ಚಿಕ್ಕಬಳ್ಳಾಪುರ (ಡಿ.02): ವಿಧಾನ ಪರಿಷತ್ತು ಚುನಾವಣೆ (MLC Election ) ಎರಡು ಜಿಲ್ಲೆಗಳಲ್ಲಿ ಹೊಸ ರಾಜಕೀಯ (Politics) ಧ್ರುವೀಕರಣಕ್ಕೆ ಸಾಕ್ಷಿಯಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ (congress), ಜೆಡಿಎಸ್ (JDS), ಬಿಜೆಪಿ(BJP) ಮೂರು ಪಕ್ಷಗಳಲ್ಲಿ ರಾಜಕೀಯ (Politics) ತಂತ್ರ, ಪ್ರತಿತಂತ್ರ ಜೋರಾಗಿದ್ದು ಚುನಾವಣೆ (Election) ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ಮೂರು ಪಕ್ಷಗಳು ಚುನಾವಣಾ ತಂತ್ರಗಾರಿಕೆ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಚುನಾವಣೆ ಪಕ್ಷಾಂತರ ಪರ್ವಕ್ಕೆ ನಾಂದಿಹಾಡುತ್ತಿದೆ.
ಹೌದು, ವಿಧಾನ ಪರಿಷತ್ತು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿ ಇದೀಗ ಮೂರು ಪಕ್ಷಗಲ್ಲಿ ಚುನಾವಣಾ ಪ್ರಚಾರ ಭರಾಟೆ ಜೋರಾದಂತೆ ಪಕ್ಷಗಳಿಂದ ಮುಖಂಡರ ಪಕ್ಷಾಂತರ ಪರ್ವ ಆರಂಭವಾಗಿದೆ.
ಬಿಜೆಪಿ, ಕಾಂಗ್ರೆಸ್‌ಗೆ ವಲಸೆ: ಈಗಾಗಲೇ ಸತತ ಎರಡು ಚುನಾವಣೆಗಳಲ್ಲಿ (Election) ಪಕ್ಷೇತರನಾಗಿ ಸ್ಪರ್ಧಿಸಿ ಸೋತಿದ್ದ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ (MC Sudhakar), ಕಾಂಗ್ರೆಸ್ (Congress) ಹೊಸ್ತಿಲಲ್ಲಿ ನಿಂತು ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್‌ಗೆ (Anil Kumar) ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅದೇ ರೀತಿ ಕೋಲಾರ ಜೆಡಿಎಸ್ (JSD) ಶಾಸಕ ಕೆ.ಶ್ರೀನಿವಾಸಗೌಡ, ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್‌ನತ್ತ ಮುಖ ಮಾಡಿದರೆ ಮಾಲೂರಿನ ಜೆಡಿಎಸ್‌ನ ಮಾಜಿ ಶಾಸಕ ಮಂಜುನಾಥಗೌಡ ಕಮಲ ಪಾಳೆಯದಲ್ಲಿ (BJP) ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಕಮಲ ಪಡೆ ಸೇರಿದ್ದಾರೆ.
ಇನ್ನು ಮುಳಬಾಗಿಲಿನ ಮಾಜಿ ಶಾಸಕ ಕೊತ್ತನೂರು ಮಂಜುನಾಥ ಕೂಡ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್‌ಗೆ (Anil Kumar) ಬೆಂಬಲವಾಗಿದ್ದಾರೆ. ಇನ್ನೂ ಕಳೆದ ಬಾರಿ ಜೆಡಿಎಸ್‌ನ ಸಿ.ಆರ್.ಮನೋಹರ್ ಗೆಲುವುಗೆ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲೆಯ ಶಿಡ್ಲಘಟ್ಟದ ಜೆಡಿಎಸ್‌ನ ಮಾಜಿ ಶಾಸಕ ಎಂ.ರಾಜಣ್ಣ, ಈಗಾಗಲೇ ಬಿಜೆಪಿ ಸೇರಿಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಗ್ರೆಸ್ ಹೊಸ್ತಿಲಲ್ಲಿದ್ದಾರೆ.
