇಶ್‌ ಗೂಳಿಗೌಡರಿಗೆ ನಮ್ಮ ಬೆಂಬಲವಿದೆ. ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದರು.

ಮಂಡ್ಯದಲ್ಲಿ ಜಿದ್ದಾಜಿದ್ದಿ :  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ( MLC Election) ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿಗಿಳಿದಿದ್ದಾರೆ. ಗ್ರಾಪಂ ಸದಸ್ಯರನ್ನೇ ಗುರಿಯಾಗಿಸಿಕೊಂಡು ಚುನಾವಣಾ (Election) ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎರಡೂ ಪಕ್ಷಗಳು ಗೆಲುವಿಗೆ ಶತ ಪ್ರಯತ್ನ ನಡೆಸುತ್ತಿವೆ.ಜೆಡಿಎಸ್‌ , ಕಾಂಗ್ರೆಸ್‌ ಪಕ್ಷಗಳಿಗೆ ಸರಿಸಮನಾಗಿ ಪೈಪೋಟಿ ನೀಡುವುದಕ್ಕೆ ಮುಂದಾಗಿರುವ ಬಿಜೆಪಿ, ಅಬ್ಬರದ ಚುನಾವಣಾ ಪ್ರಚಾರದೊಂದಿಗೆ ಮುನ್ನಡೆಯುತ್ತಿದೆ. ಸಚಿವ ಕೆ.ಸಿ.ನಾರಾಯಣಗೌಡರು ಅಭ್ಯರ್ಥಿಯೊಂದಿಗೆ ಎಲ್ಲೆಡೆ ಪ್ರಚಾರಕ್ಕಿಳಿದಿದ್ದು ಹೆಚ್ಚಿನ ಮತಗಳನ್ನು ಕಮಲ (BJP) ಬುಟ್ಟಿಗೆ ಬೀಳಿಸಿಕೊಳ್ಳುವುದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ.

ಕೆ.ಆರ್‌.ಪೇಟೆ ಉಪ ಚುನಾವಣೆಯ ನಂತರ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಕಸರತ್ತು ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ತೃಪ್ತಿದಾಯಕ ಮತಗಳನ್ನು ಹೊಂದಿದ್ದು, ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಗ್ರಾಪಂ ಸದಸ್ಯರು ಪಕ್ಷವನ್ನು ಕೈಹಿಡಿಯುವರೆಂಬ ನಂಬಿಕೆ ಅವರಲ್ಲಿದೆ. ಈಗಾಗಲೇ ಬೂಕಹಳ್ಳಿ ಮಂಜು ಅವರು ಮೂರ್ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಬಂದಿರುವ ಅವರು ಮತದಾರರು ನನ್ನ ಪರವಾಗಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಇನ್ನು ಇಂದು(ಡಿ.05) ಬಿಜೆಪಿ ದಂಡು ಮಂಡ್ಯ ಅಖಾಡಕ್ಕಿಳಿದಿದೆ. ಸಚಿವರಾದ, ಎಸ್. ಟಿ. ಸೋಮಶೇಖರ್,  ನಾರಾಯಣಗೌಡ, ಮಂಡ್ಯ ಡಿಸಿಸಿ  ಬ್ಯಾಂಕ್ ಅಧ್ಯಕ್ಷ ಉಮೇಶ, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಪ್ರಮುಖರು  ತಮ್ಮ ಮಂಜು ಪರವಾಗಿ ಭರ್ಜರಿ ಪ್ರಚಾರ ಮಾಡಿದರು

click me!