Council election Karnataka : ಬಿಜೆಪಿ ಅಭ್ಯರ್ಥಿಯದ್ದೇ ಗೆಲುವು ಖಚಿತವೆಂದ ಮುಖಂಡರು

By Kannadaprabha News  |  First Published Dec 7, 2021, 9:58 AM IST
  • ಸ್ಥಳೀಯ ಸಂಸ್ಥೆಯಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ
  • ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಆರ್‌. ಕೌಟಿಲ್ಯ ನಿಚ್ಚಳವಾಗಿ ಜಯ ಸಾಧಿಸುವುದಾಗಿ ಶಾಸಕ ಬಿ. ಹರ್ಷವರ್ಧನ್‌ ವಿಶ್ವಾಸ

ನಂಜನಗೂಡು (ಡಿ.07):  ಸ್ಥಳೀಯ ಸಂಸ್ಥೆಯಿಂದ ರಾಜ್ಯ ವಿಧಾನ ಪರಿಷತ್ತಿಗೆ   (MLC Election) ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಆರ್‌. ಕೌಟಿಲ್ಯ (Raghu Koutilya) ನಿಚ್ಚಳವಾಗಿ ಜಯ ಸಾಧಿಸುವುದಾಗಿ ಶಾಸಕ ಬಿ. ಹರ್ಷವರ್ಧನ್‌ ವಿಶ್ವಾಸ ವ್ಯಕ್ತಪಡಿಸಿದರು.ಸೋಮವಾರ ತಾಲೂಕಿನ 8 ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯತ್‌ ಸದಸ್ಯರನ್ನು ಭೇಟಿಯಾಗಿ ಮಾತನಾಡಿ, ಬಿಜೆಪಿ (BJP) ಅಭ್ಯರ್ಥಿ ರಘು ಕೌಟಿಲ್ಯ ಪರ ಮತಯಾಚಿಸಿದರು.

ಶಿರಮಳ್ಳಿ ಗ್ರಾಮದಲ್ಲಿ ಬಿಜೆಪಿ (BJP) ಕಾರ್ಯಕತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಘು ಕೌಟಿಲ್ಯ ಗೆಲುವು ನೂರಕ್ಕೆ ನೂರರಷ್ಟು ಸತ್ಯ. ನಂಜನಗೂಡಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್‌ ಸದಸ್ಯರು (Panchayat Members) ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಹೆಚ್ಚಿನ ಮತಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (BasavarajaBommai) ನೇತೃತ್ವದ ಸರ್ಕರಾ ಪಂಚಾಯತ್‌ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಗ್ರಾಪಂಗಳನ್ನು ಸಬಲೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮೀಣ ಪ್ರದೇಶದ ಹಳ್ಳಿಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಪಂಚಾಯತಿಗಳ ಚುನಾಯಿತ ಜಪ್ರತಿನಿಧಿಗಳು ತಮ್ಮ ಅಮೂಲ್ಯವಾದ ಮೊದಲ ಪ್ರಾಶಸ್ತ್ಯದ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡುವ ಮೂಲಕ ಆಡಳಿತಾ ರೂಢ ಸರ್ಕಾರದ ಕೈ ಬಲಪಡಿಸಬೇಕು ಎಂದರು.

Tap to resize

Latest Videos

undefined

ಹೋಲಿಕೆ ಸರಿಯಲ್ಲ: ಈ ಸಂದರ್ಭದಲ್ಲಿ ಮೈಸೂರಿನಲ್ಲಿ(Mysuru) ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಡೆದ ಬಿಜೆಪಿ (BJP) ಪ್ರಚಾರ ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಎನ್‌. ಮಹೇಶ್‌ರನ್ನು ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರಿಗೆ ಹೋಲಿಕೆ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಬಿ. ಹರ್ಷವರ್ಧನ್‌, ಭಗವಂತ ಯಾರಿಗೆ ಎಷ್ಟುಬುದ್ಧಿ ನೀಡಿದ್ದಾನೋ ಅಷ್ಟನ್ನೇ ಬಳಸೋದು ಒಳ್ಳೆಯದು. ಹೆಚ್ಚಿನ ಬುದ್ಧಿವಂತಿಕೆ ತೋರುವ ಅವಶ್ಯಕತೆಯಿಲ್ಲ. ನರಿ- ಹುಲಿ ವೇಷ ಧರಿಸಿದ ಮಾತ್ರಕ್ಕೆ ಹುಲಿಯಾಗಲು ಸಾಧ್ಯವೇ ಎಂಬುದನ್ನು ಅರಿಯಬೇಕಿದೆ. ಇನ್ನು ಸಂಸದ ಪ್ರತಾಪ್‌ ಸಿಂಹ ಅವರಿಗೆ ಎಷ್ಟುವಯಸ್ಸಾಗಿದೆಯೋ ಅಷ್ಟುರಾಜಕೀಯ ಅನುಭವವನ್ನು ಹಿರಿಯರಾದ ವಿ. ಶ್ರೀನಿವಾಸ ಪ್ರಸಾದ್‌ ಹೊಂದಿದ್ದಾರೆ. 14 ಚುನಾವಣೆಗಳನ್ನು ಎದುರಿಸಿರುವ ಅವರನ್ನು ಬೇರೆಯವರೊಡನೆ ಹೋಲಿಕೆ ಮಾಡುವುದು ಸರಿಯಲ್ಲ ಅವರನ್ನು ಹೋಲಿಕೆ ಮಾಡಬೇಕೆಂದಲ್ಲಿ ಇನ್ನೊಂದು ಜನ್ಮವೆತ್ತಿ ಬರಬೇಕಿದೆ ಎಂದು ಜರಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಹೊರಳವಾಡಿ ಮಹೇಶ್‌, ಸುರೇಶ್‌ಬಾಬು, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಕುಂಬರಳ್ಳಿ ಸುಬ್ಬಣ್ಣ, ಕೆಂಡಗಣ್ಣಪ್ಪ, ಚಿಕ್ಕರಂಗನಾಯಕ, ಮಲ್ಕುಂಡಿ ಪುಟ್ಟಸ್ವಾಮಿ, ಶಿರಮಳ್ಳಿ ಮಹದೇವಸ್ವಾಮಿ ಮೊದಲಾದವರು ಇದ್ದರು.

ಗೆಲ್ಲಲೇ ಬೇಕಾದ ಸವಾಲು:  ಮೈಸೂರು ಹಾಗೂ ಚಾಮರಾಜನಗರ (Mysuru  - chamarajanagar ) ಜಿಲ್ಲೆಗಳ ಉಸ್ತುವಾರಿ ಸಚಿವರಾಗಿರುವ ಎಸ್‌.ಟಿ. ಸೋಮಶೇಖರ್‌ ( ST Somashekar ) ಅವರಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ (MLC Election ) ನಡೆಯುವ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ.ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎರಡು ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಸಚಿವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅವರಲ್ಲಿ ಎಸ್‌.ಟಿ. ಸೋಮಶೇಖರ್‌ ಒಬ್ಬರು. ಅದೇ ರೀತಿ ದ್ವಿಸದಸ್ಯ ಕ್ಷೇತ್ರಗಳು ಇರುವುದು ಐದು ಜಿಲ್ಲೆಗಳಲ್ಲಿ ಮಾತ್ರ. ಅವುಗಳಲ್ಲಿ ಮೈಸೂರು- ಚಾಮರಾಜನಗರ ಕೂಡ ಒಂದು.

ಎಸ್‌.ಟಿ. ಸೋಮಶೇಖರ್‌ ಅವರು ಯಡಿಯೂರಪ್ಪ(BS Yedoyurappa)  ಅವರ ಸಂಪುಟ ಸೇರಿದ ನಂತರ ಮೊದಲಿಗೆ ಮೈಸೂರು ಉಸ್ತುವಾರಿ ಸಚಿವರಾಗಿದ್ದರು. ಎಸ್‌.ಆರ್‌. ಬೊಮ್ಮಾಯಿ (SR bommai) ಅವರ ಸಂಪುಟದಲ್ಲೂ ಮುಂದುವರೆದ ನಂತರ ಮೈಸೂರು ಜೊತೆಗೆ ಚಾಮರಾಜನಗರ ಉಸ್ತುವಾರಿಯನ್ನು ಹೊತ್ತಿದ್ದಾರೆ. ಕೋವಿಡ್‌-19 (Covid 19) ಹಿನ್ನೆಲೆಯಲ್ಲಿ ಎರಡು ದಸರೆಗಳನ್ನು (Dasara) ಸರಳವಾಗಿ ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಸಿದ್ದಾರೆ. ಕೋವಿಡ್‌(covid ), ಪ್ರವಾಹ ಪರಿಸ್ಥಿತಿ ನಿಯಂತ್ರಣ ವಿಷಯದಲ್ಲಿ ಉಭಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ.

ಮೈಸೂರು- ಚಾಮರಾಜನಗರ (mysuru - chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈವರೆಗೆ ಒಂದು ಉಪ ಚುನಾವಣೆ (By Election) ಸೇರಿದಂತೆ ಆರು ಬಾರಿ ಚುನಾವಣೆ ನಡೆದಿದೆ. ಬಿಜೆಪಿ ಗೆದ್ದಿರುವುದು 2009 ರಲ್ಲಿ ಮಾತ್ರ. ಅದಕ್ಕಿಂತ ಮುಂಚೆ ಬಿಜೆಪಿ ಈ ಕ್ಷೇತ್ರದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಪರಿಸ್ಥಿತಿ. 2013 ರ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್‌ನ ಆರ್‌. ಧರ್ಮಸೇನ ಹ ಹಾಗೂ ಕೆಜೆಪಿಯ ಯು.ಎಸ್‌. ಶೇಖರ್‌ ನಡುವೆ ನೇರ ಹೋರಾಟ ನಡೆದಿತ್ತು. ಧರ್ಮಸೇನ ಗೆದ್ದಿದ್ದರು. ಶೇಖರ್‌ ಗಣನೀಯ ಮತ ಪಡೆದಿದ್ದರು. 2015ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗಣನೀಯ ಮತ ಪಡೆದು, ಸೋತಿದೆ.

click me!