2023ರ ಚುನಾವಣೆ ಮೇಲೆ ಕಣ್ಣು: ಈಗಾಗಿ ಮುಂದಿನ 2023ರ ವಿಧಾನಸಭೆಯ (Assembly Election) ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈಗನಿಂದಲೇ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲ ಪಕ್ಷಗಳಲ್ಲಿ ಗೆದ್ದಿದ್ದ ಮಾಜಿ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು, ವಿಧಾನ ಪರಿಷತ್ತು ಚುನಾವಣೆಯಲ್ಲಿ ಪಕ್ಷಗಳಿಗೆ ಪಕ್ಷಾಂತರ ಮಾಡುವ ಮೂಲಕ ಎರಡು ಜಿಲ್ಲೆಗಳಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ವಿಧಾನ ಪರಿಷತ್ತು ಚುನಾವಣೆ ಸಾಕ್ಷಿಯಾಗುತ್ತಿದ್ದು ಪ್ರಚಾರದ ಭರಾಟೆ ಮುಗಿಯುವವರೆಗೂ ಇನ್ನೂ ಏನೆಲ್ಲಾ ಬೆಳೆವಣಿಗೆಗಳು ನಡೆಯುತ್ತವೆಯೋ ಕಾದು ನೋಡಬೇಕಿದೆ.
ಮನೋಹರ್ ಜೆಡಿಎಸ್‌ಗೆ : ಕಳೆದ ಬಾರಿ ಕೋಲಾರ (kolar) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುಗೆ ಸ್ಪರ್ಧಿಸಿ ಜೆಡಿಎಸ್‌ನಿಂದ (JDS) ಗೆಲುವು ಸಾಧಿಸಿದ್ದ ಸಿ.ಆರ್.ಮನೋಹರ್ (CR Manohar) ಡಿ.2 ರಂದು ಕಾಂಗ್ರೆಸ್ (congress) ಪಕ್ಷ ಸೇರ್ಪಡೆ ಗೊಳ್ಳಲಿದ್ದಾರೆಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ(Veerappa Moily) ಖಚಿತಪಡಿಸಿದರು. ಚಿಕ್ಕಬಳ್ಳಾಪುರ (Chikkaballapura) ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ(Election Campaign) ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಎಂ.ವೀರಪ್ಪ ಮೊಯ್ಲಿ ಈ ವಿಚಾರ ಪ್ರಸ್ತಾಪಿಸಿದರು. ಸಿ.ಆರ್.ಮನೋಹರ್ ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದು ಡಿ.2 ರಂದು ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ (congress) ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆಂದು ಮೊಯ್ಲಿ ತಿಳಿಸಿದರು. ಅಲ್ಲದೇ ಪಕ್ಷ ಬಿಟ್ಟು ಹೋಗಿರುವ ಎಲ್ಲಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬಂದು ಸೇರಿಕೊಳ್ಳಬಹುದೆಂದರು.
ಜೆಡಿಎಸ್ ತೊರೆದು ಶಾಕ್: ಜೆಡಿಎಸ್‌ನ (JDS) ಮತ್ತೊಂದು ವಿಕೆಟ್ ಪತನವಾಗಿದೆ. ಅವಧಿ ಮುಗಿಯುವ ಮೊದಲೇ ಜೆಡಿಎಸ್ ನಾಯಕ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಅಲ್ಲದೇ ವಿಧಾನ ಪರಿಷತ್ ಚುನಾವಣೆ (MLC Election) ಮಧ್ಯೆಯೇ ಸಿ.ಆರ್. ಮನೋಹರ್ (CR Manohar) ಜೆಡಿಎಸ್ (JDS) ಪ್ರಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ(resign) ನೀಡಿದ್ದು, ದಳಪತಿಗಳಿಗೆ ಆಘಾತವಾಗಿದೆ.