Mangaluru |UT ಖಾದರ್ ಕ್ಷೇತ್ರದಲ್ಲಿ SDPIನಿಂದ ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಬೆದರಿಕೆ

By Suvarna NewsFirst Published Nov 21, 2021, 11:16 AM IST
Highlights
  • ಮಾಜಿ ಸಚಿವ ಯು.ಟಿ. ಖಾದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ದ ಎಸ್ ಡಿಪಿಐ ವಾರ್
  • ಕಾಂಗ್ರೆಸ್ ಮುಖಂಡರಿಗೆ ಬಹಿರಂಗವಾಗಿ  ಎಸ್ ಡಿಪಿಐ ಜಿಲ್ಲಾಧ್ಯಕ್ಷ  ಕೊಲೆ ಬೆದರಿಕೆ 

ಉಳ್ಳಾಲ (ನ.21):  ಮಾಜಿ ಸಚಿವ ಯು.ಟಿ. ಖಾದರ್ (UT Khader) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ವಿರುದ್ದ ಎಸ್ ಡಿಪಿಐ (SDPI) ವಾರ್ ಆರಂಭಿಸಿದೆ. ಕಾಂಗ್ರೆಸ್ (congress) ಮುಖಂಡರಿಗೆ ಬಹಿರಂಗವಾಗಿ  ಎಸ್ ಡಿಪಿಐ ಜಿಲ್ಲಾಧ್ಯಕ್ಷ  ಕೊಲೆ ಬೆದರಿಕೆ (Murder Threat) ಒಡ್ಡಿದ್ದಾರೆನ್ನಲಾಗಿದೆ.  'ಕಾಂಗ್ರೆಸ್ಸಿಗರನ್ನು ಆಸ್ಪತ್ರೆಗೆ (hosputal) ಕಳುಹಿಸಲೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸಲೂ ಗೊತ್ತಿದೆ' ಎಂದು ಮಂಗಳೂರಿನ (mangaluru) ಉಳ್ಳಾಲದಲ್ಲಿ (Ullal) ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ (Abubakar kulai) ಬಹಿರಂಗವಾಗಿ ಹೇಳಿದೆ ನೀಡುವ ಮೂಲಕ ಬೆದರಿಕೆ ಒಡ್ಡಿದ್ದಾರೆ. 

ಸಾಮಾಜಿಕ ತಾಣಗಳಲ್ಲಿ (social media) ಸದ್ಯ ಕಾಂಗ್ರೆಸ್ (Congress) ಮುಖಂಡರಿಗೆ ಬೆದರಿಕೆ ಹಾಕಿದ ಎಸ್‌ಡಿಪಿಐ ಮುಖಂಡನ ಭಾಷಣ ವೈರಲ್ (Viral) ಆಗಿದೆ. ಕಾಂಗ್ರೆಸ್ ಪಕ್ಷದವರು ನಿರಾಶ ಭಾವನೆಗೆ ಹೋಗಿರೋದನ್ನ ಗಮನಿಸುತ್ತಿದ್ದೇವೆ,  ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಾ ಇದ್ದಾರೆ ಎಂದು ಅಬೂಬಕ್ಕರ್ ಕುಳಾಯಿ ಹೇಳಿದ್ದಾರೆ.  

ಎಸ್‌ಡಿಪಿಐ ಬೆಳೆಯುತ್ತಾ ಇರುವುದನ್ನು ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಯಾರೋ ಕಾಂಜಿ ಪೀಂಜಿ ಗಾಂಜಾದವರನ್ನ (Ganja) ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇಷ್ಟರ ವರೆಗೆ ನಾವು ತಲೆ ತಗ್ಗಿಸಿದ್ದೇವೆ, ಆದರೆ ನಮಗೆ ಎರಡು M ಇದೆ.  ಇದರಲ್ಲಿ ಒಂದು ಮ್ಯಾನ್ ಪವರ್ (Man power), ಇನ್ನೊಂದು ಮಸಲ್ ಪವರ್ (Muscle Power) ಎಂದು ಹೇಳಿಕೆ ನೀಡಿದ್ದಾರೆ. 

