Bengaluru| ನಿಯಮ ಮೀರಿ ಶೇ.84 ಕಟ್ಟಡ ನಿರ್ಮಾಣ..!

By Kannadaprabha News  |  First Published Nov 21, 2021, 10:38 AM IST

*  ಒಂದೂವರೆ ವರ್ಷದಲ್ಲಿ 8496 ಕಟ್ಟಡಗಳಿಗೆ ನಕ್ಷೆ ಮಂಜೂರು
*  ಪಾಲಿಕೆಯಿಂದ ಈವರೆಗೆ 6148 ಕಟ್ಟಡಗಳ ಸರ್ವೇ
*  ಹೈಕೋರ್ಟ್‌ ಛಾಟಿ ಬೆನ್ನಲ್ಲೇ ಅಧಿಕಾರಿಗಳಿಂದ ವರದಿ ಸಿದ್ಧ
 


ಸಂಪತ್‌ ತರೀಕೆರೆ

ಬೆಂಗಳೂರು(ನ.21):  ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 8496 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪಡೆದಿದ್ದು, ಅದರಲ್ಲೂ 5223 ಕಟ್ಟಡಗಳು ಬೈಲಾ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕುರಿತು ಸರ್ವೆ ನಡೆಸಿರುವ ಬಿಬಿಎಂಪಿ(BBMP) ಮುಂದಿನ ವಿಚಾರಣೆ ಸಂದರ್ಭದಲ್ಲಿ ವರದಿಯನ್ನು ಹೈಕೋರ್ಟ್‌ಗೆ(Highcourt)ಸಲ್ಲಿಸಲಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

Tap to resize

Latest Videos

undefined

ಅಕ್ರಮ ಕಟ್ಟಡಗಳ(Illegal Buildings) ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ ಪಾಲಿಸದ ಬಿಬಿಎಂಪಿ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆಯ ಕೇಸು ಹಾಕಬೇಕಾಗುತ್ತದೆ ಎಂದು ಹೈಕೋರ್ಟ್‌ ಚಾಟಿ ಬೀಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಆಡಳಿತ 198 ವಾರ್ಡ್‌ಗಳಲ್ಲಿ 2020 ಜನವರಿ 1ರಿಂದ 2021 ಜೂನ್‌ 30ರವರೆಗೆ ನಕ್ಷೆ ಮಂಜೂರಾತಿ ನೀಡಿರುವ ಕಟ್ಟಡಗಳ ಸರ್ವೆ ನಡೆಸಿದ್ದು, ಶೇ.84ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವುದು ಪತ್ತೆಯಾಗಿದೆ.

ಒಟ್ಟು ಹತ್ತು ವಲಯ ಕಚೇರಿಗಳ ಮೂಲಕ ಒಟ್ಟು 8496 ಕಟ್ಟಡಗಳಿಗೆ ನಕ್ಷೆ ಅನುಮೋದನೆ ಆಗಿದೆ. ಈ ಪೈಕಿ ಅತೀ ಹೆಚ್ಚಿನ ನಕ್ಷೆ ಅನುಮೋದನೆ ಆಗಿರುವುದು ರಾಜರಾಜೇಶ್ವರಿ ನಗರ ವಲಯದಲ್ಲಿ (2154). ನಂತರದಲ್ಲಿ ಪಶ್ಚಿಮ 1270, ದಕ್ಷಿಣ 1215, ಪೂರ್ವ 977, ಮಹಾದೇವಪುರ 889, ಬೊಮ್ಮನಹಳ್ಳಿ 796, ಯಲಹಂಕ 757, ದಾಸರಹಳ್ಳಿ 307, ಬೆಂಗಳೂರು ಉತ್ತರ (ಜೆಡಿಟಿಪಿ) 92 ಹಾಗೂ ಬೆಂಗಳೂರು(Bengaluru) ದಕ್ಷಿಣ(ಜೆಡಿಟಿಪಿ) 39 ಕಟ್ಟಡಗಳ ನಕ್ಷೆಗೆ ಅನುಮೋದನೆಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.

