ಬೆಂಗಳೂರು: ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಆಗಸ್ಟ್ ಒಳಗೆ ಮೆಟ್ರೋ ಸಂಚಾರ ಶುರು?

By Kannadaprabha NewsFirst Published May 14, 2024, 9:25 AM IST
Highlights

298 ಕೋಟಿ ವೆಚ್ಚದ ಈ ಮಾರ್ಗ ಯೋಜನೆ ಪ್ರಕಾರ ಸಾಗಿದ್ದರೆ 2019ರ ಆಗಸ್ಟ್‌ನಲ್ಲಿಯೇ ಜನಸಂಚಾರಕ್ಕೆ ಲಭ್ಯವಾಗಬೇಕಿತ್ತು. ಆದರೆ, ಈಗ ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಮುಗಿದಿದೆ. ನಡುವಿನ ಮೂರು ಮೆಟ್ರೋ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿನ್ನೂ ನೆಲಹಾಸಿಗೆ ಗ್ರಾನೈಟ್ ಕಲ್ಲು ಅಳವಡಿಕೆ, ಎಲೆಕ್ನಿಕಲ್ ಮತ್ತು ಸಿಗ್ನಲಿಂಗ್ ಹಾಗೂ ಬಣ್ಣ ಬಳಿಯುವ ಕೆಲಸ ಆಗಬೇಕಿದೆ.

ಬೆಂಗಳೂರು(ಮೇ.14): ಐದು ವರ್ಷದ ಆಮೆಗತಿಯ ಕಾಮಗಾರಿ ಎನ್ನಿಸಿಕೊಂಡಿರುವ ನಮ್ಮ ಮೆಟ್ರೋ ಹಸಿರು ಕಾರಿಡಾರ್‌ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಅಂತರದ ಮಾರ್ಗದಲ್ಲಿ ಜನಸಂಚಾರ ಸನ್ನಿಹಿತವಾಗಿದ್ದು, ಬಹುತೇಕ ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಈ ಮಾರ್ಗವನ್ನು ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜಿಸಿದೆ.

298 ಕೋಟಿ ವೆಚ್ಚದ ಈ ಮಾರ್ಗ ಯೋಜನೆ ಪ್ರಕಾರ ಸಾಗಿದ್ದರೆ 2019ರ ಆಗಸ್ಟ್‌ನಲ್ಲಿಯೇ ಜನಸಂಚಾರಕ್ಕೆ ಲಭ್ಯವಾಗಬೇಕಿತ್ತು. ಆದರೆ, ಈಗ ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಮುಗಿದಿದೆ. ನಡುವಿನ ಮೂರು ಮೆಟ್ರೋ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿನ್ನೂ ನೆಲಹಾಸಿಗೆ ಗ್ರಾನೈಟ್ ಕಲ್ಲು ಅಳವಡಿಕೆ, ಎಲೆಕ್ನಿಕಲ್ ಮತ್ತು ಸಿಗ್ನಲಿಂಗ್ ಹಾಗೂ ಬಣ್ಣ ಬಳಿಯುವ ಕೆಲಸ ಆಗಬೇಕಿದೆ.

Latest Videos

ಆರ್‌.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗ: ಅಕ್ಟೋಬರ್‌ಗೆ ಹಳದಿ ಮೆಟ್ರೋ ಮಾರ್ಗ ಟೆಸ್ಟ್‌

ಕಾಮಗಾರಿ ಮುಗಿದ ಬಳಿಕ ಜೂನ್ ಹಾಗೂ ಜುಲೈ ಮಧ್ಯಂತರದಲ್ಲಿ ಮಾರ್ಗದ ತಪಾಸಣೆ ನಡೆಯಲಿದ್ದು, ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆ ನಡೆಸಲು ಸಿದ್ದಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಉನ್ನತಾಧಿಕಾರಿಗಳು ಹೇಳುತ್ತಾರೆ. ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿವೆ. ಆದರೆ, ಭೂಸ್ವಾದೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿ ಹತ್ತು ಹಲವು ಸವಾಲು, ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಲಭ್ಯವಾಗುತ್ತಿದೆ. ಮೆಟ್ರೋ ಸಂಚಾರಕ್ಕೆ ಜನತೆಯ ಕೋರಿಕೆಯಂತೆ ಅಂಚೆಪಾಳ್ಯ ಮತ್ತು ಇತರೆ ಪ್ರದೇಶಗಳಿಗೆ ಪ್ರವೇಶ ಒದಗಿಸಲು ಬಿಎಂಆರ್ ಸಿಎಲ್ ಒಟ್ಟು 3 ಕಿಮೀ ರಸ್ತೆ ನಿರ್ಮಿಸಿದೆ. ವಿಸ್ತರಿತ ಈ ಮಾರ್ಗ ತೆರೆದ ಬಳಿಕ ನೆಲಮಂಗಲ ನಿವಾಸಿಗಳು ಮೆಟ್ರೋವನ್ನು 6 6 ಅಂತರದಲ್ಲಿ ಕ್ರಮಿಸಬಹುದು. ಮುಖ್ಯವಾಗಿ ಬಿಐಇಸಿ ಕೇಂದ್ರದಲ್ಲಿ ನಿರಂತರವಾಗಿ ನಡೆಯುವ ಕಾರ್ಯಕ್ರಮಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಜೊತೆಗೆ ಸಮೀಪದ ಮಾದನಾಯಕನಹಳ್ಳಿ ಮತ್ತು ಮಾಕಳಿ ಗ್ರಾಮಗಳ ನಿವಾಸಿಗಳಿಗೆ ಮೆಟ್ರೋ ಹತ್ತಿರವಾಗಲಿದೆ ತಿಳಿಸಿದೆ. 

ಬಾಕಿ ಉಳಿದಿರುವ ಕಾಮಗಾರಿಯನ್ನು ಜೂನ್‌ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರನ್ನು (ಸಿಎಂಆ‌ರ್.ಎಸ್) ತಪಾಸಣೆಗೆ ಆಹ್ವಾನಿಸಲಾಗುವುದು. ಪ್ರಾಯೋಗಿಕ ಚಾಲನೆ ಮತ್ತು ಪರಿಶೀಲನೆಯ ನಂತರ, ಜುಲೈ ಅಂತ್ಯದ ವೇಳೆಗೆ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಯೊಬ್ಬರು ವಿವರಿಸಿದರು.

click me!