ಇನ್ನೆಲ್ಲಿಯಾದರೂ ನಮ್ಮ ‌ಪಕ್ಷದ ಕಾರ್ಯಕರ್ತರನ್ನ (workers) ಮುಟ್ಟಿದರೆ ಒಂದು M ಯೂಸ್ ಮಾಡುತ್ತೇವೆ ಎಂದು ಭಾಷಣದಲ್ಲಿ ಹೇಳಿಕೆ ನೀಡಿದ್ದು, ಎಸ್ ಡಿಪಿಐಗೆ ಸೇರುವುದಾದರೆ ಆಸ್ಪತ್ರೆ ಮಲಗೋಕೆ, ಜೈಲಿಗೆ (jail) ಹೋಗೋಕೆ, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು ಎಂದು ಹೇಳಿರುವುದು ವೈರಲ್ ಆಗಿದೆ.  

ಹಾಗಂತ ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ. ನಿಮ್ಮನ್ನ ಆಸ್ಪತ್ರೆಗೆ ಕಳುಹಿಸೋಕೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸೋಕು ಗೊತ್ತಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಮುತಾಲಿಕ್‌ಗೆ ಬೆದರಿಕೆ - ದೂರು : 

 ಶ್ರೀರಾಮ ಸೇನೆ (Shrirama sena) ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ಗೆ (Pramod Muthalik) ಕೊಲೆ ಬೆದರಿಕೆ (Murder Threat) ಹಾಕಿದ ಆರೋಪದ ಮೇಲೆ ಎಸ್‌ಡಿಪಿಐ (SDPI) ಕಾರ್ಯದರ್ಶಿ ಸೈಯದ್‌ ಅಷ್ಫಕ್‌ ವಿರುದ್ಧ ಇಲ್ಲಿನ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ (Police station) ದೂರು ದಾಖಲಾಗಿದೆ. ನಗರದಲ್ಲಿ ನ.12ರಂದು ನಡೆದ ನಡೆದ ಪ್ರತಿಭಟನೆ ವೇಳೆ ಎಸ್‌ಡಿಪಿಐ ಜಂಟಿ ಕಾರ್ಯದರ್ಶಿ ಎಸ್‌.ಎಂ.ಆರ್‌.ಸೈಯದ್‌ ಅಷ್ಫಕ್‌, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯ ಕ್ಷ ಪ್ರಮೋದ್‌ ಮುತಾಲಿಕ್‌ ಅವರ ಹೆಣವನ್ನು ಕೆಡವುತ್ತೇವೆ. ಯಾರಾದರೂ ಹಿಂದುಗಳು ಹೆಣವನ್ನು ತೆಗೆದುಕೊಂಡು ಹೋಗಲು ಬನ್ನಿ. ತಯಾರಿದ್ದರೆ ಬನ್ನಿ ಎಂದು ಮಾಧ್ಯಮಗಳ ಮುಖಾಂತರ ಹಿಂದುಗಳ ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ್ದ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ.

ಎಸ್‌ಡಿಪಿಐನ (SDPI) ಜಂಟಿ ಕಾರ್ಯದರ್ಶಿ ಸೈಯದ್‌ ಅಷ್ಫಕ್‌ ಹೇಳಿಕೆಗಳಿಂದ ಹಿಂದುಗಳ (Hindu) ಮನಸ್ಸಿಗೆ ಘಾಸಿ ಉಂಟಾಗಿದೆ. ತಕ್ಷಣವೇ ಆ ವ್ಯಕ್ತಿ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರು ಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ.

 ಪ್ರಮೋದ್‌ ಮುತಾಲಿಕ್‌ಗೆ ಪ್ರಾಣ ಬೆದರಿಕೆ ಹಾಕಿರುವ ಹಾಗೂ ಹಿಂದುಗಳ ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಂಡು, ನ್ಯಾಯ ಕೊಡಿಸುವಂತೆ ಹಿಂದು ಮಹಾಸಭಾ ಸಮಿತಿಯ ಉಮೇಶ ಕತ್ತಿ ದಾವಣಗೆರೆ (Davanagere) ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

click me!