ಅನಧಿಕೃತ ಕಟ್ಟಡ ತೆರವಿಗೆ ನಿರ್ಲಕ್ಷ್ಯ: ಹೈಕೋರ್ಟ್‌ ತರಾಟೆ

ಹತ್ತು ವಲಯಗಳಲ್ಲಿ ನಕ್ಷೆ ಮಂಜೂರಾತಿ ನೀಡಿರುವ 8496 ಕಟ್ಟಡಗಳ ಪೈಕಿ ಈವರೆಗೆ 6,148 ಕಟ್ಟಡಗಳ ಸರ್ವೇ ನಡೆಸಿದ್ದು, 5223 ಕಟ್ಟಡಗಳು ನಿಯಮ ಉಲ್ಲಂಘಿಸಿವೆ(Violation). ಅನುಮೋದನೆ ನೀಡಿರುವ ನಕ್ಷೆಯಲ್ಲಿ ಆರ್‌.ಆರ್‌.ನಗರದಲ್ಲಿ 1403 ಕಟ್ಟಡಗಳು ಇನ್ನೂ ಸರ್ವೆ ಆಗಿಲ್ಲ. ಬೊಮ್ಮನಹಳ್ಳಿಯಲ್ಲಿ 503, ಪಶ್ಚಿಮ 124 ಹಾಗೂ ಪೂರ್ವ ವಲಯ 30, ಮಹದೇವಪುರ-92, ಯಲಹಂಕ-96, ದಾಸರಹಳ್ಳಿ-33, ದಕ್ಷಿಣ-68 ಕಟ್ಟಡಗಳ ಸರ್ವೆ ಇನ್ನೂ ಆಗಬೇಕಿದೆ. ಅಂತೆಯೇ ಬಾಕಿ ಉಳಿದ 2348 ಕಟ್ಟಡಗಳಲ್ಲೂ ಸುಮಾರು ಎರಡು ಸಾವಿರ ಕಟ್ಟಡಗಳು ನಕ್ಷೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಿಬಿಎಂಪಿ ನಗರ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೈಕೋರ್ಟ್‌ ಅನಧಿಕೃತ ಕಟ್ಟಡಗಳ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅವಸರವಾಗಿ ಅಧಿಕಾರಿಗಳು ಸರ್ವೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಮುಂದಿನ ವಾರ(ನ.26)ನ್ಯಾಯಾಲಯದಲ್ಲಿ(Court) ನಡೆಯಲಿರುವ ವಿಚಾರಣೆ ವೇಳೆಯಲ್ಲಿ ಈ ವರದಿಯನ್ನೇ ಸಲ್ಲಿಸಲಿದ್ದಾರೆ. ಬಾಕಿ ಉಳಿದ ಕಟ್ಟಡಗಳ ಸರ್ವೆಗೆ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮುಂದುವರೆಯಲಿದೆ ಕಟ್ಟಡಗಳ ಸರ್ವೇ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಅವರು, ಈಗಾಗಲೇ ಪಾಲಿಕೆ ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ಸರ್ವೆ(Survey) ನಡೆಸುವಂತೆ ಎಲ್ಲ ವಲಯಗಳ ಅಧಿಕಾರಿಗಳು ಆದೇಶ ಮಾಡಿದ್ದಾರೆ. 2007 ಜನವರಿ 16ರಿಂದ ಡಿಸೆಂಬರ್‌ 31ವರೆಗೆ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ಸರ್ವೇ ನಡೆಸಿ 2023 ಜೂನ್‌ 4ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಬೆಂಗಳೂರು: ಈ ಬಡಾವಣೆಯ 950 ಎಕರೆ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು

2008 ಜನವರಿ 1ರಿಂದ 2009 ಡಿಸೆಂಬರ್‌ 31ರವರೆಗಿನ ಸರ್ವೇ ವರದಿಯನ್ನು 2023 ಮಾರ್ಚ್‌ 4ರೊಳಗೆ ಸಲ್ಲಿಸಬೇಕು. ಅಂತೆಯೇ 2010 ಜನವರಿ 1ರಿಂದ 2011 ಡಿಸೆಂಬರ್‌ 314ವರೆಗಿನ ಸರ್ವೇ ವರದಿಯನ್ನು 2022 ಡಿಸೆಂಬರ್‌ 4ರವರೆಗೆ ಸಿದ್ಧಪಡಿಸಬೇಕು. 2012 ಮತ್ತು 2013ರ ಅಂತ್ಯದೊಳಗೆ ಅನುಮೋದನೆ ನೀಡಿರುವ ನಕ್ಷೆ ಮಂಜೂರಾತಿಯಲ್ಲಿ(Sanction) ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಸರ್ವೇ ವರದಿಯನ್ನು 2022 ಸೆಪ್ಟೆಂಬರ್‌ 4ರೊಳಗೆ ಸಲ್ಲಿಸಬೇಕು. 2014 ಮತ್ತು 2015ರ ಸರ್ವೇ ವರದಿಯನ್ನು 2022 ಜೂನ್‌ 4 ಮತ್ತು 2016 ಹಾಗೂ 2017ರ ಸರ್ವೇ ವರದಿಯನ್ನು 2022 ಮಾರ್ಚ್‌ 4 ಮತ್ತು 2018 ಹಾಗೂ 2019ರ ಸರ್ವೇ ವರದಿಯನ್ನು 2021 ಡಿಸೆಂಬರ್‌ 4ರೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ಎಲ್ಲ ವಲಯಗಳ ನಗರ ಯೋಜನೆ ಎಂಜಿನಿಯರ್‌ಗಳು, ಸರ್ವೇಯರ್‌ಗಳು, ಜಂಟಿ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಅನಧಿಕೃತ ಕಟ್ಟಡಗಳ ಬಗ್ಗೆ ಸರ್ವೇ ನಡೆಯುತ್ತಿದೆ. ಅನುಮತಿ(Permission) ಪಡೆಯದೆ ಕಟ್ಟಡ ನಿರ್ಮಾಣ ಮತ್ತು ನಕ್ಷೆ ಮಂಜೂರಾತಿ ಪಡೆದು ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳು ಎಂದು ಎರಡು ವಿಧದಲ್ಲಿ ಸರ್ವೇ ನಡೆಸಲಾಗುತ್ತಿದೆ. ವಾರ್ಡ್‌ವಾರು ಅನಧಿಕೃತ ಮತ್ತು ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ನೋಟಿಸ್‌ ನೀಡುತ್ತಿದ್ದೇವೆ. ಇದೇ ವರದಿಯನ್ನು ಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ.  
 

click me!