ಧಾರವಾಡ: ಸರ್ಕಾರಿ ಇಲಾಖೆಯ ಗುಪ್ತ ಮಾಹಿತಿ ಸೋರಿಕೆ, ಈ ಮಹಿಳಾ ಸಿಬ್ಬಂದಿ ಮೇಲೆ ಯಾಕಿಷ್ಟು ನಂಬಿಕೆ?

By Girish GoudarFirst Published May 14, 2024, 12:01 PM IST
Highlights

ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಮಾಡಿದ್ದೇ ಆಟ ಅನ್ನೋ ಹಾಗೆ ಹಾಗಿದೆ. ಖಾಸಗಿ ವ್ಯಕ್ತಿಗಳಿಂದ ಇಲಾಖೆಯ ಗುಪ್ತ ಮಾಹಿತಿಗಳು ಸಾರ್ವಜನಿಕವಾಗಿ ಸೋರಿಕೆ ಮಾಡಿರುವ ಆರೋಪ ಗೀತಾ ಕುನ್ನೂರು ಮೇಲೆ ಕೇಳಿ ಬಂದಿದೆ. ಆದರೆ ಹಿರಿಯ ಅರಣ್ಯ ಇಲಾಖೆಯ ಡಿಎಫ್‌ಓ ವಿವೇಕ್ ಕವರಿ ಅವರು ಇಂತವರ ಮೇಲೆ ಕೃಪಕಟಾಕ್ಷ ಇಟ್ಟಿದ್ದು ಯಾಕೆ..?ಅನ್ನೋ ಆರೋಪಗಳು ಹಿರಿಯ ಅಧಿಕಾರಿಗಳ ಮೆಲೆ ಕೇಳಿ ಬರುತ್ತಿವೆ. 

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಮೇ.14):  ಇತ್ತೀಚೆಗೆ ಸರಕಾರದಲ್ಲಿ ಕೆಲಸ ಮಾಡೋ ಸರಕಾರಿ ನೌಕರಸ್ಥರಿಗೆ ಸರಿಯಾಗಿ ವೇತನ ಆಗ್ತಾ ಇಲ್ಲ. ಆದರೆ ಇಲ್ಲೊಂದು ಕಚೇರಿಯಲ್ಲಿ ಅನಧಿಕೃತವಾಗಿ ಸರಕಾರಿ ಕಚೇರಿಯಲ್ಲಿ ಗೀತಾ ಕೊನ್ನುರು ಎಂಬ ಮಹಿಳಾ ಸಿಬ್ಬಂದಿಯನ್ನ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಅನಧಿಕೃತವಾಗಿ ಸಿಬ್ಬಂದಿಯನ್ನ ಕೆಲಸಕ್ಕೆ ಇಟ್ಟುಕೊಂಡು ಇಲಾಖೆಯ ಗುಪ್ತ ಮಾಹಿತಿಗಳನ್ನ ಹೊರಗಡೆ ಬಿಡುವುದಲ್ಲದೆ ಸರಕಾರಿ ಇಲಾಖೆಗೆ ಅಗೌರವವನ್ನ ತಂದಿದ್ದಾರೆ ಅನ್ನೋ ಆರೋಪಗಳಿವೆ. ಹೀಗೆ ಆರೋಪಗಳು ಇದ್ದರೂ ಸಹ ಅವರನ್ನ ಅರಣ್ಯ ಇಲಾಖೆಯ ಕಚೇರಿಯಲ್ಲೇ ಮತ್ತೆ ಕೆಲಸಕ್ಕೆ ಮುಂದುವರೆಸಿದ್ಯಾಕೆ ಅನ್ನೋ ಪ್ರಶ್ನೆ ಇಲಾಖೆಯಲ್ಲಿ ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Latest Videos

