ದಾಬಸ್‌ಪೇಟೆ: ಕೆಮಿಕಲ್‌ ಕಾರ್ಖಾನೆ ಕಾರ್ಮಿಕನಿಗೆ ಮೈಮೇಲೆ ಬೊಬ್ಬೆ ಎದ್ದು ದುರ್ಮರಣ..!

Published : May 14, 2024, 11:16 AM IST
ದಾಬಸ್‌ಪೇಟೆ: ಕೆಮಿಕಲ್‌ ಕಾರ್ಖಾನೆ ಕಾರ್ಮಿಕನಿಗೆ ಮೈಮೇಲೆ ಬೊಬ್ಬೆ ಎದ್ದು ದುರ್ಮರಣ..!

ಸಾರಾಂಶ

ಕರ್ತವ್ಯ ನಿರ್ವಹಿಸುತ್ತಿದ್ದ ದೇಹದಲ್ಲಿ ಬೊಬ್ಬೆ ಕಾಣಿಸಿಕೊಂಡಿದ್ದು ತಕ್ಷಣ ತ್ಯಾಮಗೊಂಡ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆದರೂ ಕಡಿಮೆಯಾಗದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 

ದಾಬಸ್‌ಪೇಟೆ(ಮೇ.14):  ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಪಿಎಲ್ ಕೆಮಿಕಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಗೋಪಾಲ್ ಚೌಧರಿ(19) ಮೃತಪಟ್ಟಿದ್ದಾನೆ. ಈತ ಮೂಲತಹ ಪಶ್ಚಿಮ ಬಂಗಾಳ ರಾಜ್ಯದ ಬೀರ್ ಬುಲ್ ಜಿಲ್ಲೆಯ ಆನಂದ್ ನಗರ ಗ್ರಾಮದವರೆಂದು ಗುರುತಿಸಲಾಗಿದೆ.

ಈತನಿಗೆ ಮೇ ೮ರಂದು ಕರ್ತವ್ಯ ನಿರ್ವಹಿಸುತ್ತಿದ್ದ ದೇಹದಲ್ಲಿ ಬೊಬ್ಬೆ ಕಾಣಿಸಿಕೊಂಡಿದ್ದು ತಕ್ಷಣ ತ್ಯಾಮಗೊಂಡ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆದರೂ ಕಡಿಮೆಯಾಗದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕಂಪನಿಯಲ್ಲಿ ತಯಾರಿಸುವ ಕೆಮಿಕಲ್ ನಿಂದ ಸಾವನ್ನಪ್ಪಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕರ್ನಾಟಕದಲ್ಲಿ ಮುಂದುವರಿದ ವರುಣನ ಅಬ್ಬರ: ಸಿಡಿಲಿಗೆ ಕುರಿಗಾಹಿ ಬಲಿ

ಆತನ ಜೊತೆಗೆ ಇನ್ನು 3-4 ಕಾರ್ಮಿಕರಿಗೂ ಮೈ ಮೇಲೆ ಬೊಬ್ಬೆ ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಕುಟುಂಬಸ್ಥರು ಮತ್ತು ಸಹ ಕಾರ್ಮಿಕರು ಆಗ್ರಹಿಸಿದ್ದಾರೆ.
 

PREV
Read more Articles on
click me!

Recommended Stories

ಬೆಂಗಳೂರಲ್ಲಿ ಧ್ರುವ್ ರಾಠಿ, ಅಭಿಜಿತ್ ದೀಪ್ಕೆ ಪ್ರತಿಭಟನೆ; ಹಗಲು ಕನಸು ಕಂಡ ಪಾಕ್ ನಟಿ?
'ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ' ಭೀಕರ ಬರಗಾಲ ಪರಿಶೀಲನೆ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿಕೆ