ಕೊಡಗು: ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರ ಸಾವು

Published : May 19, 2019, 03:42 PM IST
ಕೊಡಗು: ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರ ಸಾವು

ಸಾರಾಂಶ

ಕಾಫಿ ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ  ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕೊಡಗು, [ಮೇ.19] : ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು [ಭಾನುವಾರ] ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. 

ತಮ್ಮಯ್ಯ, ಅನಿಲ್ ಹಾಗೂ ಕವಿತಾ ಮೃತ ದುರ್ದೈವಿಗಳು.   ಮಡಿಕೇರಿ ತಾಲೂಕಿನ ದೊಡ್ಡಪುಲಿಕೋಟು ಗ್ರಾಮದ ಕೆ.ಸುರೇಶ್ ಎಂಬವವರ ಕಾಫಿ ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ, ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿ ಈ ದುರ್ಘಟನೆ ಸಂಭವಿಸಿದೆ. 

ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಕವಿತಾ ಎಂಬುವವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು, ಸುನಿತಾ(32) ಎಂಬವವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

PREV
click me!

Recommended Stories

Hassan: ನಮ್ಮ ಮನೆ ಮುಂದೆ ಹೆಣ ತೆಗೆದುಕೊಂಡು ಹೋಗಬೇಡಿ: ರಸ್ತೆ ತಡೆದ ಗ್ರಾಮಸ್ಥರು!
ನೀಲಕುರಂಜಿ: ವಿಶ್ವದ ಅಪರೂಪದ ಹೂ! 2030ಕ್ಕೆ ಅರಳಬೇಕಿದ್ದ ಹೂ 2026ರಲ್ಲೇ ಅರಳಿದೆ!