ಹೌದು, ಧಾರವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಮಾಡಿದ್ದೇ ಆಟ ಅನ್ನೋ ಹಾಗೆ ಹಾಗಿದೆ. ಖಾಸಗಿ ವ್ಯಕ್ತಿಗಳಿಂದ ಇಲಾಖೆಯ ಗುಪ್ತ ಮಾಹಿತಿಗಳು ಸಾರ್ವಜನಿಕವಾಗಿ ಸೋರಿಕೆ ಮಾಡಿರುವ ಆರೋಪ ಗೀತಾ ಕುನ್ನೂರು ಮೇಲೆ ಕೇಳಿ ಬಂದಿದೆ. ಆದರೆ ಹಿರಿಯ ಅರಣ್ಯ ಇಲಾಖೆಯ ಡಿಎಫ್‌ಓ ವಿವೇಕ್ ಕವರಿ ಅವರು ಇಂತವರ ಮೇಲೆ ಕೃಪಕಟಾಕ್ಷ ಇಟ್ಟಿದ್ದು ಯಾಕೆ..?ಅನ್ನೋ ಆರೋಪಗಳು ಹಿರಿಯ ಅಧಿಕಾರಿಗಳ ಮೆಲೆ ಕೇಳಿ ಬರುತ್ತಿವೆ. 

ಧಾರವಾಡ: ಊಟಕ್ಕಾಗಿ 20 ನಿಮಿಷ ಮತದಾನ ನಿಲ್ಲಿಸಿದ ಸಿಬ್ಬಂದಿ

ಧಾರವಾಡ ಸಾಮಾಜಿಕ ವಿಭಾಗ ಕಚೇರಿಯಲ್ಲಿ ಅಕ್ರಮವಾಗಿ ಕೆಲಸ ನಿರ್ವಹಿಸುತ್ತಿರುವ ಗೀತಾ ಕನ್ನೂರ ಮೇಲೆ‌  ಅಧಿಕಾರಿಗಳು ಕರುಣೆ ತೋರುತ್ತಿರುವುದು ಯಾಕೆ..? ಜೊತೆಗೆ ಅವಳನ್ನ ಅನಧಿಕೃತವಾಗಿ ಕೆಲಸಕ್ಕೆ‌ ತೆಗೆದುಕೊಂಡಿದ್ದು ಯಾಕೆ..? ಮತ್ತು ಅವಳ ಮೇಲೆ ಯಾಕೆ ಕ್ರಮ ತೆಗದುಕೊಳ್ಳುತ್ತಿಲ್ಲ ಅನ್ನೋ ಮಾತುಗಳು ಇಲಾಖೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೇಳಿ ಬರುತ್ತಿದೆ. 

ಇತ್ತೀಚೆಗೆ ಅಕ್ರಮವಾಗಿ ಗೀತಾ ಕನ್ನೂರ ಎಂಬುವವರು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಮಾಡಿರುವ ಗನಂಧಾರಿ ಕೆಲಸವನ್ನ ಇಡಿ ಇಲಾಖೆ ಮಾಡುತ್ತಿದೆ. ಮೊದಲು ಸಾಮಾಜಿಕ ಅರಣ್ಯ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರ ಮೇಲೆ ಮಾಹಿತಿ ಸೋರಿಕೆ ಆರೋಪವಿದ್ದರೂ ಸಧ್ಯ ಅವರನ್ನ‌ ಮತ್ತೆ ಡಿಎಫ್‌ಓ ಅವರು ವಿಭಾಗಿಯ ಕಚೇರಿಯಲ್ಲಿ ಕೆಲಸ ಕೊಟ್ಟಿದ್ದು ಅನುಮಾನಕ್ಕೆ ಎಡೆ ಮಾಡಿ‌ಕೊಟ್ಟಿದೆ. 

ಧಾರವಾಡ ಸಾಮಾಜಿಕ ವಿಭಾಗದಲ್ಲಿ ಏನಾಗುತ್ತಿದೆ ಅನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಈ ಹಿಂದೆ ವಿಭಾಗದ ಕಚೇರಿಯಲ್ಲಿಯೇ ಅಧಿಕಾರಿಗಳ ವಿರುದ್ಧ ಅಕ್ರಮದ ಬಗ್ಗೆ ಮಾಹಿತಿಯನ್ನ ಸೋರಿಕೆ ಮಾಡಿರುವ ಆರೋಪವು ಕೂಡ ಗೀತಾ ಕೊನ್ನೂರು ಅವರ ಮೇಲೆ ಇದೆ. ಆದರೆ ಮತ್ತೆ ಖಾಸಗಿ ವ್ಯಕ್ತಿಗಳನ್ನ ಸರಕಾರಿ ಕಚೇರಿಯಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದು ಯಾಕೆ.?..ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ..

