ನಟ ದರ್ಶನ್ ಭೇಟಿಯಾದ ತಾಯಿ ಮೀನಾ ತೂಗುದೀಪ: ಜೈಲಲ್ಲಿ ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಹೆತ್ತವ್ವ..!

Published : Sep 20, 2024, 10:50 AM IST
ನಟ ದರ್ಶನ್ ಭೇಟಿಯಾದ ತಾಯಿ ಮೀನಾ ತೂಗುದೀಪ: ಜೈಲಲ್ಲಿ ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಹೆತ್ತವ್ವ..!

ಸಾರಾಂಶ

ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ರನ್ನು ನೋಡಲು ತಾಯಿ ಮೀನಾ ಇದೇ ಮೊದಲ ಬಾರಿಗೆ ಜೈಲಿಗೆ ಆಗಮಿಸಿದ್ದರು. ಅಕ್ಕ ದಿವ್ಯಾ, ಭಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್‌ ನಟನ ಆರೋಗ್ಯ ವಿಚಾರಿಸಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬ ಸದಸ್ಯರೊಂದಿಗೆ ದರ್ಶನ್ ಮಾತನಾಡಿದರು. 

ಬಳ್ಳಾರಿ(ಸೆ.20):  ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ನನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ ಹಾಗೂ ಭಾವ ಸೇರಿ ಕುಟುಂಬ ಸದಸ್ಯರು ಗುರುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಗನ ಸ್ಥಿತಿ ಕಂಡು ತಾಯಿ ಕಣ್ಣಿರು ಹಾಕಿದ್ದು, ದರ್ಶನ್‌ ಸಮಾಧಾನಮಾಡಿದ್ದಾರೆ. 

ನಗರದ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ರನ್ನು ನೋಡಲು ತಾಯಿ ಮೀನಾ ಇದೇ ಮೊದಲ ಬಾರಿಗೆ ಜೈಲಿಗೆ ಆಗಮಿಸಿದ್ದರು. ಅಕ್ಕ ದಿವ್ಯಾ, ಭಾವ ಮಂಜುನಾಥ್, ಅಕ್ಕನ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್‌ ನಟನ ಆರೋಗ್ಯ ವಿಚಾರಿಸಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬ ಸದಸ್ಯರೊಂದಿಗೆ ದರ್ಶನ್ ಮಾತನಾಡಿದರು.

ದರ್ಶನ್ ಕಷ್ಟ ನೋಡಿ ಖುಷಿ ಪಡೋ ವ್ಯಕ್ತಿ ನಾನಲ್ಲ;ಕಿಚ್ಚ -ದಚ್ಚು ಫ್ರೆಂಡ್‌ಶಿಪ್‌ಗೆ ಸಿಕ್ತು ಉತ್ತರ!

ಜೈಲಿನಲ್ಲಿ ಅಮೋಘ 100ನೇ ದಿನ; ನಟ ದರ್ಶನ್ ಲಿಸ್ಟ್‌ ಸೇರಿದ ಮತ್ತೊಂದು ರೆಕಾರ್ಡ್!

ಸಾಮಾನ್ಯವಾಗಿ ಸಿನಿಮಾ ಲೋಕದಲ್ಲಿ 100 ದಿನಗಳನ್ನು ಪೂರೈಸುವುದಕ್ಕೆ ಅದರದ್ದೇ ಬೆಲೆ ಇದೆ. ಸಿನಿಮಾ 100ಡೇಸ್ ಓಡಿದ್ರೆ ಚಿತ್ರತಂಡ ಶತದಿನೋತ್ಸವವನ್ನ ಆಚರಿಸಿ ಅದ್ದೂರಿಯಾಗಿ ಸಂಭ್ರಮಿಸುತ್ತೆ. ದರ್ಶನ್ ಕರೀಯರ್‌ನಲ್ಲೂ ಇಂಥಾ ಶತದಿನೋತ್ಸವ ಕಂಡ ಹಲವು ಸಿನಿಮಾಗಳಿವೆ. ಇದೀಗ ದರ್ಶನ್ ಜೈಲಲ್ಲಿ ಶತದಿನ ಪೂರೈಸಿ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮಿಂಚಬೇಕಿದ್ದ ದರ್ಶನ್ ಜೈಲು ಸೇರಿ ಇವತ್ತೀಗೆ ಅಮೋಘ 100ದಿನ. ಸಾಮನ್ಯವಾಗಿ ಸಿನಿ ರಂಗದಲ್ಲಿ ನೂರು ದಿನ ಪೂರೈಸಿದ್ರೆ ಅದನ್ನ ಹಬ್ಬದ ತರಹ ಸೆಲೆಬ್ರೇಟ್ ಮಾಡಲಾಗುತ್ತೆ. ಶತದಿನೋತ್ಸವ ಆಚರಿಸಿ ಚಿತ್ರತಂಡದವರಿಗೆಲ್ಲಾ ಪ್ರಶಸ್ತಿ ಫಲಕ ನೀಡಲಾಗುತ್ತೆ.

