: ಮಹದಾಯಿ ವಿಷಯವಾಗಿ ಬಿಜೆಪಿ ಬರೀ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕೂಡಲೇ ಯೋಜನೆ ಹಾಗೂ ಸದ್ಯದ ಸ್ಥಿತಿಗತಿ ಕುರಿತು ಈ ಅಧಿವೇಶನದಲ್ಲೇ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಒತ್ತಾಯಿಸಿದರು.
ಹುಬ್ಬಳ್ಳಿ (ಫೆ.16) : ಮಹದಾಯಿ ವಿಷಯವಾಗಿ ಬಿಜೆಪಿ ಬರೀ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕೂಡಲೇ ಯೋಜನೆ ಹಾಗೂ ಸದ್ಯದ ಸ್ಥಿತಿಗತಿ ಕುರಿತು ಈ ಅಧಿವೇಶನದಲ್ಲೇ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ(HK Patil) ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷ್ಕೃತ ಡಿಪಿಆರ್ ಪ್ರತಿ ತೋರಿಸಿ ಇನ್ನೇನು ಮಹದಾಯಿ ಯೋಜನೆ(Mahadayi project)ಗೆ ಯಾವುದೇ ಅಡ್ಡಿ ಇಲ್ಲ ಎಂಬಂತೆ ಬಿಂಬಿಸಿದರು. ಜತೆಗೆ ವಿಜಯೋತ್ಸವವನ್ನೇ ಮಾಡಿದರು. ಮಹದಾಯಿ ಯೋಜನೆಯನ್ನು ನಾವೇ ತಂದಿದ್ದು ಎನ್ನುವ ರೀತಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದರು. ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಘೋಷಿಸಿದರು. ಈವರೆಗೆ ಕಾಮಗಾರಿ ಆರಂಭಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗ ಎಲ್ಲಿ ಹೋಯಿತು ಬಿಜೆಪಿ ನಾಯಕರ ಪೌರುಷ? ಎಂದು ಪ್ರಶ್ನಿಸಿದರು.
ಹೆಚ್.ಕೆ. ಪಾಟೀಲರಿಗೆ ಮನೆ ಇಲ್ವಾ- ಕೃಷಿ ವಿಜ್ಞಾನ ಕೇಂದ್ರದಲ್ಯಾಕೆ ಮಲ್ಕೊತಾರೆ : ಅನಿಲ್ ಮೆಣಸಿನಕಾಯಿ ಪ್ರಶ್ನೆ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಅವರು ಚಳಿಗಾಲದ ಅಧಿವೇಶನದ ಕೊನೆ ದಿನ ತರಾತುರಿಯಲ್ಲಿ ಕಳಸಾ-ಬಂಡೂರಿ ಕುರಿತು ಅನುಮೋದನೆಯ ಪತ್ರವನ್ನು ಅದರಲ್ಲಿ ಸಂಖ್ಯೆ, ದಿನಾಂಕ ನೋಡದೇ ಬಿಡುಗಡೆ ಮಾಡಿದ್ದಾರೆ. ಆನಂತರ ನಾವು ವಿರೋಧ ಮಾಡಿದ್ದಕ್ಕೆ ಕಣ್ಣಿಲ್ಲ, ಕಿವಿಯಿಲ್ಲ ಎಂದು ಅಪಹಾಸ್ಯ ಮಾಡಿದರು. ಆದರೆ ಈವರೆಗೆ ಕಾಮಗಾರಿ ಕುರಿತು ಯಾವುದೇ ಬೆಳವಣಿಗೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಳಿನ ಸರಮಾಲೆ ಕಟ್ಟಿಜನರಿಗೆ ಮೋಸ ಮಾಡುತ್ತಿದ್ದಾರೆ. ಪ್ರಹ್ಲಾದ ಜೋಶಿ ಹಾಗೂ ನಾವೇ ಕರ್ನಾಟಕಕ್ಕೆ ಮಹದಾಯಿ ಕೊಡುಗೆ ನೀಡಿದ್ದೇವೆ. ನಮ್ಮದೇ ಯೋಜನೆಯೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಈ ಇಬ್ಬರೂ ಜನರಲ್ಲಿ ಕ್ಷಮೆ ಕೇಳಬೇಕು. ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿ ಈವರೆಗೂ ಆರಂಭಗೊಳಿಸದಿರುವುದಕ್ಕೆ ಕಾರಣವೇನು? ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳಲು ಆರಂಭಿಸುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಎಚ್ಚರಿಕೆ ಕೊಡುತ್ತಾ ಬಂದಿದೆ. ಅಷ್ಟೇ ಏಕೆ ಮಾರ್ಗದರ್ಶನ, ಟೀಕೆ, ಟಿಪ್ಪಣಿ ಸೇರಿದಂತೆ ಬೃಹತ್ ರಾರಯಲಿ ಮಾಡಿ ಜನಮನದಲ್ಲಿರುವ ಅಭಿಪ್ರಾಯವನ್ನು ಜನರ ಒಳಿತಿಗಾಗಿ ತಿಳಿಸಿಕೊಟ್ಟಿದ್ದೇವೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿದ್ದೇವೆ. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಿಂದ ಹಿಡಿದು ಕಾನೂನು ಮಾಡುವವರೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮತ ಕೇಳುವ ನೈತಿಕತೆ ಇಲ್ಲ:
ಪ್ರಹ್ಲಾದ ಜೋಶಿ ಅವರು ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮತಿಯೇ ಬೇಕಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಕೋರ್ಟ್ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಒಂದು ವೇಳೆ ಯೋಜನೆ ಕುರಿತಾಗಿ ಸ್ಪಷ್ಟತೆ ತೋರದಿದ್ದಲ್ಲಿ ಅವರಿಗೆ ಜನರ ಬಳಿ ಹೋಗಲು ಯಾವುದೇ ನೈತಿಕತೆ ಇರುವುದಿಲ್ಲ. ರಾಜ್ಯ ಸರ್ಕಾರ ಜನರನ್ನು ದಾರಿ ತಪ್ಪಿಸುವುದನ್ನು ಬಿಟ್ಟು ರೈತರಿಗೆ ನೀರು ಒದಗಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ನಾವು ಹೋರಾಟ ಮುಂದುವರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಎಚ್ಚರಿಸಿದರು.
ಕಳಸಾ ಬಂಡೂರಿ ಯೋಜನೆ ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರು, ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿಘಿ ಸೇರಿದಂತೆ ಅನೇಕರಿದ್ದರು.
ಮಾರ್ಚ್ ಮೊದಲ ವಾರ ಕಾಂಗ್ರೆಸ್ ಪಟ್ಟಿ:
ಈಗಾಗಲೇ 150ಕ್ಕೂ ಹೆಚ್ಚು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ನೂರು ಕ್ಷೇತ್ರಗಳಲ್ಲಿ ಒಂದೇ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ತಿಂಗಳ ಕೊನೆಯಲ್ಲಿ ಎಐಸಿಸಿ ಅಧಿವೇಶನ ನಡೆಯಲಿದ್ದು, ಅದಾದ ಮೇಲೆ ಇನ್ನೊಂದು ಬಾರಿ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ನಡೆಸಿ ಮಾಚ್‌ರ್ ಮೊದಲ ವಾರದಲ್ಲಿ ಕಾಂಗ್ರೆಸ್ಸಿನ ಮೊದಲ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ ತಿಳಿಸಿದರು.