ಸಾಮಾಜಿಕ ಅರಣ್ಯ ಇಲಾಖೆಯ ವಿಭಾಗ ಕಚೇರಿ ಮ್ಯಾನೇಜರ್ ಶ್ರೀದೇವಿ ಕೊರಡ್ಡಿ ಅನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅರಣ್ಯ ಗುತ್ತಿಗೆದಾರರಿಂದ ಗೀತಾ ಕನ್ನೂರ ಇವರಿಗೆ ವೇತನ ನೀಡುತ್ತಿದ್ದಾರೆ ಅನ್ನೋ ಮಾತುಗಳು ಕಚೇರಿಯಲ್ಲಿ ಕೇಳಿ‌ಬರುತ್ತಿದೆ. ಸರ್ಕಾರದ ಖಜಾನೆಯಿಂದ ವೇತನ ಕೊಡುವ ಬದಲಾಗಿ ಕನ್ನೂರ ಅವರಿಗೆ ವೇತನವನ್ನು ಗುತ್ತಿಗೆದಾರರಿಂದ ಕೊಡಿಸಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಸಧ್ಯ ದಾರವಾಡ ವಲಯದಲ್ಲಿ ಇದೊಂದು ಗುಮಾನಿಯೊಂದು ಎದ್ದಿದೆ. ವೇತನ ಇಲಾಖೆಯಿಂದ ಕೊಡಬೇಕು ಆದರೆ ಗುತ್ತಿಗೆದಾರರು ಕೊಡುತ್ತಿರುವದೇಕೆ ? ಆದ್ದರಿಂದ ಕೂಡಲೇ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿ ಇಂತಹ ಖಾಸಗಿ ವ್ಯಕ್ತಿಗಳ ಮೇಲೆ ಕ್ರಮ ಕೈ ಗೊಳ್ಳಬೇಕಾಗಿದೆ.

ನಾಲ್ಕು ವರ್ಷಗಳ ಬಳಿಕ ಮತದಾನ ಮಾಡಲು ಕೋರ್ಟ್ ಅವಕಾಶ; ಇವತ್ತು ನನಗೆ ಖುಷಿಯಾಗಿದೆ ಎಂದ ವಿನಯ ಕುಲಕರ್ಣಿ

ಇನ್ನು ಈಗಾಗಲೆ ಸಾಕಷ್ಟು ಆರೋಪಗಳನ್ನ ಹೊತ್ತಿರುವ ಗೀತಾ ಕುನ್ನೂರು ಎಂಬುವರು ಸದ್ಯ ಇಲಾಖೆಯ ಗುಪ್ತ ಮಾಹಿತಿಗಳನ್ನ ಖಾಸಗಿ ವ್ಯಕ್ತಿಗಳಿಗೆ ನಿಡಿ ಇಲಾಖೆಯ ಮಾನ ಮರಿಯಾದೆಯನ್ನ ತೆಗೆಯುವುದಲ್ಲದೆ ಇಲಾಖೆಗೆ ಅಗೌರವವನ್ನ ತೋರಿಸುತ್ತಿದ್ದಾರೆ.

ಇನ್ನಾದರೂ ಹಿರಿಯ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಮಾಹಿತಿಯನ್ನ ಇಂತಹ ಖಾಸಗಿ ವ್ಯಕ್ತಿಗಳು ಸೋರಿಕೆ ಮಾಡುತ್ತಿದ್ದಾರೆ.ಇಂತಹ ಮಹಿಳಾ ಅಧಿಕಾರಿಯಯನ್ನ ಅದೆ ಇಲಾಖೆಯ ವಿಭಾಗಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಇನ್ನಾದರೂ ಈ ವರದಿ ನೋಡಿ ಡಿಎಫ್‌ಓ ಅವರು ಇನ್ನಷ್ಟು ಮಾಹಿತಿಗಳು ಲೀಕ್ ಆಗುವ ಮುನ್ನವೆ ಕ್ರಮ ಕೈಗೊಳ್ತಾರಾ ಎಂಬುದನ್ನ ಕಾಯ್ದು ನೋಡಬೇಕಿದೆ. 

click me!