ದರ್ಶನ್ ವೃತ್ತಿ ಬದುಕಿನಲ್ಲಿ ಇಂಥಾ ಶತದಿನೋತ್ಸವ ಆಚರಿಸಿದ ಹಲವು ಸಿನಿಮಾಗಳಿವೆ. ದರ್ಶನ್ ನಟನೆಯ ಮೊದಲ ಚಿತ್ರ ಮೆಜೆಸ್ಟಿಕ್ ಚಿತ್ರವೇ ಮೆಜೆಸ್ಟಿಕ್‌ನಲ್ಲಿ ನೂರು ದಿನ ಪೂರೈಸಿತ್ತು. ಆ ಬಳಿಕ ಕರಿಯ, ದಾಸ, ಕಲಾಸಿಪಾಳ್ಯ, ಅಯ್ಯ, ಸ್ವಾಮಿ, ಸಾರಥಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ದರ್ಶನ್ ನಟನೆಯ ಹಲವು ಸಿನಿಮಾಗಳು ಸೆಂಚುರಿ ಬಾರಿಸಿವೆ. ಇಷ್ಟು ಅಮೋಘ ಯಶಸ್ಸಿನ ರೆಕಾರ್ಡ್ ಇರೋದ್ರಿಂದ್ಲೇ ದರ್ಶನ್‌ನ ಬಾಕ್ಸ್ ಆಫೀಸ್ ಸುಲ್ತಾನ್ ಅಂತ ಕರೆಯಲಾಗ್ತಾ ಇತ್ತು. ಇದೀಗ ಈ ಸುಲ್ತಾನ್ ಮತ್ತೊಂದು ದಾಖಲೆ ಬರೆದಿದ್ದಾನೆ. ದರ್ಶನ್ ಅರೆಸ್ಟ್​ ಆಗಿ ಜೈಲಿನಲ್ಲಿ ನೂರು ದಿನ ಪೂರೈಸಿ ಶತದಿನೋತ್ಸವ ಆಚರಿಸಿದ್ದಾನೆ.

ಕೌರವನ ಪಾತ್ರ ಮಾಡಿದವರ ಬಾಳಲ್ಲಾಗುತ್ತಾ ಕರಾಳ ಕುರುಕ್ಷೇತ್ರ?

ದರ್ಶನ್ ಮೊದಲ ಬಾರಿ ಜೈಲು ಸೇರಿದ್ದು 2011ರಲ್ಲಿ. ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್ ಅಲ್ಲಿ 14 ದಿನ ಕಳೆದಿದ್ದರು. ಆದರೆ ವಿಜಯಲಕ್ಷ್ಮೀ  ಕ್ಷಮಿಸಿ ದೂರು ಹಿಂಪಡೆದ ಮೇಲೆ ದರ್ಶನ್ ಬಿಡುಗಡೆಯಾಗಿದರು. ಹಿಂದಿನ ತಪ್ಪನ್ನ ತಿದ್ದಿಕೊಳ್ಳದ ದರ್ಶನ್ ಇದೀಗ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಗೆಳತಿ ಪವಿತ್ರಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ ರೇಣುಕಾಸ್ವಾಮಿ ಅನ್ನೋ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ದರ್ಶನ್ ಜೈಲು ಪಾಲಾಗಿದ್ದಾನೆ. ಜೂನ್ 9ರಂದು ರೇಣುಕಾಸ್ವಾಮಿ ಬಾಡಿ ಸಿಕ್ಕಿತ್ತು ಜೂನ್ 11ರಂದು ಈ ಕೊಲೆಯಲ್ಲಿ ದರ್ಶನ್ ಕೈವಾಡ ಇರೋದನ್ನ ಖಚಿತಪಡಿಸಿಕೊಂಡು ಬಂಧಿಸಲಾಗಿತ್ತು. ಅಲ್ಲಿಂದ ದರ್ಶನ್ ಅರೆಸ್ಟ್ ಆಗಿ ಇಂದಿಗೆ 100 ದಿನಗಳು ತುಂಬಿವೆ.

ಜೂನ್ 16ರಿಂದ ಈ ಕೇಸ್‌ನಲ್ಲಿ ಕೋರ್ಟ್ ಕಲಾಪ ಆರಂಭಗೊಂಡಿದೆ. ಜೂನ್ 22ನೇ ತಾರೀಖು ದರ್ಶನ್‌ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲ್ ಶಿಫ್ಟ್ ಮಾಡಲಾಗಿತ್ತು. ದುರಂತ ಅಂದ್ರೆ ಕೊಲೆ ಮಾಡಿ ಜೈಲು ಸೇರಿದ್ರೂ ಒಂಚೂರು ಪಶ್ಚಾತ್ತಾಪವಿಲ್ಲದೇ ದರ್ಶನ್ ಜೈಲಿನ ರೌಡಿಗಳ ಜೊತೆಗೆ ದರ್ಬಾರ್ ಮಾಡಿಕೊಂಡಿದ್ದರು. ಜೈಲಲ್ಲೇ ಗುಂಡು, ತುಂಡು, ಸಿಗರೇಟ್ ವ್ಯವಸ್ಥೆ ಮಾಡಿಕೊಂಡಿದ್ದರು. ಯಾವಾಗ ಈ ವಿಚಾರ ಬಹಿರಂಗ ಆಯ್ತೋ ದರ್ಶನ್‌ನ ಬಳ್ಳಾರಿ ಜೈಲಿಗೆ ಎತ್ತಂಗಡಿ ಮಾಡಲಾಗಿದೆ. ಕಳೆದ 20 ದಿನಗಳಿಂದ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿದ್ದಾರೆ. 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