ರಸ್ತೆಯಲ್ಲಿ ಹುಟ್ಟು ಹಬ್ಬ ಅಚರಿಸಲು ಹೋಗಿ ಮಸಣ ಸೇರಿದ್ರು!

Published : May 19, 2019, 02:54 PM IST
ರಸ್ತೆಯಲ್ಲಿ ಹುಟ್ಟು ಹಬ್ಬ ಅಚರಿಸಲು ಹೋಗಿ ಮಸಣ ಸೇರಿದ್ರು!

ಸಾರಾಂಶ

ತಡ ರಾತ್ರಿ ಬೀಕರ ರಸ್ತೆ ಅಪಘಾತ, ಸ್ಥಳದಲ್ಲಿ  ನಾಲ್ವರು ಯುವಕರ ದುರ್ಮರಣ| ತಡ ರಾತ್ರಿ ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಿಸುವಾಗ ನಡೆದ ದುರ್ಘಟನೆ| ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲು

ಬೀದರ್[ಮೇ.19]: ತಡ ರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸಲು ಹೋದ ನಾಲ್ವರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಬೀದರ್ ಜಿಲ್ಲೆ  ಹುಮನಾಬಾದ ತಾಲೂಕಿನ ಮಂಗಲಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಚಿನ ಹಣಮಂತ, ಅರುಣಕುಮಾರ ಕಾಶಿನಾಥ, ಗುರುನಾಥ  ವಿಠಲ,  ರಘುವೂರ ಭೀಮಶ್ಯಾ ಎಂಬ ನಾಲ್ವರು ಯುವಕರು ಕೊನೆಯುಸಿರೆಳೆದಿದ್ದಾರೆ.  ಮೃತ ಯುವಕರೆಲ್ಲರೂ 18ರಿಂದ 19 ವರ್ಷ ವಯಸ್ಸಿನವರು. 

ಹುಟ್ಟು ಹಬ್ಬ ಆಚರಿಸಲು ಇವರೆಲ್ಲರೂ ತಡರಾತ್ರಿ ಹೆದ್ದಾರಿ ಪಕ್ಕಕ್ಕೆ ಬಂದ ಸಂದರ್ಭದಲ್ಲಿ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.  ಮನ್ನಾಖೇಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!