ಮೈಸೂರು ದರ್ಶನಕ್ಕೆ 'ದರ್ಶಿನಿ' ಪ್ಯಾಕೇಜ್..!

By Web DeskFirst Published May 19, 2019, 5:07 PM IST
Highlights

ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಸೀಮಿತ ಅವಧಿಗೆ ವಿಶೇಷ ಪ್ರವಾಸದ ಪ್ಯಾಕೇಜ್ ಜಾರಿಗೆ ತಂದಿದೆ.

ಮೈಸೂರು, [ಮೇ.19] : ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) 'ದರ್ಶಿನಿ ಪ್ಯಾಕೇಜ್' ಎಂಬ ಪ್ಯಾಕೇಜ್ ಆರಂಭಿಸಿದೆ.

ಮೈಸೂರು ನಗರದ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಈ ಪ್ಯಾಕೇಜ್‌ ಆರಂಭಿಸಲಾಗಿದೆ. ಕರ್ನಾಟಕ ಸಾರಿಗೆ ಮತ್ತು ಹವಾನಿಯಂತ್ರಿತ (ವೋಲ್ವೋ) ಬಸ್‌ಗಳಲ್ಲಿ ಜನರು ಪ್ರಯಾಣ ಮಾಡುವ ಮೂಲಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.

ಕನ್ನಡ ಮಾಧ್ಯಮದಲ್ಲೇ ವಿಜ್ಞಾನ ಬೋಧಿಸುವ ರಾಜ್ಯದ ಮೊಟ್ಟ ಮೊದಲ ಕಾಲೇಜು ಮೈಸೂರಿನಲ್ಲಿ

ಸಾಮಾನ್ಯ ಸಾರಿಗೆ ಬಸ್‌ನಲ್ಲಿ ತಲಾ 200 ರೂ. ಹಾಗೂ ನಗರ ಸಾರಿಗೆ ವೋಲ್ವೊ ಬಸ್‌ನಲ್ಲಿ 300 ರೂ. ನಿಗದಿಪಡಿಸಲಾಗಿದ್ದು, ಈ ಪ್ಯಾಕೇಜ್ ಅನ್ನು ಮೈಸೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಪಡೆದುಕೊಳ್ಳಬಹುದು. 

ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳು
ಈ ದರ್ಶಿನಿ ಪ್ಯಾಕೇಜ್‍ನಲ್ಲಿ ಚಾಮುಂಡಿಬೆಟ್ಟ, ಮರಳು ಕಲೆಗಳ ಸಂಗ್ರಹಾಲಯ, ಪ್ರಾಕೃತೀಕ ಮತ್ತು ಐತಿಹಾಸಿಕ ಸಂಗ್ರಹಾಲಯ, ಮೃಗಾಲಯ, ಮೈಸೂರು ಅರಮನೆ, ಮತ್ತು ಕೃಷ್ಣರಾಜ ಬೃಂದಾವನನ್ನು ವೀಕ್ಷಿಸಬಹುದು.  ಮೇ 17 ರಂದೇ ದರ್ಶಿನಿ ಪ್ಯಾಕೇಜ್‌ಗೆ ಚಾಲನೆ ಸಿಕ್ಕಿದೆ. ಹಾಗಾದ್ರ ಇನ್ನೇಕೆ ತಡ ಹೊಡೀರಿ ಒಂದು ರೌಂಡು.

 ಹೆಚ್ಚಿನ ಮಾಹಿತಿಗಾಗಿ ಸಹಾಯ ಸಂಚಾರ ವ್ಯವಸ್ಥಾಪಕ ಎಸ್.ಡಿ.ದಿನೇಶ್‍ಕುಮಾರ್, ಮೊ: 7760990761ನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!