ಚರಂಡಿ ಹೂಳು ಉದ್ಯಾನಕ್ಕೆ ಬಳಸಿಕೊಳ್ಳಲು ಮುಂದಾಗ ಕಾರವಾರ ನಗರಸಭೆ

Published : Feb 16, 2023, 09:19 AM IST
ಚರಂಡಿ ಹೂಳು ಉದ್ಯಾನಕ್ಕೆ ಬಳಸಿಕೊಳ್ಳಲು ಮುಂದಾಗ ಕಾರವಾರ ನಗರಸಭೆ

ಸಾರಾಂಶ

ನಗರದಲ್ಲಿರುವ ಚರಂಡಿಯಿಂದ ತೆಗೆಯಲಾದ ಹೂಳನ್ನು ಉದ್ಯಾನ, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ಆಲಂಕಾರಿಕ ಗಿಡಗಳಿಗೆ ಬಳಕೆ ಮಾಡಿಕೊಳ್ಳಲು ನಗರಸಭೆಯಿಂದ ಸಿದ್ಧತೆ ನಡೆದಿದೆ.

ಜಿ.ಡಿ. ಹೆಗಡೆ

 ಕಾರವಾರ (ಫೆ.16) : ನಗರದಲ್ಲಿರುವ ಚರಂಡಿಯಿಂದ ತೆಗೆಯಲಾದ ಹೂಳನ್ನು ಉದ್ಯಾನ, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ಆಲಂಕಾರಿಕ ಗಿಡಗಳಿಗೆ ಬಳಕೆ ಮಾಡಿಕೊಳ್ಳಲು ನಗರಸಭೆಯಿಂದ ಸಿದ್ಧತೆ ನಡೆದಿದೆ.

ಉದ್ಯಾನ, ಆಲಂಕಾರಿಕ ಗಿಡಗಳಿಗೆ ಬೃಹತ್‌ ಪ್ರಮಾಣದಲ್ಲಿ ಮಣ್ಣು ಹಾಗೂ ಗೊಬ್ಬರ ಬೇಕಾಗುತ್ತದೆ. ಹೊರಗಡೆಯಿಂದ ತರಿಸಿ ಬಳಕೆ ಮಾಡಿಕೊಳ್ಳುವ ಬದಲು ಚರಂಡಿ, ನಾಲಾಗಳ ಫಲವತ್ತಾದ ಮಣ್ಣನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಕ್‌ ಗಾರ್ಡನ್‌, ಆರ್‌ಟಿಒ ಕಚೇರಿ, ದಿವೇಕರ ವಾಣಿಜ್ಯ ಮಹಾವಿದ್ಯಾಲಯ ಒಳಗೊಂಡು ಬಿಣಗಾದಿಂದ ಕಾಳಿ ನದಿ ವರೆಗೆ ನಗರಸಭಾ ವ್ಯಾಪ್ತಿಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಕಾಶ ಇರುವ ಕಡೆ ರಸ್ತೆಯ ಪಕ್ಕದಲ್ಲಿ ಅಲಂಕಾರಿಕ ಗಿಡ ನಿರ್ಮಾಣ ಮಾಡಿ ಅದಕ್ಕೆ ಈ ಹೂಳೆತ್ತಿದ ಮಣ್ಣನ್ನು ಹಾಕಲು ಚಿಂತನೆ ನಡೆದಿದೆ.

 

ಕಾಂಗ್ರೆಸ್‌ ಭಯೋತ್ಪಾದನಾ ಸಂಘಟನೆ: ನಳಿನ್ ಕುಮಾರ್ ಕಟೀಲ್‌

ಈ ಹಿಂದೆಯೂ ಸದ್ಬಳಕೆಯಾಗಿತ್ತು:

ಕಾರವಾರ ನಗರಸಭೆ(Karwar Municipality) 200 ಕಿ.ಮೀ. ಚರಂಡಿ ಹೊಂದಿದೆ. ಇದರಿಂದ ಹೂಳನ್ನು ತೆಗೆದರೆ ಅಂದಾಜು 2-3 ಸಾವಿರ ಲೋಡ್‌ ಮಣ್ಣು ಸಿಗುವ ಸಾಧ್ಯತೆಯಿದೆ. ಈ ಹಿಂದೆ ಈ ರೀತಿ ತೆಗೆಯಲಾದ ಮಣ್ಣನ್ನು ತಗ್ಗು ಪ್ರದೇಶವನ್ನು ಮುಚ್ಚಲು ಕೂಡ ಬಳಕೆ ಮಾಡಿಕೊಳ್ಳಲಾಗಿತ್ತು.

ಬಳಿಕ ವಿಲೇವಾರಿಗೆ ಸ್ಥಳದ ಸಮಸ್ಯೆ ಆರಂಭವಾಗಿತ್ತು. ಇದನ್ನು ಬಗೆಹರಿಸಲು ಗಿಡಗಳಿಗೆ ಬಳಕೆ ಮಾಡಿಕೊಳ್ಳಲು ನೀಲನಕ್ಷೆ ತಯಾರಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಗಳಿಗೆ ಬಳಕೆ ಮಾಡುವುದರಿಂದ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ. ಚರಂಡಿಯಲ್ಲಿ ಕೊಳೆತು ಗೊಬ್ಬರವಾಗಿ ಮಾರ್ಪಡುವುದರಿಂದ ಗಿಡಗಳಿಗೂ ಕೂಡ ಪೋಷಕಾಂಶ ಸಿಗಲಿದೆ.

ನಗರಸಭೆಯಿಂದ ಈಗಾಗಲೇ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಹಾಗೂ ಶಾಸಕರ ಕಚೇರಿ ಹಿಂಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಇದಲ್ಲದೇ ನಗರದ ವಿವಿಧೆಡೆ ಉದ್ಯಾನ ನಿರ್ಮಾಣ ಮಾಡಲಾಗಿದೆ. ವಾಯುವಿಹಾರಕ್ಕೆ ಅನುಕೂಲ ಆಗುವಂತೆ ವ್ಯವಸ್ಥೆ ಕೂಡ ಮಾಡಲಾಗಿದೆ. ರಾಕ್‌ ಗಾರ್ಡನ್‌ ಪಕ್ಕದ ತಡೆಗೋಡೆ ಸಮೀಪ ಅಲ್ಲಲ್ಲಿ ಬೋಗನ್‌ ವಿಲ್ಲಾ, ಕರವೀರ ಗಿಡ ಒಳಗೊಂಡು ಜಾನುವಾರು ತಿನ್ನದ ಆಲಂಕಾರಿಕ ಗಿಡ ಬೆಳೆಸಲಾಗುತ್ತಿದೆ. ಇದೇ ರೀತಿ ಬಿಣಗಾದಿಂದ ಕಾಳಿ ನದಿ ವರೆಗೆ ಗಿಡ ಬೆಳೆಸಲಾಗುತ್ತದೆ.

ಚರಂಡಿಯ ಮಣ್ಣನ್ನು ಬಳಕೆ ಮಾಡುವುದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ದುರ್ನಾತ ಇರುವುದಿಲ್ಲ. ಒಣ ಮಣ್ಣನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತದೆ. ಹಸಿಯಾಗಿರುವ ಮಣ್ಣನ್ನು ಒಣಗಿಸಿದ ಬಳಿಕವೇ ಉಪಯೋಗಿಸಲಾಗುತ್ತದೆ. ಯಾವುದೇ ರೀತಿಯ ತೊಂದರೆ ಸಾರ್ವಜನಿಕರಿಗೆ ಆಗುವುದಿಲ್ಲ ಎಂದು ಪೌರಾಯುಕ್ತ ಆರ್‌.ಪಿ. ನಾಯ್ಕ ಹೇಳುತ್ತಾರೆ.

ಕಾರವಾರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಕಾಂಗ್ರೆಸ್, ಜೆಡಿಎಸ್ ವಿರುದ್ಧ ನಳಿನ್ ವಾಗ್ದಾಳಿ

ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಸಾಗುವಾಗ ರಸ್ತೆಗಳ ಪಕ್ಕದಲ್ಲಿ ಇರುವ ಈ ಆಲಂಕಾರಿಕ ಗಿಡಗಳು ಕಣ್ಮನ ಸೆಳೆಯುತ್ತವೆ. ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ವಿವಿಧೆಡೆ ಜಾನುವಾರು ತಿನ್ನದಂತಹ ಆಲಂಕಾರಿಕ ಗಿಡವನ್ನು ನೆಟ್ಟು ಪೋಷಣೆ ಮಾಡಿ ಅದಕ್ಕೆ ಚರಂಡಿ, ನಾಲಾದ ಮಣ್ಣನ್ನು ಹಾಕಲಾಗುತ್ತದೆ. ಇದರಿಂದ ಮಣ್ಣಿನ ವಿಲೇವಾರಿ ಸಮಸ್ಯೆಯೂ ತಪ್ಪುತ್ತದೆ. ಸದುಪಯೋಗವೂ ಆಗುತ್ತದೆ.

ಆರ್‌.ಪಿ. ನಾಯ್ಕ, ನಗರಸಭೆ ಪೌರಾಯುಕ್ತ

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC